ತಾವರಗೇರಾ ಪಟ್ಟಣದ ಹಜರತ್ ಖ್ವಾಜಾ ಗರೀಬ್ ನವಾಜ್ ಟ್ರಸ್ಟ್ (ರಿ)ವತಿಯಿಂದ 13ನೇ ವರ್ಷದ ಉಚಿತ ಖತ್ನಾ ಕಾರ್ಯಕ್ರಮದ ನೊಂದಣಿ ಆರಂಭ.
ಭಗವಂತನ ಆದೇಶದ ಮೇರೆಗೆ ಸುಮಾರು 5500 ವರ್ಷಗಳ ಹಿಂದೆ ಹಜರತ್ ಇಬ್ರಾಹಿಂ ಖಲೀಲುಲ್ಲಾರವರು ಇಸ್ಲಾಂ ಧರ್ಮದ ಪ್ರಕಾರ ಪ್ರತಿಯೊಬ್ಬ ಮುಸ್ಲಿಂ ವ್ಯಕ್ತಿಯು ಖತ್ನಾ (ಸುನ್ನತಿ) (ಮುಂಜಿ) ಮಾಡಿಸಿಕೊಳ್ಳುವುದು ಕಡ್ಡಾಯ ಆಚರಣೆಯಾಗಿದೆ ಎಂದಿದ್ದಾರು. ಹಾಗೂ ಇತ್ತೀಚೆಗೆ ವೈಜ್ಞಾನಿಕವಾಗಿಯೂ ಸಾಬೀತು ಮಾಡಲಾಗಿರುತ್ತದೆ. ಈ ಆಚರಣೆಯನ್ನು ನಡೆಸಲು ಅರ್ಥಿಕವಾಗಿ ಹಿಂದುಳಿದ ಬಡ ಮುಸ್ಲಿಂ ಬಾಂಧವರಿಗೆ ಬಹಳ ಕಷ್ಟ ಸಾಧ್ಯವಾಗಿರುತ್ತದೆ. ಇಂತಹವರಿಗೆ ನೆರವಾಗಲು ಉಚಿತವಾದ ಖತ್ನಾ (ಮುಂಜಿ) ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಹಜರತ್ ಖ್ವಾಜಾ ಗರೀಬ್ ನವಾಜ ಟ್ರಸ್ಟ್(ರಿ)ವತಿಯಿಂದ ಸತತವಾಗಿ ಯಶಸ್ವಿಯಾಗಿ ನಡೆಯುವ 13ನೇ ವರ್ಷದ ಉಚಿತ ಖತ್ನಾ ಕಾರ್ಯಕ್ರಮವು ದಿನಾಂಕ 11/03/2024 ಸೋಮುವಾರ ಬೆಳಗ್ಗೆ 8 ಗಂಟೆಯಿಂದ ಪಟ್ಟಣದ ಶ್ಯಾಮೀದಲಿ ಶಾದಿಮಹಲ್(ಶ್ಯಾಮೀದಲಿ ದರ್ಗಾದ) ಮುಂಭಾಗದಲ್ಲಿ ಹಮ್ಮಿಕೊಂಡಿದ್ದು. ಈ ಖತ್ನಾ ಕಾರ್ಯಕ್ರಮಕ್ಕೆ ರಾಯಚೂರ ನಗರದ ನುರಿತ ವೈದ್ಯರಾದ ಡಾ|| ಮಹ್ಮದ್ ಸಲೀಮ್, ಮತ್ತು ಡಾ|| ಜಾಫರ್ ಹಾಗೂ ಡಾ|| ಮಹೆಬೂಬ ಪಾಷ ಇವರು ಆಗಮಿಸಲಿದ್ದು ತಾವರಗೇರಾ ಹೋಬಳಿ ವ್ಯಾಪ್ತಿಯ ಮುಸ್ಲಿಂ ಬಾಂದವರು ಈ ಕೆಳಗೆ ಸೂಚಿಸಿರುವ ಮೋಬೈಲ್ ನಂಬರ 9916566878, 9900299842, ಈ ನಂಬರಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಂಡು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘಟನೆಯ ಅಧ್ಯಕ್ಷರಾದ ಮಹಿಮೂದಸಾಬ ಜಾಗಿರದಾರ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದರು. ವರದಿ-ಉಪಳೇಶ ವಿ.ನಾರಿನಾಳ.
ವರದಿ-ಉಪಳೇಶ ವಿ.ನಾರಿನಾಳ.