ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಡಾ| ಶಾಮೀದ್ ದೋಟಿಹಾಳ ಅಧ್ಯಕ್ಷರು ಬ್ಲಾಕ್ ಕಾಂಗ್ರೇಸ್ ಕಮೀಟಿ ಕುಷಗಿ ಇವರು ಅಗ್ರಹಿಸುವುದೇನಂದರೆ, ಮಾನ್ಯ ಮುಖ್ಯ ಮುಂತ್ರಿಗಳು ಹಾಗೂ ಶ್ರೀಡಿ.ಕೆ. ಶಿವಕುಮಾರ ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತಿಗಳಲ್ಲಿ ವಿನಂತಿ ಪೂರ್ವವಕವಾಗಿ ಆಗಹಿಸುವುದೇನೆಂದರೆ, ನಮ್ಮ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದು ಸುಮಾರು 9 ತಿಂಗಳುಗಳಾಗಿವೆ ಸಾಕಷ್ಟು ಜನ ಹಾಲಿ ಶಾಸಕರನ್ನು ಹಾಗೂ ಕಾರ್ಯಕರ್ತರನ್ನು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿಸಿ, ಸದಸ್ಯರನ್ನಾಗಿ ನೇಮಕಮಾಡಿರುವದು ಸಂತಸ ತಂದಿದೆ, ಆದರೆ ಈ ವರೆಗೆ ನಮ್ಮ ಕೊಪ್ಪಳ ಜಿಲ್ಲೆಗೆ ಪಾತಿನಿತ್ಯ ಸಿಗದೆ ಇರುವುದು ಬೇಸರದ ಸಂಗತಿ. ನಮ್ಮ ಹಿರಿಯ ಮಾಜಿ ಶಾಸಕರು ಕೆ.ಪಿ.ಸಿ.ಸಿ.ಸದಸ್ಯರು ಹಾಗೂ ಕೆ.ಪಿ.ಸಿ.ಸಿ. ರಾಜ್ಯ ಉಪಾಧ್ಯಕರು ಆಗಿರುವ ಶ್ರೀಯುತ ಹಸನಸಾಬ ದೋಟಿಹಾಳ ಅವರನ್ನು ತಾವೇ ವಾಗ್ದಾನ ಮಾಡಿರುವಂತೆ ಈ ವರೆಗೆ ಎಮ್.ಲ್.ಸಿ. ಯಾಗಲಿ ಅಥವಾ ರಾಜ್ಯ ಮಟ್ಟದ ನಿಗಮಕ್ಕಾಗಲಿ ಈ ವರೆಗೆ ನೇಮಕ ಮಾಡದಿರುವುದು ಕೊಪ್ಪಳ ಜಿಲ್ಲೆಯ ಅಲ್ಪ ಸಂಖ್ಯಾತರಿಗೆ ಬೇಸರದ ವಿಷಯವಾಗಿದೆ. ಗಣನಿಯ ಪ್ರಮಾಣದಲ್ಲಿ ಅಲ್ಪ ಸಂಖ್ಯಾತರನ್ನು ಹೊಂದಿರುವ ಶೇ 95% ಕಾಂಗ್ರೇಸ್ಗೆ ಬೇನ್ನೆಲುಬಾಗಿರುವ ಅಲ್ಪ ಸಂಖ್ಯಾತರನ್ನು ತಾವುಗಳು ನಮ್ಮ ನಾಯಕರುಗಳನ್ನು ಯಾವುದೇ ಸಂವಿಧಾನ ಬದ್ದ ಹುದ್ದೇಗಳಿಗೆ ನೇಮಕ ಮಾಡದಿರುವುದು ಬಹುದಿನಗಳಿಂದ ಕಂಡು ಬರುತ್ತಿದೆ, ಆದರೆ ಯಾವತ್ತು ಕೂಡ ಅಲ್ಪ ಸಂಖ್ಯಾತರು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಹಾಗಾಗಿ ತಾವುಗಳು ಆದಷ್ಟು ಬೇಗನೆ ಶ್ರೀಹಸನಸಾಬ ದೋಟಿಹಾಳ ಅವರನ್ನು ವಿಧಾನ ಪರಿಷತ್ ಆಗಲಿ ಅಥವಾ ನಿಗಮ ಮಂಡಳಿಗೆ ನೇಮಕ ಮಾಡಬೇಕೆಂದು ವಿನಂತಿ ಪೂರ್ವಕವಾಗಿ ಆಗ್ರಹಿಸುತ್ತೇನೆ.
ಡಾ| ಶಾಮೀದ್ ದೋಟಿಹಾಳ ಅಧ್ಯಕ್ಷರು ಬ್ಲಾಕ್ ಕಾಂಗ್ರೇಸ್ ಕಮೀಟಿ ಕುಷಗಿ. ಅಲ್ಫಾ ಸಂಖ್ಯಾತರ ಘಟಕ.
ವರದಿ-ಉಪಳೇಶ ವಿ.ನಾರಿನಾಳ.