ಕರ್ನಾಟಕ ಸಕ್ಷಮ ದಕ್ಷಿಣ ಪ್ರಾಂತದ ವಿಶೇಷಚೇತನರ ರಾಜ್ಯ ಅಧಿವೇಶನ ಕಾರ್ಯಾಕ್ರಮ ಯಶಸ್ವಿ.
3/3/2024 ಭಾನುವಾರ ಬೆಂಗಳೂರಿನ ಕೆ.ಆರ್ ರಸ್ತೆ, ಕುವೆಂಪು ಕಲಾಕ್ಷೇತ್ರದ ಸಭಾಂಗಣದಲ್ಲಿ ಕರ್ನಾಟಕ ಸಕ್ಷಮ ದಕ್ಷಿಣ ಪ್ರಾಂತದ ವಿಶೇಷಚೇತನರ ರಾಜ್ಯ ಅಧಿವೇಶನವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಉಧ್ಗಾಟನೆಯನ್ನು ಮಾಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಗಳಾದ ಬಸವರಾಜ ಬೊಮ್ಮಾಯಿ :ದಿವ್ಯಾಂಗರಿಗೆ ಅವಕಾಶ ನೀಡಿದರೆ ಅವರು ಸಾಧಿಸುವ ಛಲ ಹೊಂದಿದ್ದು. ಅವರು ಸ್ವಾಭಿಮಾನದಿಂದ ಬದುಕುತ್ತಾರೆ. ಅವರು ನಿಜವಾದ ಯೋಗಿಗಳು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ ಸಕ್ಷಮ ವಿಶೇಷಚೇತನರ ದಕ್ಷಿಣ ಪ್ರಾಂತ ಅಧಿವೇಶನ ಉಧ್ಗಾಟಿಸಿ ಮಾತನಾಡಿ, ವಿಶೇಷಚೇತನರು ಯಾರು, ಎಲ್ಲ ಅಂಗಾಂಗಳನ್ನು ಹೊಂದಿರುವ ನಾವು ನೆಮ್ಮದಿಯಿಂದ, ಖುಷಿಯಿಂದ ಇದ್ದೇವೆಯೇ?ಭಗವಂತ ಕೊಟ್ಟಿರುವ ಎಲ್ಲ ಅಂಗಾಂಗಗಳನ್ನು ಸರಿಯಾಗಿ ಬಳಸಿಕೊಂಡಿದ್ದೇವಾ?ಇ.ಎನ್.ಟಿ ಪರೀಕ್ಷೆ ಮಾಡಿಸುವವರು ಯಾರು?ಕಣ್ಣಿನ ಪರೀಕ್ಷೆ ಮಾಡಿಸುವವರು ನಾವು ನಿಜವಾದ ದಿವ್ಯಾಂಗರು, ಕೆಲವು ಅಂಗ ನ್ಯೂನತೆ ಇರುವರು ಛಲದಿಂದ ಬದುಕುತ್ತಾರೆ ಎಂದು ಹೇಳಿದರು. ನಾವು ಕೆಲವು ಸಾರಿ ಬಿಕ್ಷುಕರಾಗುತ್ತೇವೆ, ರಾಜಕಾರಣಿಗಳು ಟಿಕೆಟ್ ಭಿಕ್ಷೆ ಬೇಡುತ್ತಾರೆ. ವ್ಯಾಪಾರಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಆದರೆ ದಿವ್ಯಾಂಗರು ಸ್ವಾಭಿಮಾನದಿಂದ ಬದುಕುತ್ತಾರೆ. ದೇಶದ ಜಿಡಿಪಿ ಗೆ ದಿವ್ಯಾಂಗರ ಕೊಡುಗೆ ಏನು ಎಂದು ರಾಷ್ಟ್ರಮಟ್ಟದಲ್ಲಿ ಸಮೀಕ್ಷೆಯಾಗಬೇಕು. ಆಗ ಅವರ ಸೇವೆ ಏನಿದೆ ಅಂತ ಎಲ್ಲರಿಗೂ ಗೊತ್ತಾಗುತ್ತದೆ. ಅವರು ಎಲ್ಲ ರಂಗದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಕಲ್ಪನಾ ಶಕ್ತಿ ಬಹಳ ವಿಸ್ತಾರವಾಗಿರುತ್ತದೆ. ಸಾಮಾನ್ಯ ಮನುಷ್ಯರಿಗಿಂತ ಮಿಗಿಲಾದ ಕಲ್ಪನಾ ಶಕ್ತಿಯನ್ನು ದಿವ್ಯಾಂಗರು ಹೊಂದಿರುತ್ತಾರೆ ಎಂದರು. ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಆದರೆ, ಅವರಿಗೆ ಸರಿಯಾಗಿ ಮುಟ್ಟಿಸುವ ಕೆಲಸ ಆಗುವುದಿಲ್ಲ, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವುದೇ ಯೋಜನೆ ಅಂತಿಮ ವ್ಯಕ್ತಿಗೆ.ತಲುಪುವಂತೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು. ಈ ವೇಳೆ ಶಾಸಕರಾದ ಉದಯ ಗರುಡಾಚಾರ್, ಎನ್ ರವಿಕುಮಾರ್ ವಿಧಾನ ಪರಿಷತ್ ಸದಸ್ಯರು, ವಿಶೇಷಚೇತನರ ಇಲಾಖೆಯ ಉಪ ನಿರ್ದೇಶಕರಾದ ನಟರಾಜ್, ಡಾ.ಸುದೀರ್ ಪೈ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷರು,ವಿನೋದ್ ಪ್ರಕಾಶ್ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳ ಜೊತೆಯಲ್ಲಿ ಬಂದಿದ್ದ ಎಲ್ಲ ರೀತಿಯ ವಿಶೇಷಚೇತನರು ಭಾಗವಹಿಸಿದ್ದರು.
ವರದಿ-ಸಂಪಾದಕೀಯಾ.