ಜಾತಿ ಧರ್ಮಗಳ ಬಿಟ್ಟು ನಾವೆಲ್ಲರೂ ಶಿಕ್ಷಣ ಉದ್ಯೋಗದಲ್ಲಿ ಸಮಾನರು : ಚಂದ್ರು ದೇಸಾಯಿ ಯಲಬುರ್ಗಾ : ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಕೊಪ್ಪಳ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಲೂಕಿನ ಮುಧೋಳ ಗ್ರಾಮಕ್ಕೆ ಆಗಮಿಸಿ ನಂತರ ಕರಮುಡಿ ಹಿರೇಮ್ಯಾಗೇರಿ ಸಂಕನೂರು ಬಳೂಟಗಿ ಗ್ರಾಮಕ್ಕೆ ಸಂಚರಿಸಿ, ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯನ್ನು ತಾಲೂಕಿನ ಮುಧೋಳ ಗ್ರಾಮಕ್ಕೆ ಆಗಮಿಸಿದ ಕ್ಷಣವನ್ನು ಅದ್ದೂರಿ ಸಂಭ್ರಮದಿಂದ ಸಕಲ ವಾದ್ಯ ಮೇಳಗಳ ಜೊತೆ ಮಹಿಳೆಯರು ಆರತಿ ತಟ್ಟೆಯಿಂದ ಬೆಳಗುವ ಮೂಲಕ ಸ್ವಾಗತಿಸಿದರು, ತಾಲೂಕಿನ ಮುಧೋಳ ಗ್ರಾಮಕ್ಕೆ ಬಂದು ತಲುಪಿದ ಸಂವಿಧಾನ ಜಾಗೃತಿ ರಥಯಾತ್ರೆಯನ್ನು ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿ ವಿಕೆ ಬಡಿಗೇರ್ ಅವರು ಡಾ, ಬಾಬಾ ಸಾಹೇಬ ಅಂಬೇಡ್ಕರ್ ಸಂವಿಧಾನ ಜಾಗೃತಿ ರಥಯಾತ್ರೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸ್ವಾಗತಿಸಿದರು, ಮುಖಂಡರಾದ ಚಂದ್ರು ದೇಸಾಯಿ ಅವರು ಮಾತನಾಡಿ ಭಾರತದ ಸಂವಿಧಾನದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರು ಎಲ್ಲಾ ಜಾತಿ ಧರ್ಮಗಳು ತಮ್ಮ ಜಾತಿಗಳನ್ನು ಬಿಟ್ಟು ನಾವೆಲ್ಲರೂ ಶಿಕ್ಷಣ ಉದ್ಯೋಗದಲ್ಲಿ ಸಮಾನರು ಮತ್ತು ಸಾರ್ವಜನಿಕರಲ್ಲಿ ಎಲ್ಲರೂ ಅಣ್ಣ ತಮ್ಮಂದಿರಾಗಿ ಬದುಕಬೇಕೆಂಬುದೇ ವಿದ್ಯಾರ್ಥಿಗಳು ಈಗ ಓದಿದ ಸಂವಿಧಾನದ ಪ್ರಸ್ತಾವನೆಯ ಮೊದಲನೆಯ ಪುಟವಾಗಿದೆ ಎಂದು ಹೇಳಿದರು, ನಂತರ ಮಾತನಾಡಿದ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳಾದ ವಿ ಕೆ ಬಡಿಗಾರ ಅವರು ಮಾತನಾಡಿ ಸಂವಿಧಾನ ಧ್ಯಾಯದಲ್ಲಿ ನಾವು ಬದುಕುತ್ತಿದ್ದೇವೆ ಅವರ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ, ಜೊತೆಗೆ ಪ್ರತಿಯೊಬ್ಬರೂ ಸಂವಿಧಾನದ ಬಗ್ಗೆ ಅರಿತುಕೊಳ್ಳಬೇಕು ಎಂದರು, ನಂತರ ಇನ್ನೊರ್ವ ಸಮಾಜದ ಮುಖಂಡರಾದ ಛತ್ರಪ್ಪ ಚಲವಾದಿ ಅವರು ಪ್ರಪಂಚದ ಅತಿ ದೊಡ್ಡ ಪ್ರಜಾ ಪ್ರಭುತ್ವ ಹೊಂದಿರುವ ರಾಷ್ಟ್ರ ಭಾರತ ಅನೇಕ ದೇಶಗಳಲ್ಲಿ ಸಂವಿಧಾನವನ್ನು ಅಧ್ಯಯನ ನಡೆಸಿ ದೇಶಕ್ಕೆ ಒಂದುವಂತೆ ಸಂವಿಧಾನ ರಚಿಸಿದ್ದಾರೆ ಎಂದು ಹೇಳಿದರು,
ಗ್ರಾಮದ ಅಂಬೇಡ್ಕರ್ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೂ ಎಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಂವಿಧಾನದ ಗೀತೆಗಳು ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾಗೃತಿಯ ಬಗ್ಗೆ ಪಠಣೆ ಮಾಡುತ್ತಾ ಹೆಜ್ಜೆ ಹಾಕಿದರು, ರಥಯಾತ್ರೆಯ ಮೆರವಣಿಗೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹುಸೇನಿಬಿ ಹಿರೇಮನಿ ಅವರು ಡಾ, ಬಿ ಆರ್ ಅಂಬೇಡ್ಕರ್ ಅವರ ರಥಯಾತ್ರೆಗೆ ಮಾಲಾರ್ಪಣೆ ಮಾಡಿದರು, ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವೀರಭದ್ರಗೌಡ ಮೂಲಿಮನಿ, ಗ್ರಾಮ ಲೆಕ್ಕಾಧಿಕಾರಿಗಳಾದ ದುರ್ಗಪ್ಪ ಹೊಸಮನಿ, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಇದ್ದರು, ವಿ ಆರ್ ಡಬ್ಲ್ಯೂ ವೀರಭದ್ರಪ್ಪ ನಿಡಗುಂದಿ, ಅಂಗನವಾಡಿ ಮೇಲ್ವಿಚಾರಕಿಯರಾದ ಚೆನ್ನಮ್ಮ ಶಾನುಭೋಗರ್, ಪತ್ರಕರ್ತರಾದ ಭೀಮಣ್ಣ ಹವಳಿ ಕರಮುಡಿ, ಹುಸೇನ್ ಮೊತೇಖಾನ್ ಗ್ರಾಮದ ಮುಖಂಡರಾದ ಚಂದ್ರು ದೇಸಾಯಿ, ಹುಸೇನಸಾಬ್ ಹಿರೇಮನಿ, ಎಲ್ಲಪ್ಪ ಹುನಗುಂದ, ಇಮಾಮಸಾಬ ಹಿರೇಮನಿ, ತಿರಣಪ್ಪ ತಳವಾರ, ಅಮರೇಶ್ ಹುನುಗುಂದ, ಮಂಜುನಾಥ್ ಮುರುಡಿ ಶಿಕ್ಷಕರು, ಸಮಾಜದ ಮುಖಂಡರು ಛತ್ರಪ್ಪ ಚಲವಾದಿ, ಯಮನೂರಪ್ಪ ಅರಬರ, ಶಿವಪ್ಪ ಚಲವಾದಿ, ನಾಗಪ್ಪ, ಮುದುಕಪ್ಪ ಹರಿಜನ, ಮುತ್ತಪ್ಪ ಚಲವಾದಿ, ಮುತ್ತಪ್ಪ, ಮುದುಕಣ್ಣಪ್ಪ ಹರಿಜನ ಲಕ್ಷ್ಮಪ್ಪ, ಮಹಿಳಾ ಸಂಘದ ಈರಮ್ಮ ಮಂಡಲ ಗೇರಿ, ಲಕ್ಷ್ಮಿ ಛತ್ರಪ್ಪ ಚಲವಾದಿ ಇನ್ನುಳಿದ ಮಹಿಳಾ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮದ ಎಲ್ಲಾ ಶಾಲೆಯ ಶಿಕ್ಷಕರು ಶಿಕ್ಷಕಿ ವೃಂದದವರೆಲ್ಲರೂ ಹಾಗೂ ಗ್ರಾಮ ಪಂಚಾಯಿತಿ ಎಲ್ಲಾ ಸಿಬ್ಬಂದಿ ವರ್ಗದವರೆಲ್ಲರೂ ಈ ಸಂವಿಧಾನ ಜಾಗೃತಿ ಜಾತ ರಥಯಾತ್ರೆಗೆ ಎಲ್ಲಾ ಶಾಲೆಯ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳೆಲ್ಲರೂ ಗ್ರಾಮದ ಸರ್ವರೂ ಉಪಸ್ಥಿತರಿದ್ದರು, ನಂತರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಲಿದೆ,
( ಕೋಟ ) ಸಂವಿಧಾನ ಪೀಠಿಕೆ ಓದಿದ ವಿದ್ಯಾರ್ಥಿನಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿಯಾದ ಶಿಫಾ ಅಬ್ದುಲ್ ರಜಾಕ್ ಹಿರೇಮನಿ ವಿದ್ಯಾರ್ಥಿನಿಯು ಅತ್ಯಂತ ನೆನಪಿನ ಶಕ್ತಿಯನ್ನು ಇಟ್ಟುಕೊಂಡು ತಾಲೂಕ ಅಧಿಕಾರಿಗಳು ಮತ್ತು ಗ್ರಾಮದ ಅಧಿಕಾರಿಗಳು ಸಾರ್ವಜನಿಕರ ಹಾಗೂ ಎಲ್ಲ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿಯನ್ನು ಓದಿದಳು,
ವರದಿ-ಹುಸೇನಸಾಬ ಮೋತೆಖಾನ್.