ಶ್ರೀ ಸೇವಾಲಾಲ್ ಜನ್ಮಸ್ಥಳ ಸೂರಗೊಂಡನಕೊಪ್ಪದಲ್ಲಿ ದಿನಾಂಕ:13.02.2024 ರಂದು ಶ್ರೀ ಸೇವಾಲಾಲ್ ಮಹಾರಾಜರ 285 ನೇ ಜಯಂತ್ಯೋತ್ಸವದ ಪ್ರಯುಕ್ತ ಹಾತಿರಾಂಬಾವ ವೇದಿಕೆಯಲ್ಲಿ ಸಂಜೆ 6 ಗಂಟೆಯಿಂದ ನಡೆದ ಬಂಜಾರ ಭಾಷಾ ರಾಜ್ಯಮಟ್ಟದ ಕವಿಗೋಷ್ಠಿಯು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು. ನೂರಾರು ಜನ ಮಾಲಾಧಾರಿಗಳ ಸಮ್ಮುಖದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಬಂಜಾರ ಭಾಷಾ ಬರಹಗಾರರ ಕವಿತಾ ವಾಚನವನ್ನು ತಮ್ಮ ಚಪ್ಪಾಳೆಗಳ ಮೂಲಕ ಹುರಿದುಂಬಿಸಿ ಆಸ್ವಾದಿಸಿದರು. ಈ ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ಹಿರಿಯ ಸಾಹಿತಿಗಳಾದ ಶ್ರೀಮತಿ ಇಂದುಮತಿ ಲಮಾಣೀಯವರು ವಹಿಸಿ ನಮ್ಮ ಕಷ್ಟಗಳೇ ನಮ್ಮ ಸಾಹಿತ್ಯಕ್ಕೆ ಪ್ರೇರಣೆ ಎಂದು ಹೇಳಿ ಕವನ ವಾಚನ ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಲಾವಿದರು ಸಾಹಿತಿಗಳು ಆದ ಶ್ರೀ ವಸಂತ ಎಲ್ ಚವ್ಹಾಣ್ ರವರು ವಹಿಸಿ ತಮ್ಮ ಹಾಡಿನ ಮೂಲಕ ಮನರಂಜನೆ ನೀಡಿದರು ಇದೇ ಸಂದರ್ಭದಲ್ಲಿ ಮಾಜಿ ಸಚಿವರು ಆದ ಶ್ರೀ ರೇಣುಕಾಚಾರ್ಯರು ಶ್ರೀಮತಿ ಇಂದುಮತಿ ಲಮಾಣೀಯವರ ಮಠ ಕಾದಂಬರಿಯನ್ನು ಲೋಕಾರ್ಪಣೆ ಮಾಡಿ ಬಂಜಾರ ಜನಾಂಗದ ಹಿರಿಮೆ ಕಷ್ಟ ಸಹಿಷ್ಣುತೆಯನ್ನು ಕೊಂಡಾಡಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಹಿರಿಯ ಬಂಜಾರ ಸಾಹಿತಿಗಳಾದ ಶ್ರೀ ಮಧುನಾಯ್ಕ ಲಂಬಾಣಿ ಹೂವಿನ ಹಡಗಲಿ ಇವರು ಬಂಜಾರ ಜನಾಂಗದ ಪ್ರಸ್ತುತ ಸ್ಥಿತಿಗತಿಯನ್ನು ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ಕವಿತೆಗಳು ರಚನೆಯಾಗಬೇಕು ಅದು ಸಮುದಾಯಕ್ಕೆ ತಲುಪಬೇಕು ಎಂದು ಹೇಳಿದರು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶ್ರೀ ನರ್ಸಿಂಗ್ ಲಮಾಣಿ ಗೋಕರ್ಣ ಹಿರಿಯ ಸಾಹಿತಿಗಳು ಉತ್ತರ ಕನ್ನಡ ಇವರು ವಹಿಸಿ ಬಂಜಾರ ಭಾಷೆಯ ವೈಶಿಷ್ಟ್ಯಗಳನ್ನು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಮಹಾಮಠ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯಾದಗಿರಿ ಜಿಲ್ಲೆಯ ಬಂಜಾರ ಹಿರಿಯ ಸಾಹಿತಿಗಳಾದ ಶ್ರೀ ಹೆಚ್. ವಾಯ್. ರಾಠೋಡ್ ರವರು ವಹಿಸಿದ್ದರು.ನಿರೂಪಣೆಯನ್ನು ಶ್ರೀ ಛತ್ರಪ್ಪ ತಂಬೂರಿ ಗಂಗಾವತಿ ಮಾಡಿದರು. ಪ್ರಾರ್ಥನೆ ಗೀತೆಯನ್ನು ಶ್ರೀ ಗೋಪಾಲ ನಾಯ್ಕ ಕುಷ್ಟಗಿ ಹಾಡಿದರು. ಶ್ರೀಮತಿ ಸುವರ್ಣ ರಾಠೋಡ್ ಯಾದಗಿರಿ ಸ್ವಾಗತಿಸಿದರು. ಶ್ರೀ ರಾಮು ಎನ್ ರಾಠೋಡ್ ಮಸ್ಕಿ ನಿರ್ವಹಣೆ ಮಾಡಿದರು. ಕಾರ್ಯಕ್ರಮದ ಉಸ್ತುವಾರಿ ಶ್ರೀ ಡಿ ಆರ್ ಗಿರೀಶ ಅಧ್ಯಕ್ಷರು ಯುವಕರ ಮತ್ತು ವಿದ್ಯಾರ್ಥಿ ಸಂಘ ಹಾಗೂ ಕು. ಅಂಜಲಿ ನಿರ್ದೇಶಕರು ಮಹಾಮಠ ಸಮಿತಿ ಇವರು ವಹಿಸಿದ್ದರು.
ವರದಿ-ಸಂಪಾದಕೀಯಾ.