ಕೊಪ್ಪಳ : ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡುವುದರಲ್ಲಿ ವಿಳಂಬ ಧೋರಣೆ. ಅರ್ಜಿಗಳ ತಿರಸ್ಕಾರ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನಾ ಧರಣಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗದ ತಹಶೀಲ್ದಾರ್ ರವಿ ಕುಮಾರ್ ಅವರ ಮುಖಾಂತರ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ವಿವಿಧ ಘಟಕಗಳಿಂದ ಮನವಿ ಅರ್ಪಿಸಲಾಯಿತು.
ನಗರದ ಜಿಲ್ಲಾ ಆಡಳಿತ ಭವನದ ಮುಂದೆ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕ. ನಗರ ಘಟಕ. ಬಡಾವಣೆ ಘಟಕಗಳ. ಗ್ರಾಮ ಘಟಕಗಳ ಪದಾಧಿಕಾರಿಗಳು ಪ್ರತಿಭಟನಾ ಧರಣಿ ನಡೆಸಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೀಡಲಾಗುತ್ತಿರುವ ಮಕ್ಕಳ ಸ್ಕಾಲರ್ ಶಿಪ್. ಮದುವೆ ಸಹಾಯಧನ. ಸಹಜ ಸಾವಿಗೆ ನೀಡುವ ಅಂತ್ಯಕ್ರಿಯೆ ಅನುಗ್ರಹ ರಾಶಿಯ ಸಹಾಯಧನ. ನಿವೃತ್ತ ಕಟ್ಟಡ ನಿರ್ಮಾಣ ಕಾರ್ಮಿಕರ ಮಾಸಾಶನ ಸಕಾಲಕ್ಕೆ ಬಿಡುಗಡೆಯಾಗುತ್ತಿಲ್ಲ.ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಹಣ ಅಪಾರ ಪ್ರಮಾಣದಲ್ಲಿ ಕಡಿತಗೊಳಿಸಿದ್ದಲ್ಲದೆ ಸಕಾಲಕ್ಕೆ ಬಿಡುಗಡೆಗೊಳಿಸದೆ ಇರುವುದರಿಂದ ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗುತ್ತಿದೆ. ಉಳಿದ ಧನಸಹಾಯದ ಸೌಲಭ್ಯಗಳನ್ನು ಪಡೆಯಲು ಪರದಾಡಬೇಕಾಗಿದೆ. ಸಣ್ಣಪುಟ್ಟ ತಪ್ಪುಗಳ ಕಾರಣಗಳನ್ನು ತೋರಿಸಿ ವಿವಿಧ ಸೌಲಭ್ಯಗಳಿಗೆ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದರಿಂದ ನಿಜವಾದ ಕಟ್ಟಡ ಕಾರ್ಮಿಕರು ವಂಚಿತರಾಗುತ್ತಿದ್ದಾರೆ.ಅಲ್ಲದೆ ಅನೇಕರು ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಗತಿಸುತ್ತವೆ. ಇದಕ್ಕೆ ಸಕಾಲ ಯೋಜನೆಯಡಿ ತಂದು ನಿಗದಿತ ಅವಧಿಯಲ್ಲಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಹಣದಲ್ಲಿ ಶೇ: 70 ರಿಂದ 90 ರಷ್ಟು ಹಣ ಕಡಿತಗೊಳಿಸಿ ಜಾರಿ ಮಾಡಿರುವುದನ್ನು ಖಂಡಿಸಿ. ಎಲ್ಲಾ ವರ್ಗಗಳ ಮಕ್ಕಳಿಗೂ ಈ ಹಿಂದೆ ನೀಡುತ್ತಿದ್ದ ಶೈಕ್ಷಣಿಕ ಧನಸಹಾಯ ಮುಂದುವರಿಸಬೇಕು. ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳ ಹಣದಲ್ಲಿ ಕಡಿತಗೊಳಿಸಲು ನಡೆಸಿರುವ ಪ್ರಯತ್ನ ಕೈಬಿಡಲು ಒತ್ತಾಯಿಸುತ್ತೇವೆ. ಕಟ್ಟಡ ಕಾರ್ಮಿಕರು ಪಡೆಯುವ ಗುರುತಿನ ಚೀಟಿ. ನವೀಕರಿಸಲು ಹಾಗೂ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ದಿನೇ ದಿನೇ ಹಾಕುತ್ತಿರುವ ಹೊಸ ನಿರ್ಬಂಧನೆಗಳಿಂದ ನಿಜವಾದ ಕಟ್ಟಡ ಕಾರ್ಮಿಕರು ಎಲ್ಲಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕಟ್ಟಡ ಕಾರ್ಮಿಕರು ಗುರುತಿನ ಚೀಟಿ ನವೀಕರಿಸುವಾಗ ಅಥವಾ ಸೌಲಭ್ಯಗಳು ಪಡೆಯುವಾಗ ಹಾಕುವ ಅರ್ಜಿಗಳೊಂದಿಗೆ ನಿರ್ಮಾಣವಾಗುತ್ತಿರುವ ಕಟ್ಟಡದ ಪರವಾನಿಗೆ ಮತ್ತು ನಕ್ಷೆಯ ಸಂಖ್ಯೆಯನ್ನು ದಾಖಲಿಸಲು ತಿಳಿಸಿರುವುದು ಕಟ್ಟಡ ಕಾರ್ಮಿಕರಿಗೆ ತೊಡಕ್ಕಾಗಿ ಪರಿಣಮಿಸಿದೆ. ಕಟ್ಟಡ ಮಾಲಕರು ಕಟ್ಟಡ ಕಾರ್ಮಿಕರಿಗೆ ದುಡಿದ ಹಣ ಕೊಟ್ಟು ಕಳುಹಿಸುತ್ತಾರೆ. ಇಂಥ ಎಲ್ಲಾ ಸಹಕಾರ ಸಿಗುವುದು ಬಹಳ ಕಠಿಣವಾಗಿ ಪರಿಣಮಿಸಿದೆ.ಅಲ್ಲದೆ ಈ ವಿಷಯದಲ್ಲಿ ಕಾರ್ಮಿಕ ಇಲಾಖೆಯ ವ್ಯಾಪ್ತಿ ಹೊರಗೆ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರ ಎಂದು ಸುತ್ತೋಲೆ ಇದ್ದರೂ ಸಹ ಆಯಾ ತಾಲೂಕಾ. ಜಿಲ್ಲೆಯಲ್ಲಿರುವ ಎಲ್ಲಾ ಕಟ್ಟಡ ಕಾರ್ಮಿಕರಿಗೂ ಈ ನಿಯಮ ಅನ್ವಯಿಸಿ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ತಕ್ಷಣ ಇಂಥ ಅಗತ್ಯವಿಲ್ಲದ ನಿಯಮಗಳನ್ನು ಕೈ ಬಿಟ್ಟು. ಕಟ್ಟಡ ಕಾರ್ಮಿಕರು ಅರ್ಜಿ ಸಲ್ಲಿಸುವಾಗ ಯಾವುದೇ ದಾಖಲೆ ಕೈ ಬಿಟ್ಟಿದ್ದರೆ ಸಂಬಂಧಿಸಿದ ಫಲಾನುಭವಿಗಳನ್ನು ಕರೆಸಿಕೊಂಡು ದಾಖಲೆಗಳನ್ನು ಪಡೆದುಕೊಂಡು ಅಥವಾ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಬೇಕು. ಕಟ್ಟಡ ನಿರ್ಮಾಣದಲ್ಲಿ ತೊಡಗಿರುವ ಬಹುತೇಕ ದಲಿತ ಹಿಂದುಳಿದ ಅಲ್ಪಸಂಖ್ಯಾತರು ಹೆಚ್ಚಾಗಿದ್ದು. ಈ ಹಿಂದಿನ ಸರ್ಕಾರದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿದ್ದ ಹದಿಮೂರುವರೆ ಸಾವಿರ ಕೋಟಿ ರೂಪಾಯಿಗಳಲ್ಲಿ 6000 ಕೋಟಿಗೂ ಹೆಚ್ಚು ಹಣವನ್ನು ಟೆಂಡರಗಳ ಮೂಲಕ ನಡೆಸಿದ ಭಾರಿ ಭ್ರಷ್ಟಾಚಾರವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ನಿಜವಾದ ಕಟ್ಟಡ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಧರಣಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಜಿಲ್ಲಾ ಸಂಘಟನಾ ಸಂಚಾಲಯ ತುಕಾರಾಮ್ ಬಿ. ಪಾತ್ರೋಟಿ. ಹಿರಿಯ ಮುಖಂಡರಾದ ಹುಲುಗಪ್ಪ ಅಕ್ಕಿ ರೊಟ್ಟಿ. ತಿಮ್ಮಣ್ಣ ಎ.ಎಲ್. ತಾಲೂಕಾ ಸಂಚಾಲಕರಾದ ನೂರ್ ಸಾಬ್ ಹೊಸಮನಿ. ರಾಜಾ ಸಾಬ್ ತಹಶೀಲ್ದಾರ್. ಶಂಶುದ್ದೀನ್ ಮಕಾಂದಾರ್. ಗಂಗಾವತಿ ತಾಲೂಕಾ ಕಾರ್ಪೆಂಟರ್ ಯೂನಿನ ಅಧ್ಯಕ್ಷ ಮೊಹಮ್ಮದ್ ಖಾಸಿಮ್. ಭಾಗ್ಯನಗರದ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ (ರಿ) (ಎಐಟಿಯುಸಿ ಸಂಯೋಜಿತದ) ಅಧ್ಯಕ್ಷ ಮೌಲಾ ಸಾಬ್ ಕಪಾಲಿ. ಅಶೋಕ್ ಭಾವಿಮನಿ. ನಾಗರಾಜ್. ಜಗದೀಶ್ ವಡ್ಡರ್. ಗಿಣಿಗೇರಾ ಗ್ರಾಮ ಘಟಕದ ಅಧ್ಯಕ್ಷ ರಾಜಪ್ಪ ಚೌಹಾಣ್. ಪಾನಿಶಾ ಮಕಾಂದಾರ್. ಶರಣಯ್ಯ ರಾಮಗಿರಿ ಮಠ. ಮಹೆಬೂಬ್ ಅಲಿ ಮಕಾಂದಾರ್. ಯಂಕಣ ಬಡಿಗೇರ್. ಮರ್ದಾನ್ ಸಾಬ್ ವಾಲಿಕಾರ್. ಮುಂತಾದವರು ಭಾಗವಹಿಸಿದ್ದರು.
ವಿಶೇಷ ವರದಿಗಾರರು.