ರಸ್ತೆ ಅಗಲೀಕರಣ ಹಾಗೂ ಮುಖ್ಯಾಧಿಕಾರಿಗಳ ನಡೆ ಖಂಡಿಸಿ ಪಟ್ಟಣ ಪಂಚಾಯಿತಿ ಮುಂಬಾಗದಲ್ಲಿ ಉಪವಾಸ ಸತ್ಯಗ್ರಹ. ಕೋನೆಗೂ ಹಿರಿಯ ಹೋರಾಟಗಾರರ ಮೂಲಕ ಉಪವಾಸ ನಿರತರಿಗೆ ಎಳೆನೀರು ಕೂಡಿಸುವ ಮೂಲಕ ಉಪವಾಸ ಸತ್ಯಗ್ರಹವನ್ನ ಅಂತ್ಯಗೊಳಿಸಲಾಯಿತು.
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಬಸವಣ್ಣ ಕ್ಯಾಂಪ ನಲ್ಲಿ ಬರುವ 14 15 ಮತ್ತು 16 ವಾರ್ಡಿನಲ್ಲಿ ಹಾದು ಹೋಗುವ ಮುಖ್ಯ ರಸ್ತೆಯೂ ಮೊದಲು 30 ಪೀಟ್ ರಸ್ತೆ ಇದ್ದು…. ಅದು ಈಗ ಕೇವಲ 10 ಪಿಟ್ ರಸ್ತೆ ಆಗಿರುವುದನ್ನು ಖಂಡಿಸಿ ಶ್ರೀ ಲಕ್ಷ್ಮಣ ಮುಖಿಯಾಜಿ ಮಾಜಿ ಗ್ರಾ.ಪಂ.ಸದಸ್ಯರು. ಹಾಗೂ ಸಮಾಜ ಸೇವಕರು. ಶ್ಯಾಮೂರ್ತಿ ಅಂಚಿ ಪ.ಪಂ.ಸದಸ್ಯರು. ವೀರೇಶಪ್ಪ ಭೋವಿ ಮಾಜಿ ಪ.ಪಂ.ಸದಸ್ಯರು ಹಾಗೂ ವಾರ್ಡಿನ ಸಾರ್ವಜನಿಕರ ಮುಖಾಂತರ ಇಂದು ಉಪವಾಸ ಸತ್ಯಾಗ್ರಹ ಕೈಗೊಂಡರು
ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಂಭಾಗದಲ್ಲಿ ಶ್ರೀ ಬಾಬಾಸಾಹೇಬ್ ಡಾ//ಬಿ.ಆರ್.ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಉಪವಾಸ ಸತ್ಯಗ್ರಹಕ್ಕೆ ಚಾಲನೆ ನೀಡಿದರು.
ಸದ್ಯ ಚರಂಡಿ ಕಾಮಗಾರಿಯು ನಡೆಯುತ್ತಿದ್ದು ಈ ಕಾಮಗಾರಿಯ ಬಗ್ಗೆ ಈ ಹಿಂದೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ಈ ವಿಷೆಯದ ಕುರಿತು ಸ್ವ-ವಿಸ್ತಾರವಾಗಿ ತಿಳಿ ಹೇಳುವುದರ ಜೊತೆಗೆ ತಕರಾರು ಅರ್ಜಿ ಸಲ್ಲಿಸಿದ್ದ ಆಧಾರದ ಮೇಲೆ ಮಾನ್ಯ ಮುಖ್ಯಾಧಿಕಾರಿಗಳು ಮತ್ತು ಸಂಬಂದಪಟ್ಟ ಜೈ ಹಾಗೂ ಕಾಂಟ್ರಾಕ್ಟರ್ ಸ್ಥಳಕ್ಕೆ ಆಗಮಿಸಿ ಸೂಕ್ತ ಚರಂಡಿ ಮತ್ತು ಸಿ.ಸಿ. ರಸ್ತೆ ಕಾಮಗಾರಿ ನಡೆಯುವಲ್ಲಿ ಸರ್ಕಾರಿ ರಸ್ತೆ ಒತ್ತುವರಿ ಮಾಡಿರುವ ಮನೆಗಳ ಗೋಡೆಗೆ ಬಣ್ಣದಿಂದ ಮಾರ್ಕ ಮಾಡಿ ಹೋದರು. ಅಲ್ಲಿಂದ ಕೆಲವು ದಿನಗಳವರೆಗೆ ಕಾಮಗಾರಿ ಸ್ಥಗಿತ ಮಾಡಿದ್ದರು. ಮೂರು ದಿನಗಳ ಹಿಂದೆ ಸರ್ಕಾರಿ ರಜೆ ಇರುವುದರಿಂದ ಪುನಃ ಆ ಸ್ಥಳದಲ್ಲಿ ಕಾಮಗಾರಿ. ಪ್ರಾರಂಭಿಸಿರುವದನ್ನು ಗಮನಿಸಿದ ಅಂದು ಶ್ರೀಲಕ್ಷ್ಮಣ ಮುಖಿಯಾಜಿ ಸಮಾಜ ಸೇವಕರು & ಮಾಜಿ ಪ.ಪಂ. ಸದಸ್ಯರು. ಪಟ್ಟಣ ಪಂಚಾಯತ್ ಸದಸ್ಯರಾದ ಶಾಮೂರ್ತಿ ಅಂಚಿ. ಜೊತೆಗೂಡಿ ದೀಡಿರನೆ ಪಟ್ಟಣ ಪಂಚಾಯತ ಕಾರ್ಯಾಲಯದ ಮುಂದೆ ಉಪವಾಸ ಸತ್ಯಗ್ರಹ ಕೈಗೊಂಡಿದ್ದಾರೆ.
ಈ ಚರಂಡಿ ಕಾಮಗಾರಿಯು ಅವೈಜ್ಞಾನಿಕವಾಗಿ ಕೂಡಿರುತ್ತದೆ. ಜೊತೆಗೆ ಕಾಮಗಾರಿಯಲ್ಲಿರುವ ಯೋಜನಾ ವರದಿ ಮತ್ತು ಕ್ರೀಯಾ ಯೋಜನೆ ಪ್ರಕಾರ ಅಂದರೆ ಉದ್ದ/ಅಳತೆ ಇರುವುದಿಲ್ಲ. ಹಾಗಾಗಿ ಈ ಕಾಮಗಾರಿಯ ಯೋಜನೆ ಪ್ರಕಾರ ಕೆಲಸ ನಡೆಯಬೇಕು ಈ ಬೇಡಿಕೆ ಈಡೆರುವ ತನಕ ನಾನು ಮತ್ತು ನನ್ನ ಸಹ ಹೋರಾಟಗಾರರು ಈ ಹೋರಾಟ ಬಿಟ್ಟು ಎದ್ದೇಳುವುದಿಲ್ಲ ಎಂದರು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಆಗಮಿಸಿ ಒತ್ತುವರಿ ಮನೆಗಳ ಗೋಡೆಗೆ ಬಣ್ಣ ಹಚ್ಚಿ ಹೋದವರು ಇಂದು ಬದಲಾಗಿ, ವತ್ತುವರಿದಾರರ ಪರ ನಿಂತಿರುವುದು ಖಂಡನಿಯವಾಗಿದ್ದು.
ಮಾನ್ಯ ತಹಸೀಲ್ದಾರ್ ಸಾಹೇಬರು ಈ ಹೋರಾಟದ ಸ್ಥಳಕ್ಕೆ ಬರುತ್ತೆವೆ ಎಂದು ಭರವಸೆ ನೀಡಿದ್ದರು. ಆದರೆ ಬೇರೆ ಕೆಲಸದ ವತ್ತಡದಿಂದ ಬರುವುದಕ್ಕೆ ಸಾಧ್ಯವಾಗಲಿಲ್ಲ. ಇವರ ಪರವಾಗಿ ಉಪತಾಶಿಲ್ದಾರ್ ಮತ್ತು ಮುಖ್ಯಧಿಕಾರಿಗಳು ಈ ಹೋರಾಟದ ಸ್ಥಳಕ್ಕೆ ಬಂದು ಹೋರಾಟಗಾರರಿಗೆ ಮನ ಹೊಲಿಸಲು ಪ್ರಯತ್ನಿಸಿದರು. ಹಾಗ ಹೋರಾಟಗಾರರು ಇವರ ಮಾತಿಗೆ ಬಗ್ಗದೆ ಈ ಉಪವಾಸ ಸತ್ಯಗ್ರಹ ಮುಂದುವರಿಸಲಾಯಿತು.
ಹಾಗಾಗಿ ಕೂಡಲೆ ಈ ಕಾಮಗಾರಿಯನ್ನು ನೇರ ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿ ಮಾಡಬೇಕು, ಜೊತೆಗೆ ಸರ್ಕಾರಿ ರಸ್ತೆ ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕರ ವಾಹನಗಳಿಗೆ ಓಡಾಡಲು ಅನುಕೂಲಕರವಾಗಿ ರಸ್ತೆ ನಿರ್ಮಾಣವಾಗಬೇಕು, ಒತ್ತುವರಿ ಮನೆಗಳನ್ನ ತೇರವುಗೊಳಿಸಬೇಕು, ಒಂದುವೇಳೆ ತೆರವುಗೊಳಿಸುವಲ್ಲಿ ವಿಫಲವಾದರೆ ಮುಂದಿನ ದಿನಮಾನಗಳಲ್ಲಿ ಈ ಹೋರಾಟವು ದಿನದಿಂದ ದಿನಕ್ಕೆ ತೀರ್ವತೆಯನ್ನು ಹೆಚ್ಚಿಸಬೇಕಾಗುತ್ತದೆ ಜೊತೆಗೆ ಈ ಹೋರಾಟದಲ್ಲಿ ನಮ್ಮವರಿಗೆ ಏನಾದರು ಹೆಚ್ಚು ಕಮ್ಮಿಯಾದರೆ ಇದಕ್ಕೆ ನೇರ ಹೋಣೆಗಾರರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳೆ ಕಾರಣ ಎಂದು ಹೆಚ್ಚರಿಕೆ ನೀಡಿದರು.
ತದ ನಂತರ ಕೆಲವು ಸಮಯದ ನಡುವೆ ಅಧಿಕಾರಿಗಳು ಹಾಗೂ ಸಂಬಂದಪಟ್ಟ ಹೋರಾಟಗಾರರ ನಡುವೆ ಮಾತಿನ ಚಕಮುಕಿಯಾದ ನಂತರ ಅಂದರೆ ನಮ್ಮ ಬೇಡಿಕೆಗಳಿಗೆ ಸೂಕ್ತ ಮಾಹಿತಿ ಮತ್ತು ಭರವಸೆ ನೀಡುವ ಮುಖಾಂತರ ಅಂದರೆ ವತ್ತುವರಿದಾರರ ಮನೆ ಮಾಲಿಕರಿಗೆ ಮೂರು ದಿನಕ್ಕೊಮ್ಮೆ ನೋಟೀಸು ಜಾರಿಗೊಳಿಸುತ್ತೆವೆ. ಸತತವಾಗಿ ಮೂರು ನೋಟೀಸು ಜಾರಿಗೊಳಿಸಿದ ನಂತರ ನಾವುಗಳೆ ನೇರವಾಗಿ ಕ್ರೀಯಾ ಯೋಜನೆ ಮತ್ತು ಯೋಜನ ವರದಿ ಪ್ರಕಾರ ಮುಂದಿನ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ದಿನಾಂಕ 29/01/2024 ರಂದು ರಾತ್ರಿ 10 ಗಂಟೆ ಸುಮಾರಿಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡವರಿಗೆ ಭರವಸೆಯ ಮೂಲಕ ಭರವಸೆಯನ್ನ ನೀಡಿ ಉಪವಾಸ ನಿರತರಿಗೆ ಎಳೆನೀರು ಕೂಡಿಸುವ ಮೂಲಕ ಉಪವಾಸ ಸತ್ಯಗ್ರಹವನ್ನ ಮುಕ್ತಾಯಗೊಳಿಸಲಾಯಿತು.
ಈ ಹೋರಾಟದಲ್ಲಿ ಪ್ರಮುಖವಾಗಿ ಸಾಗರ ಬೇರಿ. ಕಳಕನಗೌಡ ವಕೀಲರು. ವೀರುಪಣ್ಣ ನಾಲತವಾಡ. ಅಮರೇಶ ಬಯ್ಯಾಪೂರ. ಮರೀಯಪ್ಪ ಬಿಸ್ತಿ, ರಾಜಾನಾಯಕ್ ಹಾಗೂ ಊರಿನ ಗುರು/ಹಿರಿಯರು ಜೊತೆಗೆ ಹೋರಾಟದ ಮನಸುಗಳು ಮುಂದಾಳತ್ವವಹಿಸಿ ಅಧಿಕಾರಿಗಳಿಗೆ ತರಟೆ ತಗೇದುಕೊಂಡು ಉಪವಾಸ ಸತ್ಯಗ್ರಹ ಹಮ್ಮಿಕೊಂಡತ್ತ ಹೋರಾಟಗಾರರ ಬೇಡಿಕೆಗೆ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ನಾಡ ಕಚೇರಿಯ ಉಪ-ತಹಶಿಲ್ದಾರರಾದ ಶರಣಪ್ಪ ಕಳ್ಳಿಮಠ. ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಯಾದ ನಭಿಸಾಬ ಖುದಾನ. ಹಾಗೂ ಸರ್ವ ಪಂಚಾಯತಿಯ ಸಿಂಬಂದಿವರ್ಗ ಮತ್ತು ಪೊಲೀಸ್ ಇಲಾಖೆಯ ಸಿಂಬಂದಿ ವರ್ಗದವರು. ಜೊತೆಗೆ ಸಹ ಹೋರಾಟಗಾರರಾದ ಗೌತಮ್ ಭಂಡಾರಿ. ಶ್ಯಾಮಿದಶಾಬ್ ಮೆಣೇದಾಳ. ಈರಪ್ಪ ನಾಯಕ. ಯಮನೂರಪ್ಪ ಬಿಳೆಗುಡ್ಡರವರು. ತಯಾಪ್ಪ ಪೂಜಾರಿ. ಸಿದ್ದಪ್ಪ ದುಮತಿ. ಉಪಸ್ಥಿತರಿದ್ದರು. ಹಾಗೂ ಮಹಿಳೆಯರು ಯಲ್ಲಮ್ಮ ಸಣ್ಣಮುದಕಪ್ಪ ಡೊಕ್ಕಣವರು. ಶಾಮವ್ವ ವಿಭೂತಿ ಹಾಗೂ ವಾರ್ಡಿನ ಮಹಿಳೆಯರು ಯುವಕರು ಉಪಸ್ಥಿತರಿದ್ದರು *
ವರದಿ-ಉಪಳೇಶ ವಿ.ನಾರಿನಾಳ.