ವಿಶೇಷ ಆಹ್ವಾನಿತರಾಗಿ ರಮೇಶ್ ಲಮಾಣಿ ಜೀ ಕನ್ನಡ ವಾಹಿನಿಯ ಸರಿಗಮಪ ಸೀಜನ್ 20 ರ ಕಾಂಟೆಸ್ಟ್
ದಿನಾಂಕ:09.12.2023 ಶನಿವಾರ ಸಂಜೆ 7.30 ಗಂಟೆಯಿಂದ ಆನ್ಲೈನ್ ಗೂಗಲ್ ಮೀಟ್‌ನಲ್ಲಿ ವಾಯ್ಸ್ ಆಫ್ ಬಂಜಾರ ಗಾಯನ ಗೋಷ್ಠಿ 80 ನಡೆಯಿತು. 80ನೇ ವಾರದ ವಾಯ್ಸ್ ಆಫ್ ಬಂಜಾರ ಗಾಯನ ಗೋಷ್ಠಿಯ ವಿಶೇಷ ಆಹ್ವಾನಿತರಾಗಿ ರಮೇಶ್ ಲಮಾಣಿ ಜೀ ಕನ್ನಡ ವಾಹಿನಿಯ ಸರಿಗಮಪ ಸೀಜನ್ 20 ರ ಕಾಂಟೆಸ್ಟ್ ಭಾಗವಹಿಸಿದ್ದರು. ಎಲ್ಲಾ ಗಾಯಕರ ಗಾಯನ ಆಲಿಸಿ ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದರು. ನಿರ್ಣಾಯಕರಾಗಿ ಬಂಜಾರ ಹಿರಿಯ ಜಾನಪದ ಗಾಯಕರು ಮತ್ತು ಲೇಖಕರು ಆದ ಕಲಾಶ್ರೀ ವಸಂತ ಎಲ್ ಚವ್ಹಾಣ್ ಹಾಜರಿದ್ದರು. ವಾಯ್ಸ್ ಆಫ್ ಬಂಜಾರ ಸಂಚಾಲಕರಾದ ಶ್ರೀ ಗೋಪಾಲ ಬಿ. ನಾಯ್ಕ್ ನಿರೂಪಣೆ ಮತ್ತು ನಿರ್ವಹಣೆ ಮಾಡಿದರು. ವಾಯ್ಸ್ ಆಫ್ ಬಂಜಾರದ ಸಂಸ್ಥಾಪಕರು ಮತ್ತು ಸಂಚಾಲಕರು ಆದ ರಾಮು ಎನ್ ರಾಠೋಡ್ ಮಸ್ಕಿ ಮತ್ತು ಯಶ್ವಂತ್ ನಾಯ್ಕ, ಬಾಲು ಆರ್ ಚವ್ಹಾಣ್, ಪುಷ್ಪಾ ಬಾಯಿ ಉಪಸ್ಥಿತರಿದ್ದರು.
ಚಂದ್ರಕಲಾ ಬಾಯಿ, ಕವಿತಾ ಬಾಯಿ, ಪರಶುರಾಮ್ ರಾಠೋಡ್, ವಿಠ್ಠಲ್ ಜಾಧವ್, ದೇವು ಲಮಾಣಿ, ಸಚಿನ್, ಜಯಲಕ್ಷ್ಮೀ ಕಡೂರು, ಇಂದುಮತಿ ಚವ್ಹಾಣ್, ಸಿಂಧು ಚವ್ಹಾಣ್, ರಮೇಶ್ ಲಮಾಣಿ, ಪ್ರೇಮಾ ರಾಠೋಡ್, ಮಾರುತಿ ರಾಠೋಡ್, ದೂಗಾ ನಾಯ್ಕ್, ಬೇಬಿ ಬಾಯಿ, ಗೋಪಾಲ ಬಾವೊಜಿ, ವಿನೋದ್ ನಾಯ್ಕ್ ಹೀಗೆ ಹಲವಾರು ಬಂಜಾರ ಉದಯೋನ್ಮುಖ ಮತ್ತು ಹಿರಿಯ ಗಾಯಕರು, ಬರಹಗಾರರು ಭಾಗವಹಿಸಿ ಬಂಜಾರ ಜಾನಪದ, ಭಾವಗೀತೆ, ಭಜನೆ ಮತ್ತು ಸಂಸ್ಕೃತಿ ಸಂಪ್ರದಾಯ ಇತಿಹಾಸ ಕುರಿತು ಹಾಡುಗಳನ್ನು ಹಾಡಿದರು ಚರ್ಚಿಸಿದರು ಕಾರ್ಯಕ್ರಮಕ್ಕೆ ಮೆರುಗು ಕೂಡ ತಂದರು.
ವರದಿ-ಸಂಪಾದಕೀಯಾ
Congratulations, all the activities in the event was very nice and more attractive, hope it continue to reach all the community peoples in the country. Wish you all the best 💕💕💕💕🙏
thanku sir