ಇನ್ನು ಕೆಲವೇ ತಿಂಗಳಲ್ಲಿ ಜರುಗುವ ಲೋಕಸಭಾ ಚುನಾವಣೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗಂಗಾಮತ ಸಮಾಜದ ಪ್ರಮುಖ ಮುಖಂಡರಾಗಿರುವ ಶ್ರೀ ಪ್ರಮೋದ್ ಮಧ್ವರಾಜ್ ರವರಿಗೆ ಬಿಜೆಪಿ ಟಿಕೆಟ್ ನಿಡಬೆಕೆಂದು ಬಾಗಲಕೋಟೆ ಜಿಲ್ಲೆಯ ಇಲಕಲ್ಲ ನಗರದ ಗಂಗಾಮಾತ ಸಮಾಜದ ಹಿರಿಯರು ಯುವಕರು ಒತ್ತಾಯಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ೨೦೧೯ ರಲ್ಲಿ ಬಿಜೆಪಿ ಪಕ್ಷ ಯಾವುದೇ ಓಬಿಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ ರಾಜ್ಯದಲ್ಲಿ ಗಂಗಾಮತ ಸಮಾಜದ ಜನ ಸಂಖ್ಯೆಯೂ ೫೦ ಶೇ.ದಷ್ಟಿದ್ದರೂ ಓಬಿಸಿ ಅಭ್ಯರ್ಥಿಗಳಿಗೆ ಒಂದೆ ಒಂದು ಸೀಟು ನಿಡಿಲ್ಲವಾದ್ದರಿಂದ ಬಿಜೆಪಿ ಓಬಿಸಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ೨೮ ಲೋಕಸಭಾ ಕ್ಷೇತ್ರದಲ್ಲಿ ಹಂಚಿಕೊಂಡಿರುವ ಹಿಂದುಳಿದ ವರ್ಗಕ್ಕೆ ಸೇರಿದ ಮೀನುಗಾರರ ಮಹತ್ವದ ಸವಾಲುಗಳನ್ನು ಎದುರಿಸುತ್ತಿದ್ದು. ರಾಜಕೀಯ ವೇದಿಕೆಗಳಲ್ಲಿ ಮನ್ನಣೆ ಹಾಗೂ ಪ್ರಾತಿನಿಧ್ಯ ಪಡೆಯಲು ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಬೇಕೆನ್ನುವದು ಸಮುದಾಯದ ಧ್ವನಿಯಾಗಿದೆ. ಪ್ರಮೋದ್ ಮಧ್ವರಾಜ್ರವರು ೧೨ ವರ್ಷಗಳಿಂದ ಮೋಘವಿರ ಮಹಾಜನ ಸಂಘದ ಅಧ್ಯಕ್ಷರಾಗಿ ೧೩ ವರ್ಷಗಳಿಂದ ಕರ್ನಾಟಕ ಕರಾವಳಿ ಮೀನುಗಾರರ ಕ್ರೀಯಾ ಸಮಿತಿ ಅಧ್ಯಕ್ಷರಾಗಿ ೬ ವರ್ಷಗಳಿಂದ ರಾಷ್ಟ್ರೀಯ ಮೀನುಗಾರರ ವೇದಿಕೆಯ ಕಾರ್ಯದರ್ಶಿಯಾಗಿ ಗುರುತಿಸಿದ್ದಾರೆ. ನಾಡಿನ ಸಮಸ್ಯೆ ಬಗ್ಗೆ ತಿಳಿದಿರುವ ಇಂತಹ ವ್ಯಕ್ತಿಯೇ ನಮ್ಮ ಗಂಗಾಮತ ಹಾಗೂ ಮೋಘವಿರರು ಸಮುದಾಯದವರು ಸಂಸದರಾಗಬೇಕು ಎಂದು ಸಮಸ್ತ ಇಲಕಲ್ ನಗರದ ಮುಖಂಡರಾದ ಬಸವರಾಜ ಎನ್ ಜುಮಲಾಪೂರ,ಗದ್ದೆಪ್ಪ ತಪ್ಪಲದಡ್ಡಿ.ಯಮನಪ್ಪ ಹಂಚಿನಾಳ,ಬಾಲಕೃಷ್ಣ ಜುಮಲಾಪೂರ,ವಿಜಯ ಜಾಲಗಾರ್,ಮುತ್ತಣ್ಣ ಅಂಬಿಗೇರ,ಗಿರಿಯಪ್ಪ ತಪ್ಪಲದಡ್ಡಿ,ಭೀಮಣ್ಣ ಮಡ್ಡಿಕಾರ,ಹುಲುಗಪ್ಪ ಕಿಡದೂರು ಸಾಯಿಕುಮಾರ ಹಾಗೂ ಇಲಕಲ್ ನಗರದ ಗಂಗಾಮಾತ ಸಮಾಜದ ಹಿರಿಯರು ಒತ್ತಾಯಿಸಿದ್ದಾರೆ.
ವರದಿ-ಅಮಾಜಪ್ಪ ಜುಮಲಾಪೂರ ಪತ್ರಕರ್ತರ.