ವೈಕುಂಠ ಏಕಾದಶಿ ಪ್ರಯುಕ್ತ ಜೆಪಿ ನಗರದ ವೆಂಕಟೇಶ್ವರ ದೇವಾಲಯದಲ್ಲಿ ಡಾ. ಎಂ.ಎಸ್. ಸುಬ್ಬು ಲಕ್ಷ್ಮಿ ಅವರ ಮೊಮ್ಮಕ್ಕಳಾದ ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಸಹೋದರಿಯರಿಂದ ಗೀತೆ ಗಾಯನ.
ಬೆಂಗಳೂರು,ಡಿ, 23; ಕರ್ನಾಟಕ ಶಾಸ್ತ್ರೀಯ ಸಂಗೀತದ ದಂತಕಥೆ, ಭಕ್ತಿ ಸಂಗೀತದಲ್ಲಿ ಅದರಲ್ಲೂ ವಿಶೇಷವಾಗಿ ಸುಪ್ರಭಾತದಲ್ಲಿ ಬೆರಗು ಮೂಡಿಸಿದ್ದ ಭಾರತ ರತ್ನ ಡಾ. ಎಂ.ಎಸ್. ಸುಬ್ಬು ಲಕ್ಷ್ಮಿ ಅವರ ಮೊಮ್ಮಕ್ಕಳಾದ ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಸಹೋದರಿಯರು ವೈಕುಂಠ ಏಕಾದಶಿ ಪ್ರಯುಕ್ತ ಜೆಪಿ ನಗರದ ಎರಡನೇ ಹಂತದ ತಿರುಮಲಗಿರಿ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಸುಶ್ರಾವ್ಯವಾಗಿ ಸುಪ್ರಭಾತ ಗೀತೆಗಳನ್ನು ಹಾಡಿ ಭಕ್ತಾದಿಗಳು ಭಾವಪರವಶರಾಗುವಂತೆ ಮಾಡಿದರು ಇದೇ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ಎ2 ಕ್ಲಾಸಿಕಲ್ ಮ್ಯೂಸಿಕ್ ಸಂಸ್ಥೆಯ ಸಂಸ್ಥಾಪಕ, ಚಿತ್ರನಿರ್ಮಾಪಕ, ಗೀತ ರಚನೆಕಾರ ಪಿ. ಕೃಷ್ಣಪ್ರಸಾದ್ ಅವರ ಸಂಸ್ಥೆಯ ಮಾಲೀಕತ್ವದ “ವೆಂಕಟೇಶ್ವರ ಸುಬ್ರಹ್ಮಣ್ಯ” ಭಕ್ತಿ ಸಂಗೀತದ ಸಿಡಿಯನ್ನು ಈ ಸಹೋದರಿಯರು ಬಿಡುಗಡೆ ಮಾಡಿದರು. ಎ2 ಕ್ಲಾಸಿಕಲ್ ಮ್ಯೂಸಿಕ್ ಸಂಸ್ಥೆ ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಸೇರಿದಂತೆ ಹಲವಾರು ಚಿತ್ರ ಗೀತೆಗಳಿಗೆ ಖ್ಯಾತಿ ಪಡೆದಿದೆ.ವೈಕುಂಠ ಏಕಾದಶಿಯನ್ನು ಸ್ಮರಣೀಯವಾಗಿಸಲು ಡಾ. ಎಂ.ಎಸ್. ಸುಬ್ಬು ಲಕ್ಷ್ಮಿ ಅವರ ಮೊಮ್ಮಕ್ಕಳ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಎಂದು ಪಿ. ಕೃಷ್ಣಪ್ರಸಾದ್ ತಿಳಿಸಿದ್ದಾರೆ.
ವರದಿ: ಡಾ.ಪ್ರಭು ಗಂಜಿಹಾಳ.