ಸಂಸದ ಅನಂತಕುಮಾರ ಹೆಗ್ಡೆಯನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ.
ಕೊಪ್ಪಳ :ಮುಖ್ಯಮಂತ್ರಿಯವರನ್ನು ಏಕವಚನದಲ್ಲಿ ನಿಂದಿಸಿ ಮಾತನಾಡಿ, ಅವಮಾನಿಸಿದ ಸಂಸದ ಅನಂತಕುಮಾರ ಹೆಗ್ಡೆಯನ್ನು ಬಂಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ.
ಈ ಹಿಂದೆ ಕುಕನೂರಿಗೆ ಆಗಮಿಸಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ನಾವು ಆರಿಸಿ ಬಂದದ್ದು ಸಂವಿಧಾನವನ್ನು ಬದಲಿಸಲಿಕ್ಕಾಗಿ ಅಂತ ಹೇಳಿ. ಅಂದು ಗೊಂದಲಗಳನ್ನು ಸೃಷ್ಟಿಸಿದ್ದ ಸಂಸದ ಅನಂತಕುಮಾರ ಹೆಗಡೆಯವರು ಮತ್ತೆ ಅಂಥಹದ್ದೆ ಅವಿವೇಕಿತನದ ಹೇಳಿಕೆಯನ್ನು ನೀಡಿ. ಅಂದರೆ ಈ ರಾಜ್ಯದ ಮಖ್ಯಮಂತ್ರಿಯವರನ್ನು ಏಕವಚನದಲ್ಲಿ ನಿಂದಿಸಿ ಮಾತನಾಡಿ. ಶಾಂತಿ ಸೌಹಾರ್ದತೆಗೆ ಧಕ್ಕೆ ತರುವಂತೆ ನಡೆದುಕೊಂಡಿದ್ದಾರೆ. ಸಂಸದರ ಈ ಸಂವಿಧಾನ ವಿರೋಧಿ ಅನುಚಿತ ನಡೆಯನ್ನು ಖಂಡಿಸಿ ಬುಧವಾರ ಬೆಳಿಗ್ಗೆ 11-30ರ ಸಮಾರಿಗೆ ಅಶೋಕ ಸರ್ಕಲ್ ಹತ್ತಿರ ಜಮಾಯಿಸಿದ ಪ್ರಗತಿಪರ ಸಂಘಟನೆಗಳ ಮುಖಂಡರು ಸಾಂಕೇತಿಕವಾಗಿ ಪ್ರತಿಭಟನೆಯನ್ನು ನಡೆಸಿ.ತಕ್ಷಣ ಅವರನ್ನು ಬಂಧಿಸುವಂತೆ ಸರಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ಸರ್ಕಾರವು ಮತಾಂತರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಹಾಗೂ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸುವಲ್ಲಿ ವಿಳಂಬ ಮಾಡಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬಸವರಾಜ್ ಶೀಲವಂತರ್. ಎಸ್.ಎ.ಗಫಾರ್. ಕೆ.ಬಿ.ಗೋನಾಳ. ಮಹಾಂತೇಶ್ ಕೋತಬಾಳ. ಗಾಳಪ್ಪ ಮುಂಗೋಲಿ. ನಿಂಗು ಬೆಣಕಲ್. ಖಾಸಿಂ ಸರ್ದಾರ್. ಸಂಜಯ್ ದಾಸ್ ಕೌಜಗೇರಿ. ದುರ್ಗಪ್ಪ. ಕಾಶಪ್ಪ ಚಲವಾದಿ. ಸಾಧಿಕ್ ಅಲಿ ದಫೇದಾರ್ ಪೈಲ್ವಾನ್. ಬಸವರಾಜ್ ಗಾಳಿ. ಗವಿಸಿದ್ದಪ್ಪ ಚಿಕೇನಕೊಪ್ಪ. ಸುಂಕಪ್ಪ ಮಿಸಿ. ಗೀತಾ ಕೊಪ್ಪಳ ಮುಂತಾದವರು ನೇತೃತ್ವ ವಹಿಸಿದ್ದರು.
ವಿಶೇಷ ವರದಿಗಾರರು – ಎಸ್.ಎ.ಗಫಾರ್