ಬೆಂಗಳೂರ : ಭಕ್ತಿ ಪ್ರಧಾನ ಚಿತ್ರಗಳು ಕಡಿಮೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ‘ಸಿಂಹರೂಪಿಣಿ’ ಎನ್ನುವ ಭಕ್ತಿಪ್ರಧಾನ ಚಿತ್ರವೊಂದು ಯರಪ್ಪನಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮದೇವಿ ಸನ್ನಿಧಿಯಲ್ಲಿ ಅದ್ದೂರಿಯಾಗಿ ಮುಹೂರ್ತದ ಚಿತ್ರಿಕರಣಕ್ಕೆ ಚಾಲನೆ ದೊರಕಿದೆ.
ಈಗಾಗಲೇ ಕೆಜಿಎಫ್ ,ಕಬ್ಜ , ಜಂಟಲ್‌ಮ್ಯಾನ್, ಮದಗಜ ಚಿತ್ರಗಳ ಮೂಲಕ ಚಿರಪರಿಚಿತವಾಗಿರುವ ಚಿತ್ರಸಾಹಿತಿ ಕಿನ್ನಾಳ ರಾಜ್ ಅವರು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಚಕ್ರ ಫಿಲಂಸ್ ಲಾಂಛನದಲ್ಲಿ ಶ್ರೀಯುತ ಕೆ.ಎಂ.ನಂಜುಂಡೇಶ್ವರ ಅವರೆ ಕಥೆ ಬರೆದು ಚಿತ್ರ ನಿರ್ಮಾಣ ಮಾಡುತ್ತಿರುವ ಈ ಚಿತ್ರ ಶ್ರೀ ಮಾರಮ್ಮದೇವಿಯ ಭಕ್ತಿ ಪ್ರಧಾನ ಕಥೆ ಹೊಂದಿದ್ದು , ಪಕ್ಕಾ ಕಮರ್ಷಿಯಲ್ ಎಂಟ್ರಟೈನ್ಮೆಂಟ್ ಜೊತೆಗೆ ಅದ್ಧೂರಿ ಗ್ರಾಫಿಕ್ಸ್ ತಂತ್ರಜ್ಞಾನ ಚಿತ್ರವಾಗಲಿದೆ ಎನ್ನುವುದು ಚಿತ್ರತಂಡದ ಮಾತು.
ಚಿತ್ರದಲ್ಲಿ ದೊಡ್ಡ ತಾರಾಬಳಗವೆ ಇದೆ. ಹರೀಶ್ ರಾಯ್, ಯಶ್ ಶೆಟ್ಟಿ ,ದಿನೇಶ್ ಮಂಗಳೂರು, ಪುನೀತ್ ರುದ್ರನಾಗ್, ನೀನಾಸಂ ಅಶ್ವತ್ಥ್ ಅಂತಹ ಕೆಜಿಎಫ್ ಚಿತ್ರದ ಘಟಾನು ಘಟಿಗಳ ಜೊತೆಗೆ ತೆಲುಗಿನ ಸುಮನ್ ತಲ್ವಾರ್, ತಮಿಳಿನ ದಿನಾ ಕೂಡ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಸಾಗರ್ ಎನ್ನುವ ಹೊಸ ಹುಡುಗ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು. ಖ್ಯಾತ ನಿರೂಪಕಿ ಅಂಕಿತಾ ಗೌಡ ಅವರು ಈ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಯಶಸ್ವಿನಿ, ದಿವ್ಯಾ ಆಲೂರ ಭಜರಂಗಿ ಪ್ರಸನ್ನ, ಬಲರಾಜ ವಾಡಿ. ವಿಜಯ್ ಚಂಡೂರ್, ಗಣೇಶ್‌ರಾವ್ ಕೇಸರಕರ, ಮನಮೋಹನ್ ರೈ , ಆರವ್ ಲೋಹಿತ್, ಪಿಳ್ಳಣ್ಣ, ಕೆಂಪೇಗೌಡ, ಬಿಗ್‌ಬಾಸ್ ಖ್ಯಾತಿಯ ಸೋನು ಪಾಟೀಲ್, ರಿಲ್ಸ್ ಹಾಗೂ ಶಾರ್ಟ್ ಫಿಲಂಸ್ ಮೂಲಕ ಮನೆ ಮಾತಾಗಿರುವ ಭೂಮಿಕಾ ಮಂಜುನಾಥ್, ಹಾಗೂ ಮಧುಶ್ರೀ, ರಾಶೀಕ , ಯುಕ್ತ ಮಲ್ನಾಡ್, ವೇದಾ ಹಾಸನ್, ಸುನಂದಾ ಕಲ್ಬುರ್ಗಿ ಇನ್ನು ಅನೇಕ ಕಲಾವಿದರು ನಟಿಸುತ್ತಿದ್ದಾರೆ.
ಆಕಾಶ ಪರ್ವ ಸಂಗೀತ, ನಂದಕುಮಾರ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ, ಅರುಣ್ ರೈ ನೃತ್ಯ ,ಚಂದ್ರು ಬಂಡೆ ಸಾಹಸ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕೆ. ಬಾಲಸುಬ್ರಹ್ಮಣ್ಯಂ , ಪಿ.ಆರ್.ಓ ಆರ್.ಚಂದ್ರಶೇಖರ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ್ , ಡಾ. ವೀರೇಶ್ ಹಂಡಗಿ ಅವರದಿದೆ.
ವರದಿ :ಡಾ.ಪ್ರಭು ಗಂಜಿಹಾಳ.