ಮುದೇನೂರಿನ ವಸತಿ  ನಿಲಯದಲ್ಲಿ  ತಂದೆ ತಾಯಿಗಳ ಪಾದಪೂಜೆ ನೆರವೇರಿಸಿದ ಮಕ್ಕಳು…

Spread the love

ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ವಿಶೇಷವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವೇನೆಂದರೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮದ ಸರಳವಾಗಿ ವಿಶಿಷ್ಟವಾಗಿ ನಡೆಯಿತು.ಇದರಲ್ಲಿ ಏನು ವಿಶೇಷವೇನೆಂದರೆ  ವಸತಿ ನಿಲಯದಲ್ಲಿರುವ ಮಕ್ಕಳ ಎಲ್ಲ ತಂದೆ ತಾಯಂದಿರನ್ನು ಕರೆಸಿ ಅವರವರ ಮಕ್ಕಳಿಂದ ಅವರ ಪಾಲಕರಿಗೆ ಪಾದಪೂಜೆ ಮಾಡಿದ್ದು ವಿಶೇಷವಾಗಿತ್ತು. ತಂದೆ ತಾಯಂದಿರ ಪಾದಪೂಜೆ ಮಾಡುವ ಮೂಲಕ  ಮಕ್ಕಳು ತಂದೆ ತಾಯಂದಿರಲ್ಲಿ ದೇವರನ್ನ ಕಂಡರು. ಸಂದರ್ಭದಲ್ಲಿ ಮೆಟ್ರಿಕ್ ಪೂರ್ವ ವಸತಿ ನಿಲಯದ ಮೇಲ್ವಿಚಾರಕರು, ಸಹಾಯಕರು, ಗ್ರಾಮದ ಗುರು ಹಿರಿಯರು ಯುವ ಮಿತ್ರರು ಪಾಲಕರು ಉಪಸ್ಥಿತರಿದ್ದರು.

ವರದಿ-ಚಂದ್ರುಶೇಖರ ಕುಂಬಾರ ಮುದೇನೂರ.

Leave a Reply

Your email address will not be published. Required fields are marked *