ದಿನಾಂಕ:.13.01.2024 ಶನಿವಾರ ಸಂಜೆ 7.30 ಗಂಟೆಯಿಂದ ಆನ್ಲೈನ್ ಗೂಗಲ್ ಮೀಟ್ನಲ್ಲಿ ವಾಯ್ಸ್ ಆಫ್ ಬಂಜಾರ ಗಾಯನ ಗೋಷ್ಠಿ 85 ನಡೆಯಿತು. 85ನೇ ವಾರದ ವಾಯ್ಸ್ ಆಫ್ ಬಂಜಾರ ಗಾಯನ ಗೋಷ್ಠಿಯ ವಿಶೇಷ ಆಹ್ವಾನಿತರಾಗಿ ರಮೇಶ್ ಲಮಾಣಿ ಜೀ ಕನ್ನಡ ವಾಹಿನಿಯ ಸರಿಗಮಪ ಸೀಜನ್ 20 ರ ಕಾಂಟೆಸ್ಟ್ ಭಾಗವಹಿಸಿದ್ದರು. ಎಲ್ಲಾ ಗಾಯಕರ ಗಾಯನ ಆಲಿಸಿ ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದರು. ನಿರ್ಣಾಯಕರಾಗಿ ಬಂಜಾರ ಹಿರಿಯ ಜಾನಪದ ಗಾಯಕರು ಮತ್ತು ಲೇಖಕರು ಆದ ಕಲಾಶ್ರೀ ವಸಂತ ಎಲ್ ಚವ್ಹಾಣ್, ಶ್ರೀನಿವಾಸ್ ನಾಯ್ಕ್ ಸಂಗೀತ ನಿರ್ದೇಶಕರು, ಕವಿರಾಜ್ ಬಂಜಾರ ಹಿರಿಯ ಗಾಯಕರು ಹಾಜರಿದ್ದರು. ವಾಯ್ಸ್ ಆಫ್ ಬಂಜಾರ ಸಂಚಾಲಕರಾದ ಶ್ರೀ ಗೋಪಾಲ ಬಿ. ನಾಯ್ಕ್ ನಿರೂಪಣೆ ಮತ್ತು ನಿರ್ವಹಣೆ ಮಾಡಿದರು. ವಾಯ್ಸ್ ಆಫ್ ಬಂಜಾರದ ಸಂಸ್ಥಾಪಕರು ಮತ್ತು ಸಂಚಾಲಕರು ಆದ ರಾಮು ಎನ್ ರಾಠೋಡ್ ಮಸ್ಕಿ ಮತ್ತು ಯಶ್ವಂತ್ ನಾಯ್ಕ, ಬಾಲು ಆರ್ ಚವ್ಹಾಣ್, ಡಾ. ಎಲ್. ಪಿ. ಕಠಾರಿ ನಾಯ್ಕ್, ಲಕ್ಷ್ಮಿ ಬಾಯಿ ಮಂಗಳೂರು, ಪುಷ್ಪ ಬಾಯಿ, ಝೆoಕರ್ ಸ್ಟುಡಿಯೋ ಮಾಲಿಕರಾದ ಶ್ರೀ ನಿರ್ಮಲ್ ಕುಮಾರ್, ಶ್ರೀ ತಿಪ್ಪಾಸರ್ ನಾಯ್ಕ್ ಉಪಸ್ಥಿತರಿದ್ದರು. ದೇವು ಲಮಾಣಿ, ಕುಮಾರ ನಾಯ್ಕ್, ಕವಿತಾ ಬಾಯಿ, ಪೂಜಾ ಚವ್ಹಾಣ್, ಉಮೇಶ್ ಲಮಾಣಿ, ವಿಠ್ಠಲ್ ಜಾಧವ್, ಕುಮಾರ ನಾಯ್ಕ್, ಸುನಿಲ್ ನಾಯ್ಕ್, ಲಕ್ಷ್ಮೀ ರಾಠೋಡ್, ಮಾರುತಿ ರಾಠೋಡ್, ಚಂದ್ರಕಲಾ ಬಾಯಿ, ದೂಗಾ ನಾಯ್ಕ್, ಧರ್ಮೇಂದ್ರ ಕುಮಾರ ಪಿ ಎಲ್, ಶಾರದಾ ಬಾಯಿ, ಲಿಂಬಾಜಿ ರಾಠೋಡ್, ಶ್ರೇಯಾ, ಬಾವುಜಿ ಗೋಪಾಲ ನಾಯ್ಕ್, ಪ್ರೇಮಾ ರಾಠೋಡ್ ಹೀಗೆ ಹಲವಾರು ಬಂಜಾರ ಉದಯೋನ್ಮುಖ ಮತ್ತು ಹಿರಿಯ ಗಾಯಕರು, ಬರಹಗಾರರು ಭಾಗವಹಿಸಿ ಬಂಜಾರ ಜಾನಪದ, ಭಾವಗೀತೆ, ಭಜನೆ ಮತ್ತು ಸಂಸ್ಕೃತಿ ಸಂಪ್ರದಾಯ ಇತಿಹಾಸ ಕುರಿತು ಹಾಡುಗಳನ್ನು ಹಾಡಿದರು ಚರ್ಚಿಸಿದರು ಕಾರ್ಯಕ್ರಮಕ್ಕೆ ಮೆರುಗು ಕೂಡ ತಂದರು.
ವರದಿ-ಸಂಪಾದಕೀಯಾ