ಕೊಪ್ಪಳ : ಒಂದೇ ಸಂಘಟನೆಗೆ ಸೀಮಿತವಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿನ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯನಿರ್ವಾಹಕ
ಹೇಮಂತ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಶಿವಶಂಕರ್ ತಳವಾರ್ ಉಪಸ್ಥಿತರಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಹೇಮಂತ್ ಸಿಂಗ್ ಕೊಪ್ಪಳ ಡಿಸ್ಟ್ರಿಕ್ಟ್ ಯೂನಿಯನ್ ಗಳ ನಿಮ್ಮ ಇಲಾಖೆಯಿಂದ ಮಾಡಿದಂತ ವ್ಯಾಟ್ಸಪ್ ಗ್ರೂಪಗಳಲ್ಲಿ ಈ ಕಾರ್ಡ್ ಮಾಡಿಸುವ ಬಗ್ಗೆ ಒಂದೇ ಸಂಘದ ಪರವಾಗಿ ಕೆಲಸ ಮಾಡುವದು.ಆ ಸಂಘದ ಪ್ರಚಾರ ಮಾಡುವುದು ಇದು ಸರಿಯಾದ ಕ್ರಮವಲ್ಲ. ಇಲಾಖೆಯ ಜವಾಬ್ದಾರಿ ವ್ಯಕ್ತಿಯಾದ ಹೇಮಂತ್ ಸಿಂಗ್ ಕಾರ್ಮಿಕರ ಯಾವುದೇ ಸಂಘ ವಿರಲಿ ಅಥವಾ ಕಟ್ಟಡ ಕಾರ್ಮಿಕರಿಗೆ ಈ ಬಗ್ಗೆ ಇಲಾಖೆಯ ಹೆಸರಿನ ಮೇಲೆ ಮಾಹಿತಿ ನೀಡಬೇಕು.ಆದರೆ ನಿಮ್ಮ ಸಿಬ್ಬಂದಿ ಒಂದು ಸಂಘದ ಹೇಳಿಕೆಯನ್ನು ಎಲ್ಲಾ ಸಂಘಗಳ ವ್ಯಾಟ್ಸಪ್ ಗ್ರೂಪಿನಲ್ಲಿ ಹಾಕುವುದು ಸರಿಯಾದ ಕ್ರಮವಲ್ಲ.ತಕ್ಷಣ ಈ ಗ್ರೂಪಿನಲ್ಲಿ ಹಾಕಿರುವ ಮಾಹಿತಿಯನ್ನು ಡಿಲೀಟ್ ಮಾಡಿ ಒಂದು ಒಕ್ಕೂಟದ ವಿಷಯವನ್ನು ಇಲಾಖೆಯ ಗ್ರೂಪಿನಲ್ಲಿ ಹಾಕುವುದು ಅಗತ್ಯವಿರುವುದಿಲ್ಲ.ಆದ್ದರಿಂದ ನಿಮ್ಮ ಸಿಬ್ಬಂದಿ ಹಾಕಿರ್ತಕ್ಕಂತ ಮಾಹಿತಿಯನ್ನು ಸರಿಪಡಿಸಿ ಇಲಾಖೆಯ ಮೂಲಕ ಈ ಕಾರ್ಡ್ ಬಗ್ಗೆ ಕಟ್ಟಡ ಕಾರ್ಮಿಕರಿಗೆ ಸರಿಯಾದ ಮಾಹಿತಿ ನೀಡುವಂತೆ ನಮ್ಮ ಸಂಘಟನೆಗಳಿಂದ ಮೇಲಾಧಿಕಾರಿಯಾದ ತಮ್ಮ ಗಮನಕ್ಕೆ ತರಬಯಸುತ್ತೇವೆ ಹಾಗೂ ಬೆಂಗಳೂರಿನ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೂ ನಿಮ್ಮ ಸಿಬ್ಬಂದಿ ಹಾಕಿದಂತ ಮಾಹಿತಿಯನ್ನು ಫಾರ್ವರ್ಡ್ ಮಾಡಿ ಕ್ರಮ ಕೈಗೊಳ್ಳಲು ಗಮನಕ್ಕೆ ತರಲಾಗಿದೆ. ತಾವು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಐಟಿಯು ಸಂಯೋಜಿತ) ಸಮಿತಿಯ ಜಿಲ್ಲಾಧ್ಯಕ್ಷ ಖಾಸೀಮ್ ಸರ್ದಾರ್. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ(ಎಐಟಿಯುಸಿ ಸಂಯೋಜಿತದ) ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್. ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ. ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ (ರಿ) ಜಿಲ್ಲಾ ಸಂಚಾಲಕ ಶರಣು ಗಡ್ಡಿ ಮುಂತಾದವರು ಒತ್ತಾಯಿಸಿದ್ದಾರೆ.
ವಿಶೇಷ ವರದಿ-ಎಸ್.ಎ.ಗಫಾರ್