ತಾವರಗೇರಾ ಪಟ್ಟಣದಲ್ಲಿ ಶ್ರೀ ಕನಕದಾಸರ ಜಯಂತಿ.

Spread the love

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಅದ್ದೂರಿ ಶ್ರೀ ಕನಕದಾಸರ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ತಾವರಗೇರಾ ಪಟ್ಟಣದ 5ನೇ ವಾರ್ಡಿನ ಕುರುಬರು ಜನಾಂಗದವರಿಂದ ಶ್ರೀ ಕನಕದಾಸ ವೃತ್ತದಿಂದ ಶ್ರೀ ಕನಕದಾಸರ ಜಯಂತಿ ನಿಮಿತ್ಯ ಶ್ರೀ ಕನಕದಾಸ ಮೂರ್ತಿಗೆ ಮಾಲೆ ಹಾಕುವ ಮೂಲಕ ಶ್ರೀ ಕನಕದಾಸರ ಜಯಂತಿಗೆ ಚಾಲನೆ ನೀಡಿದರು. ಈ ಕಾರ್ಯಾಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀ ದೊಡ್ಡನಗೌಡ ಹೆಚ್. ಮಾಲಿ ಪಾಟೀಲ್ ರವರು ಹಾಗೂ ಊರಿನ ಗುರು/ಹಿರಿಯರು ಮತ್ತು ಕುರುಬರು ಸಮಾಜದ ಬಂದು/ಮಿತ್ರರು ಹಾಗೂ ಯುವಕರು ಪಾಲ್ಗೋಂಡು ಈ ಕಾರ್ಯಾಕ್ರಮವನ್ನು ಯಶಸ್ವಿಯಾಗಿ ಜರುಗಿಸಲಾಯಿತು. ಕವಿ ಮತ್ತು ಸಂಗೀತಗಾರ ಮಾತ್ರವಲ್ಲ, ಸಮಾಜ ಸುಧಾರಕರೂ ಆಗಿದ್ದರು. ಸಮಾನತೆಗಾಗಿ ಹೋರಾಡಿ ಸಮುದಾಯದ ಮೇಲೆತ್ತಿದ ಸಾಮಾಜಿಕ ಹೋರಾಟಗಾರರಾಗಿ ಸಮಾಜದಲ್ಲಿ ಶಾಶ್ವತ ಛಾಪು ಮೂಡಿಸಿದರು. ಸ್ಥಳೀಯ ಭಾಷೆಯನ್ನು ಬಳಸುವ ಕರ್ನಾಟಕ ಸಂಗೀತ ಸಂಯೋಜಕರ ಬಗ್ಗೆ ಸಾಕಷ್ಟು ಪ್ರಶಂಸೆ ಇದೆ.

ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು..
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು..
ಕುರುಡರಾ ಗುಂಪಿನಲ್ಲಿ ಆನೆಯಂತಿರಬೇಕು
ಕಿವುಡರಾ ಸಂಗದಲ್ಲಿ ಶಬ್ಧದಂಂತಿರಬೇಕು
ದೊಡ್ಡವರ ಗುಂಪಿನಲ್ಲಿ….
ಈಈಈಈ ಈಈಈಈ ಈಈಈ..
ದೊಡ್ಡವರ ಗುಂಪಿನಲ್ಲಿ..ದಡ್ಡನಂ.ತಿರಬೇಕು
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು..
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು..

ವರದಿ-ಉಪಳೇಶ.ವಿ.ನಾರಿನಾಳ.

Leave a Reply

Your email address will not be published. Required fields are marked *