ಬೆಂಗಳೂರ: ಕೀರ್ತನಾ ಮೂವ್ಹಿ ಮಾರ್ಸ್ ಅವರ ಲೋಕೇಶ್ ವಿದ್ಯಾಧರ ಅವರ ನಿರ್ದೇಶನದ ‘ಒಬ್ಬಟ್ಟು’ ನಗೆ ಹೂರಣದ ಹಬ್ಬ ಕನ್ನಡ ಚಲನಚಿತ್ರದ ಡಬ್ಬಿಂಗ್ ಕಾರ್ಯ(ಧ್ವನಿಮುದ್ರಣ ಕಾರ್ಯ) ಮುಕ್ತಾಗೊಂಡಿದೆ. ಹಾಸ್ಯಭರಿತ ಕಥಾಸಾರ ಹೊಂದಿದ ಈ ‘ಒಬ್ಬಟ್ಟು’ ಚಿತ್ರೀಕರಣವನ್ನು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿ ಸಾಗ್ಯ ಸರಗೂರು ಗ್ರಾಮದಲ್ಲಿ ಮಾಡಲಾಗಿದೆ. ಯುಗಾದಿ ಹಬ್ಬದಲ್ಲಿ ನಡೆಯವ ಒಂದು ಪ್ರೇಮ ಕಥೆ. ಇಬ್ಬರು ಪ್ರೇಮಿಗಳ ಮಧ್ಯೆ ಬೀಳುವ ಒಂದು ಹೆಣದ ಸುತ್ತ ನಡೆಯುವ ಹಾಸ್ಯ ಭರಿತ ಚಿತ್ರ ಇದಾಗಿದ್ದು ಕೊಲೆ ಹೇಗಾಯಿತು ? ಯಾಕಾಯಿತು ? ಎನ್ನುವ ಕುತೂಹಲದ ನಡುವೆ ಕೊಲೆರಹಸ್ಯ ಭೇದಿಸುವ ಒಂದು ಹಾಸ್ಯಪೂರಿತ ಮನರಂಜನೆಯನ್ನೊಳಗೊಂಡ ಕಥೆ. ಒಬ್ಬಟ್ಟಿನ ರುಚಿಯನ್ನು ಥೇಟರಗಳಲ್ಲೇ ಪ್ರೇಕ್ಷಕರು ಬಂದು ನಗೆಹೂರಣದ ಸವಿಯನ್ನು ಸವಿಯಬೇಕು ಎಂದು ನಿರ್ದೇಶಕ ಲೋಕೇಶ ವಿದ್ಯಾಧರ ಹೇಳುತ್ತಾರೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಸರಳ ಸುಂದರ ನಾಯಕ ಅಮೀತ್‌ರಾವ್, ನಗು ಮೊಗದ ಚೆಲುವೆ ಕಿರುತೆರೆ,ಚಲನಚಿತ್ರ ಕಲಾವಿದೆ ಸುನಂದ ಕಲ್ಬುರ್ಗಿ, ಲೋಕೇಶ್ ವಿದ್ಯಾಧರ, ಮಂಡ್ಯ ನಾಗರಾಜ್, ಮುತ್ತುರಾಜ್.ಟಿ, ರಾಜು ಅರಸಿಕೆರೆ, ರೋಹಿಣಿ, ಧನಲಕ್ಷ್ಮೀ, ಸತೀಶ್ ಶೆಟ್ಟಿ, ರವಿ ,ನಂಜಪ್ಪ ಡಿ.ಎಸ್ ಮುಂತಾದವರು ಅಭಿನಯಿಸಿದ್ದಾರೆ.ತಾಂತ್ರಿಕ ವರ್ಗದಲ್ಲಿ ಒಬ್ಬಟ್ಟನ್ನು ತನ್ನ ಕಣ್ಣಂಚಿನಲ್ಲಿ ಸರೆಹಿಡಿದವರು ( ಛಾಯಾಗ್ರಹಣ) ಬೆಟ್ಟೇಗೌಡ ಕೀಲಾರ , ಒಬ್ಬಟ್ಟೆಂದು ಅಬ್ಬರಿಸಿ ಬೊಬ್ಬರಿದವರು (ಸ್ವರ ಸಂಯೋಜನೆ ಮತ್ತು ಹಾಡುಗಾರಿಕೆ) ಎ.ಪಿ.ರವಿಕೀರ್ತಿ , ಒಬ್ಬಟ್ಟನ್ನು ದಬಾಕಿದವರು (ನೃತ್ಯ ) ಅಲ್ಲಿನ್.ಎ , ಒಬ್ಬಟ್ಟಿಗೆ ಮೈದಾ ಮಿದ್ದಿದವರು (ಸಾಹಸ) ಸೂರ್ಯ , ಒಬ್ಬಟ್ಟಿನ ರೂಪಕೊಟ್ಟವರು (ಸಂಕಲನ ) ಸಂಜೀವರೆಡ್ಡಿ , ಒಬ್ಬಟ್ಟಿಗೆ ಬಣ್ಣ ಹಂಚಿದವರು ಯತೀಶ, ಒಬ್ಬಟ್ಟು ಒಬ್ಬಟ್ಟೆಂದು ಗಲ್ಲಿ ಗಲ್ಲಿಗೆ ಸುದ್ದಿ ಗುಲ್ಲೆಬ್ಬಿಸಿದವರು (ಪತ್ರಿಕಾ ಸಂಪರ್ಕ )ಡಾ.ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ , ಒಬ್ಬಟ್ಟಿಗೆ ರುಚಿಕೊಟ್ಟವರು (ಸಹಕಾರ )ಆನಂದ ಆರ್ಟ್ಸ್ , ಒಬ್ಬಟ್ಟು ತಯಾರಿಸಲು ಸಹಾಯ ಮಾಡಿದವರು (ಸಹ ನಿರ್ದೇಶಕ) ವಿಷ್ಣುವರ್ಧನ , ಒಬ್ಬಟ್ಟಿಗೆ ತುಪ್ಪಸುರಿದವರು (ಸಹ ನಿರ್ಮಾಪಕರು ) ಸುನಂದ ಕಲ್ಬುರ್ಗಿ, ಜೀವನ್ ಕುಮಾರ್. ಬಿ.ಆರ್ , ಒಬ್ಬಟ್ಟಿನ ರೂಪ ವೇಷ ಕೊಟ್ಟವರು ( ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ) ಲೋಕೇಶ್ ವಿದ್ಯಾಧರ , ಒಬ್ಬಟ್ಟಿಗೆ ಬೇಳೆ ,ಬೆಲ್ಲ ,ಕಾಯಿ ಕೊಡಿಸಿದವರು ( ನಿರ್ಮಾಪಕರು ) ಲೋಕೇಶ್ ವಿದ್ಯಾಧರ ಆಗಿದ್ದಾರೆ.
ವರದಿ: ಡಾ.ಪ್ರಭು ಗಂಜಿಹಾಳ