30/12/2023 ಶನಿವಾರ ಬೆಳಿಗ್ಗೆ ಸಕ್ಷಮ ಕಾರ್ಯಾಲಯದಲ್ಲಿ ಸಕ್ಷಮ. ಶಿವಮೊಗ್ಗ ಹಾಗೂ ಸ್ಪೆಷಲ್ ಒಲಂಪಿಕ್ ಭಾರತ್ ಕರ್ನಾಟಕ ಚಾಪ್ಟರ್ ವತಿಯಿಂದ ಜೊತೆಯಲ್ಲಿ ಚೈತನ್ಯ ವಿಶೇಷ ಶಿಕ್ಷಣ ಕಲಿಕಾ ಕೇಂದ್ರ.ಸಾಗರ, ಮನಃಸ್ಪೂರ್ತಿ ಕಲಿಕಾ ಕೇಂದ್ರದ ಸಹಯೋಗದಲ್ಲಿ. ಬುದ್ಧಿ ನ್ಯೂನ್ಯತೆ ಇರುವ ವಿಶೇಷ ಮಕ್ಕಳ ವಿಶೇಷ ಶಾಲಾ ಶಿಕ್ಷಕರಿಗೆ ಒಂದು ದಿನದ ಕ್ರೀಡಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಶಿವಮೊಗ್ಗ ಚಿಕ್ಕಮಂಗಳೂರು ಹಾಸನ್ ಈ ಮೂರು ಜಿಲ್ಲೆಗಳಿಂದ 30 ವಿಶೇಷ ಶಿಕ್ಷಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸ್ಪೆಷಲ್ ಒಲಂಪಿಕ್ ಭಾರತ್ ಕರ್ನಾಟಕದ ಅಧ್ಯಕ್ಷರಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರದ ಎಂಎಲ್ಎ ಆದ ಶ್ರೀಮತಿ ಶಶಿಕಲಾ ಜೋಲ್ಲೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಬೌದ್ಧಿಕ ಅಸಮರ್ಥ ಮಕ್ಕಳಿಗಾಗಿಯೇ ಇರುವ ಸ್ಪೆಷಲ್ ಒಲಂಪಿಕ್ ನ ಕ್ರೀಡೆಯಲ್ಲಿ ಮಕ್ಕಳಿಗೆ ತರಬೇತಿ ನೀಡಿ ಅವರನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ಯುವ ಜವಾಬ್ದಾರಿಯನ್ನು ಹೊತ್ತು ಮುನ್ನಡೆಯಿರಿ. ಈ ಮಕ್ಕಳಿಗಾಗಿ ಶ್ರಮಿಸಿದರೆ ಭಗವಂತ ನಿಮಗೆ ಸಹಕರಿಸುತ್ತಾನೆ . ನಾನು ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಎಲ್ಲಾ ವಿಶೇಷ ಶಿಕ್ಷಕರಿಗೆ ತಮ್ಮ ಮನದಾಳದ ಮಾತುಗಳಿಂದ ಹುರಿದಿಂಬಿಸಿದರು. ಮುಖ್ಯ ಅತಿಥಿಗಳಾಗಿ ಡಾಕ್ಟರ್ ರಜನಿ ಪೈ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಮಾತೃ ಹೃದಯದ ಮಾತುಗಳು ಹಾಗೂ ನಡವಳಿಕೆಯಿಂದ ಎಲ್ಲರ ಮೆಚ್ಚುಗೆ ಗಳಿಸಿ ಕಾರ್ಯಕ್ರಮಕ್ಕೆ ಮೆರಗು ಕೊಟ್ಟರು. ಸ್ಪೆಷಲ್ಒಲಂಪಿಕ್ ಭಾರತದ ವಲಯ ಅಧಿಕಾರಿಗಳಾದ ಶ್ರೀ ಅಮರೇಂದ್ರ ಅಂಜನಪ್ಪ ಮತ್ತು ಚೈತನ್ಯ ವಿಶೇಷ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ಶಾಂತಲಾ ಸುರೇಶ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ಅಂತಿಮ ಘಟ್ಟವಾದ ಸಮಾರೋಪ ಸಮಾರಂಭದಲ್ಲಿ ಖ್ಯಾತನರೋಗ ತಜ್ಞರಾದ ಡಾಕ್ಟರ್ ಶಿವರಾಮಕೃಷ್ಣ ಹಾಗೂ ಖ್ಯಾತ ನೇತ್ರ ತಜ್ಞರಾದ ಡಾಕ್ಟರ್ ಪ್ರಶಾಂತ್ ಇಸ್ಲೂರ್ ಮತ್ತು ಚೈತನ್ಯ ವಿಶೇಷ ಶಿಕ್ಷಣ ಕೇಂದ್ರದ ಅಧ್ಯಕ್ಷರಾದ ಬಿಹೆಚ್ ರಾಘವೇಂದ್ರ ಅವರು ಭಾಗವಹಿಸಿದ್ದರು. “ಸಕ್ಷಮ” ದ ಕಾರ್ಯದರ್ಶಿಗಳಾದ ಕುಮಾರ ಶಾಸ್ತ್ರಿ ಅವರು ಹಾಗೂ “ಮನಸ್ಪೂರ್ತಿಕಲಿಕಾ ಕೇಂದ್ರದ” ಹಾಗೂ ಸಕ್ಷಮದ ಪದಾಧಿಕಾರಿಗಳು ಇದ್ದರು.
ವರದಿ-ಸಂಪಾದಕೀಯಾ