ಸಿಪಿಐ( ಎಮ್ ಎಲ್) ಆರ್. ಐ ಪಕ್ಷದ ವತಿಯಿಂದ ವಾರ್ಷಿಕ ಸ್ಥಾನಧಿ ಕಾರ್ಯಕ್ರಮವನ್ನು ತಾವರಗೇರಿ ಪಟ್ಟಣದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಉದ್ದೇಶ ಇಷ್ಟೇ ಜನತೆಯ ಹಕ್ಕುಗಳಿಗಾಗಿ ಹೋರಾಡುವ ಪಕ್ಷದ ಆರ್ಥಿಕ ಸಹಾಯಕ್ಕಾಗಿ. ಜನಪರ ಚಳುವಳಿಗೆ ಜನರನ್ನೇ ಅವಲಂಬಿಸಬೇಕಾಗಿದೆ ರಾಜ್ಯ ಮಟ್ಟದಲ್ಲಿ ಮತ್ತು ದೇಶ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಆರ್ಥಿಕತೆಯು ಅವಶ್ಯಕತೆ ಇರುವುದರಿಂದ ಸಿಪಿಐ (ಎಂಎಲ್) ಆರ್. ಐ ಪಕ್ಷ ಪ್ರತಿ ವರ್ಷ. ಸ್ಥಾಯಿ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ ಇವತ್ತು ದೇಶ ಮಟ್ಟದಲ್ಲಿ ಫ್ಯಾಸಿಸ್ಟ್ ದುರ್ದಾಳಿಯಿಂದ ರೈತ ಕೂಲಿ ಕಾರ್ಮಿಕರು ಶೋಷಣೆ ನಿರಂತರವಾಗಿ ನಡೆದಿದೆ. ಎಲ್ಲಾ ರಂಗದಲ್ಲಿ ಕೆಲಸ ಮಾಡುವ ರೈತ ಕೂಲಿ ಕಾರ್ಮಿಕರನ್ನು ದೇಶ ಮಟ್ಟದಲ್ಲಿ ಐಕ್ಯತೆಗೆ ಒಳಪಡಿಸುವ ದೊಡ್ಡಜವಾಬ್ದಾರಿ ಸಿಪಿಐ (ಎಮ್ ಎಲ್) ಆರ್.ಐ ಪಕ್ಷದ ಮೇಲಿದೆ ಯಾಕೆಂದರೆ ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನು ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡುವುದರ ಮೂಲಕ ಅದಾನಿ ಅಂಬಾನಿಯ ಗೇಟ್ ಕಾಯುವ ಕೆಲಸಕ್ಕೆ ದೇಶದ ಜನತೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅಣಿಗೊಳಿಸಿದೆ ನಿರಂತರ ಕಾರ್ಪೊರೇಟ್ ಪರ ವಕಾಲತ್ ವಯಿಸಿ ದೇಶದ ಆರ್ಥಿಕತೆಯನ್ನು ದಿವಾಳಿಮಾಡಿದ್ದರಿಂದ ಹಿಂದೆಂದೂ ಕಂಡರಿಯದಂತ ನಿರುದ್ಯೋಗ ಸಮಸ್ಯೆ ಉಂಟಾಗಿದೆ. ರೈತ ಕೂಲಿ ಕಾರ್ಮಿಕರ ಅಷ್ಟೇ ಅಲ್ಲದೆ ಸಣ್ಣಪುಟ್ಟ ವ್ಯಾಪರಸ್ತರ ನಿರುದ್ಯೋಗಿ ಯುವಕರು ಕೆಲಸವಿಲ್ಲದೆ ಆತ್ಮಹತ್ಯೆಗಳು ಹೆಚ್ಚಾಗಿವೆ. ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತ ಆರ್ಥಿಕ ನೀತಿಗಳನ್ನು ಜಾರಿ ಮಾಡಿ ಈ ದೇಶವನ್ನು ಮಾರ್ಟ್ ಗೇಜ ಮಾಡಲು ಹೊರಟ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಹೋರಾಟವನ್ನು ಸಂಘಟಿಸಲು ನಿಮ್ಮ ಆರ್ಥಿಕ ಸಹಾಯ ಅವಶ್ಯಕತೆ ಇರುವುದರಿಂದ ಜನತೆಯ ಮುಂದೆ ಆರ್ಥಿಕ ಸಹಾಯ ಕೋರಿ ನಮ್ಮ ಪಕ್ಷ ಮುಂದೆ ಬಂದಿದೆ ಆರ್ಥಿಕ ನೆರವು ನೀಡಿ ಎಂದು ಕೊಪ್ಪಳ ಜಿಲ್ಲಾ ಪಕ್ಷದ ಕಾರ್ಯದರ್ಶಿ ಬಸವರಾಜ್ ನರೇಗಲ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸ್ಥಾಯಿ ನಿಧಿ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ಕಾರ್ಯದರ್ಶಿ ಬಿ. ಎನ್. ಯರದಿಹಾಳ್ ನಿರುಪಾದಿ ಮಲ್ಲೇಶ್ ಗೌಡ ದ್ಯಾಮಮ್ಮ ತಾವರಗೇರಾ ದೇವಪ್ಪ ಕಂಬಳಿ ಹುಸೇನಪ್ಪ ಮೇಣದಾಳ ಮಹಾದೇವಪ್ಪ ಮೇಣದಾಳ್ ಭಾಗವಾಯಿಸಿದ್ದರು.
ವರದಿ-ಉಪಳೇಶ ವಿ.ನಾರಿನಾಳ.