ಪಿಡಿಓ ಭ್ರಷ್ಟಾಚಾರ ಕೇಳೋರಿಲ್ಲವೇ ಮೇಲಾದಿಕಾರಿಗಳು ಯಾರು..? ಸತ್ತವರ ಹೆಸರಿಗೆ ಕೂಲಿ ಕೆಲಸ…
ಕೊಪ್ಪಳ ಜಿಲ್ಲೆಯ ಗಂಗವತಿ ತಾಲೂಕಿನ ಹಣವಾಳ ಗ್ರಾಮದಲ್ಲ್ಲಿ ಈ ಘಟನೆ. ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಹೆಸರಿನಲ್ಲಿ ಗ್ರಾಮ ಪಂಚಾಯ್ತಿ ಪಿಡಿಒ ಮತ್ತು ಫಲಾನುಭವಿಗಳು ಇಬ್ಬರ ನಡುವೆ ಹಣದ ಒಳ ಒಪ್ಪಂದ ಮಾಡಿಕೊಂಡು ಕಾಮಗಾರಿ ಹೆಸರಲ್ಲಿ ಬೆಂಗಳೂರಿನಲ್ಲಿ ದುಡಿಯುತ್ತ ಜೇಬಿಗೆ ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಕೆಲ ಫಲಾನುಭವಿಗಳು ಹಾಗೂ ಅಧಿಕಾರಿಗಳು ಎಂಬ ಆರೋಪ ಈಗ ಕೇಳಿ ಬರುತ್ತಿದೆ. ಸತ್ತವರಿಗೂ ಖಾತ್ರಿ ಹಣ ಜೀವಂತವಿರುವವರಿಗೇ ಉದ್ಯೋಗ ಖಾತ್ರಿಯಲ್ಲಿ ಉದ್ಯೋಗ ಸಿಗುವುದು ಸವಾಲಾಗಿರುವಾಗ ಗಂಗಾವತಿ ತಾಲೂಕಿನ ಗಾಂಧಿನಗರ ಗ್ರಾಮ ಹಣವಾಳ ಗ್ರಾಪಂ ಪಿ, ಡಿ, ಓ ಮಲ್ಲಿಕಾರ್ಜುನ್ ಸತ್ತವರಿಗೆ ಉದ್ಯೋಗ ನೀಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಕೂಲಿ ಉದ್ಯೋಗದ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಗಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಕುಶಲ ದೈಹಿಕ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಪ್ರದೇಶದ ವಯಸ್ಕರಿಗೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ನೂರು ದಿನಗಳ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿ ನೀಡಿ, ಬಡಜನರ ಬದುಕನ್ನು ಹಸನಾಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆದರೆ ಇಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆಯಡಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಹವ್ದು ವರ್ಷಗಳ ಹಿಂದೆ ಮೃತರಾಗಿರುವವರಿಗೆ ಉದ್ಯೋಗ ನೀಡಿ ಹಣ ಪಾವತಿಸಲಾಗಿದೆ.ಜಾಬ್ ಕಾರ್ಡ್ ಹೊಂದಿಯೂ ಕೆಲಸವಿಲ್ಲ ಎಂದು ಹಲವು ಕೂಲಿಕಾರರುಪರಿತಪಿಸುತ್ತಿದ್ದರೆ..! ಸತ್ತವರಹೆಸರಿನಲ್ಲಿ ಕೂಲಿ ಜಮಾಮಾಡುವ ಮೂಲಕ ಗ್ರಾ.ಪಂ. ಆಡಳಿತ ಅಧಿಕಾರಿ ಮಲ್ಲಿಕಾರ್ಜುನ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಗೂ ಅರ್ಹ ಕೂಲಿಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯುವಜನರೇ ಕೂಲಿಕೆಲಸ ಮಾಡಲು ಹಿಂದೇಟು ಹಾಕುವ ಈ ದಿನಗಳಲ್ಲಿ ಎಪ್ಪತ್ತು, ಎಂಭತ್ತು ವರ್ಷದ ವೃದ್ದರೂ ಹಾಗೂ ಶಾಲಾ ಮಕ್ಕಳೂ ಕೂಲಿಕೆಲಸ ಮಾಡಿ ಅಚ್ಚರಿ ಮೂಡಿಸಿದ್ದಾರೆ ಎಂಬುದು ಸ್ಥಳೀಯರ ಹಾಗೂ ಮಾದಿಗ ದಂಡೋರ ಅಧ್ಯಕ್ಷ ಗಂಗಣ್ಣ ಅವರ ಆರೋಪ ಆಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಪಿಡಿಓ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ವರದಿ – ಅಮಾಜಪ್ಪ ಹೆಚ್.ಜಿ.ಜುಮಲಾಪೂರ