ಇಂದು ಕರ್ನಾಟಕದ ಮಾನ್ಯ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರಿಂದ ಅಭಿನಂದನಾ ಪತ್ರ ಸ್ವೀಕರಿಸಿದ – ಮೋಹನ್ ಕುಮಾರ್ ದಾನಪ್ಪ!
ಬೆಂಗಳೂರು: ಡಿ 9, ದೇಶದ 77ನೇ ಸ್ವಾತಂತ್ರ್ಯ ಮತ್ತು 24ನೇ ಕಾರ್ಗಿಲ್ ವಿಜಯ್ ದಿವಸ ಅಂಗವಾಗಿ ಕೇಂದ್ರಾಡಳಿತ ಪ್ರದೇಶ ಕಾರ್ಗಿಲ್ ನಲ್ಲಿ ಯುವಜನರು ದೇಶ ಸೇವೆಗೆ ಸೇನೆ ಸೇರುವ ಬಗ್ಗೆ ಜಾಗೃತಿಗಾಗಿ 5 ಗಂಟೆಗಳ ಮ್ಯಾರಥಾನ್ ನಡೆಸಿ ದೇಶದ ಗಮನ ಸೆಳೆದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರದ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ರವರು ಅಭಿನಂದಿಸಿದ್ದಾರೆ, ರಾಜ್ಯಪಾಲರ ಪತ್ರದಲ್ಲಿ ಶ್ರೀ ಮೋಹನ್ ಕುಮಾರ್ ದಾನಪ್ಪ ಅವರು “ಸಲಾಂ ಸೋಲ್ಜರ್ಸ್” ಶೀರ್ಷಿಕೆಯಡಿಯಲ್ಲಿ ಯುವಜನರು ದೇಶ ಸೇವೆಗೆ ಸೇನೆ ಸೇರುವ ಬಗ್ಗೆ ಜಾಗೃತಿಗಾಗಿ “ದೇಶ ಸೇವೆಗೆ ಒಂದಾಗಿ ಸೇನೆ ಸೇರಲು ಮುಂದಾಗಿ” ಎನ್ನುವ ಪರಿಕಲ್ಪನೆಯೊಂದಿಗೆ ದೇಶದ ಜನರಲ್ಲಿ ಜಾಗೃತಿ ಮೂಢಿಸುವ ಸಲುವಾಗಿ ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ದ ಸ್ಮಾರಕದವರೆಗೆ ಆಮ್ಲಜನಕ ಕಡಿಮೆಯಿರುವ ಪ್ರದೇಶದಲ್ಲಿ ಸಮುದ್ರ ಮಟ್ಟಕ್ಕಿಂತ 10.800 ಅಡಿ ಮೇಲಿರುವ ಪ್ರದೇಶದಲ್ಲಿ ರಾಷ್ಟ್ರಧ್ವಜ ಹಿಡಿದು 5 ಗಂಟೆಗಳ ಕಾಲ ಮ್ಯಾರಥಾನ್ ನಡೆಸಿರುವುದು ತಿಳಿದು ತುಂಬಾ ಸಂತಸವಾಗಿದೆ, ಈ ಜಾಗೃತಿ ಮ್ಯಾರಥಾನ್ ಓಟವು ಇಂಡಿಯಾ ಬುಕ್ ಆಫ್ ರೆಕಾರ್ಡ್, ಹಾರ್ವರ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಬ್ರಾವೊ ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್,ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯಾಗಿ ಸೇರಿರುವುದು ತಿಳಿದು ನನಗೆ ಸಂತಸವಾಗಿದೆ, ಈ ಸಂಧರ್ಭದಲ್ಲಿ ನಾನು ಈ ಅವಕಾಶವನ್ನ ಬಳಸಿಕೊಂಡು ಈ ಪತ್ರದ ಮೂಲಕ ನಿಮ್ಮ ಮುಂದಿನ ಪ್ರಯತ್ನಗಳಲ್ಲಿ ಭವ್ಯವಾದ ಯಶಸ್ಸನ್ನು ಕಾಣಲೆಂದು ಬಯಸುತ್ತೇನೆಂದು ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ರವರು ತಿಳಿಸಿರುತ್ತಾರೆ.
ವರದಿ-ಮಹೇಶ ಶರ್ಮಾ