ವಿಜೆಯನಗರ ಜಿಲ್ಲಾಧಿಕಾರಿಗಳಿಂದ ಕುಷ್ಟರೋಗಿಗಳ ನಿರಾಶ್ರಿತ ಮನೆಗಳಿಗೆ ಭೇಟಿ,

Spread the love

ಹೊಸಪೇಟೆ ನಗರದಲ್ಲಿ ಇರುವ ಕುಷ್ಟರೋಗಿಗಳ ನಿರಾಶ್ರಿತ ಮನೆಗಳಿಗೆ ಭೇಟಿ ನೀಡಲಾಯಿತು ರೋಗಿ ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು ಸ್ಥಳದಲ್ಲಿ ಹಾಜರಿದ್ದ ನಗರಸಭೆ ಅಧಿಕಾರಿಗಳಿಗೆ ಕುಡಿಯುವ ನೀರು ಮತ್ತು ಡ್ರೈನೇಜ್ ವ್ಯವಸ್ಥೆಯನ್ನು ಸರಿಪಡಿಸುವಂತೆ ತಿಳಿಸಲಾಯಿತು ಹಾಜರಿದ್ದ ವೈದ್ಯಕೀಯ ಅಧಿಕಾರಿಗಳಿಗೆ ರೋಗಿಗಳು ಮತ್ತು ಕುಟುಂಬದ ಎಲ್ಲ ಸದಸ್ಯರಿಗೆ ವರ್ಷದಲ್ಲಿ ಎರಡು ಬಾರಿ ಆರೋಗ್ಯ ತಪಾಸಣೆ ಮಾಡಲು ತಿಳಿಸಲಾಯಿತು ಮತ್ತು ಕುಟುಂಬದಲ್ಲಿರುವ ಸಣ್ಣ ಮಕ್ಕಳು ಪೋಷಕಾಂಶ ಕೊರತೆ ಕಂಡುಬಂದಿದ್ದು ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಲು ತಿಳಿಸಲಾಯಿತು ವಯಸ್ಸಾದವರಿಗೆ ಕ್ಷಣವೇ ವೃದ್ದಾಪ ವೇತನ ಮತ್ತು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ಗಳನ್ನು ನಿಯಮಾನುಸರ ವಿತರಿಸಲು ತಿಳಿಸಲಾಯಿತು ಮತ್ತು ಅವರ ಜೊತೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮಾಡಲಾಯಿತು ಪಕ್ಕದಲ್ಲಿದ್ದ ವಾರ್ಡ್ ನಂಬರ್ 21 ,22ರಲ್ಲಿ ಹಕ್ಕು ಪತ್ರ ನೀಡಿದ್ದು ಫಾರಂ 3 ಸಮಸ್ಯೆ ಬಗ್ಗೆ ನಾಗರಿಕರು ಅಹವಾಲು ಸಲ್ಲಿಸಿದರು ಮ ನಿಯಮಾನಸಾರ ಪರಿಶೀಲಿಸಿ ಕ್ರಮ ವಹಿಸಲಾಗುವುದೆಂದು ತಿಳಿಸಲಾಯಿತು, ಒಟ್ಟಿನಲ್ಲಿ ಇವರ ಕಾರ್ಯವೈಕಾರ್ಯಗಳಿಗೆ ಮೆಚ್ಚುಗೆ ದೊರೆಯುತ್ತಿದೆ, ವಿಜೆಯನಗರ ಜಿಲ್ಲೆಯ ಜನರ ಕ್ಷಟ ಕಾರುಣ್ಯಗಳಿಗೆ ದಾರಿ ದೀಪವಾಗಿದ್ದಾರೆ ಎಂದು ಹೇಳಲು ಎರಡು ಮಾತಿಲ್ಲ. ಒಳ್ಳೆಯ ಕಾರ್ಯಗಳನ್ನ ಕೈಗೆತ್ತಿಕೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಅಧಿಕಾರಿಗಳಿಗೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗದವತಿಯಿಂದ ಧನ್ಯವಾದಗಳು.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *