ದೇಶದ ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಶನಿವಾರ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣಕ್ಕೆ ಆಗಮಿಸಿತು. ಸಂಜೆ 7 ಗಂಟೆಗೆ ಆಗಮಿಸಿದ ಜಾಗೃತಿ ಜಾಥಾವನ್ನು ತಾವರಗೇರಾ ಪಟ್ಟಣದ ಸಾರ್ವಜನಿಕರು ಹಾಗೂ ಊರಿನ ಮುಖಂಡರು ಪಾಲ್ಗೊಂಡು ಈ ಸಂವಿಧಾನ ಜಾಗೃತಿ ಜಾಥಾವನ್ನು ಯಶಸ್ವಿಯಾಗಿ ಆಚರಿಸಲಾಯಿತು. ನಡೆ-ನುಡಿಗೆ ಹೆಸರಾಗಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಬಾಬಾಸಾಹೇಬರ ಆಲೋಚನೆಗಳಿಗೆ ನೀರೆರೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪನವರ ಮಹತ್ವಾಕಾಂಕ್ಷಿ ಆಂದೋಲನವಾದ “ಸಂವಿಧಾನ ಜಾಗೃತಿ ಜಾಥಾ” ಅರಿವಿನ ಕಹಳೆಯನ್ನು ಊದುತ್ತಿದೆ. ಈ ಜ್ಞಾನದ ಕ್ರಾಂತಿಕಹಳೆ ಮನುಸ್ಯರ ಅಂತರಂಗದೊಳಗಿರುವ ಕತ್ತಲೆಗೆ ಬೆಳಕಾಗಲಿ, ಆ ಮೂಲಕ ಜಾತಿ ಸಂಕೋಲೆಗಳಿಂದ ಬಿಡುಗೊಂಡ ಸಮಾಜ ಮಾನವೀಯ ನೆಲೆಯಲ್ಲಿ ಬದುಕುತ್ತಾ, ಪ್ರಜ್ಞೆ ಕರುಣೆ, ಸಮತೆ, ಮೈತ್ರಿ ಹಾಗೂ ದಯೆಯನ್ನು ಪ್ರತಿಪಾದಿಸುತ್ತಾ ಏಳಿಗೆ ಹೊಂದಲಿ, ಬಾಬಾಸಾಹೇಬರು ಕಣ್ಣೀರು ಹಾಕುತ್ತಾ ತಮ್ಮ ಕೊನೆಯ ಸಂದೇಶವನ್ನು ನಾನಕ್ ಚಂದು ರತ್ತುವರೊಟ್ಟಿಗೆ ಹೀಗೆ ಹೇಳುತ್ತಾರೆ, ‘‘ಬಹಳ ಕಷ್ಟಪಟ್ಟು ನನ್ನ ಹೋರಾಟದ ರಥವನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ಇದು ಹೀಗೇ ಮುನ್ನಡೆಯಬೇಕು.ಎಂದರು, ಒಟ್ಟಿನಲ್ಲಿ ಸಂವಿಧಾನ ಜಾಗೃತಿ ಜಾಥಾವು ಅರ್ಥಪೂರ್ಣವಾಗಿ ಆಚರಿಸಲಾಯಿತು, ರಾತ್ರಿ ಡಾ// ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಡಾ// ಬಿ.ಆರ್. ಅಂಬೇಡ್ಕರ್ ಸಂವಿಧಾನ ಶಿಲ್ಫಿಯ ಮೂರ್ತಿಗೆ ಮಾಲರ್ಪಾಣೆ ಮಾಡಿ ಸಂವಿಧಾನ ಜಾಗೃತಿ ಜಾಥಾವನ್ನು ಮುಕ್ತಾಯಗೊಳಿಸಲಾಯಿತು,
ಈ ಸಂಧರ್ಭದಲ್ಲಿ ಪಂಚಾಯತಿಯ ಸರ್ವ ಸಿಂಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಪೋಲಿಸ್ ಸಿಂಬಂದಿ ವರ್ಗದವರು, ಹಾಗೂ ಊರಿನ ಪ್ರಮೂಖ ಮುಖಂಡರು, ಯುವಕರು ಉಪಸ್ಥಿತರಿದ್ದರು.
ವರದಿ-ಉಪಳೇಶ ವಿ.ನಾರಿನಾಳ.