ಸ್ವರ್ಗದ ಬಾಗಿಲು ತೆರೆಯುವ ಪವಿತ್ರ ರಂಜಾನ್ ಆರಂಭ : ಖರ್ಜೂರಕ್ಕೆ ಬಾರಿ ಬೇಡಿಕೆ.

Spread the love

ಸ್ವರ್ಗದ ಬಾಗಿಲು ತೆರೆಯುವ ಪವಿತ್ರ ರಂಜಾನ್ ಆರಂಭ : ಖರ್ಜೂರಕ್ಕೆ ಬಾರಿ ಬೇಡಿಕೆ.

ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ “ಈದ್ ಉಲ್ ಫಿತರ್” ಉಪವಾಸ ಇಂದಿನಿಂದ ಆರಂಭವಾಗಿದೆ. ಈ ತಿಂಗಳ ಉಪವಾಸ ಆಚರಿಸುವುದು, ಗ್ರಾಮೀಣ ಪ್ರದೇಶಗಳಿಂದ ಹಿಡಿದು ಪಟ್ಟಣ ಹಾಗೂ ವಿಶ್ವದಾದ್ಯಂತ ಎಲ್ಲಾ ಮುಸಲ್ಮಾನರು ಈ ಒಂದು ತಿಂಗಳು ಕಾಲ ದಿನ ನಿತ್ಯ ಬೆಳಗ್ಗೆ 3.30 ಗಂಟೆಗೆ ಸಹರಿ ರಂಜಾನ್‌ ಆಚರಣೆಯಿಂದ ದಿನದ ಕಾಯಕ ಪ್ರಾರಂಭ ಮಾಡುತ್ತಾರೆ.

ಚಂದ್ರನ ಚಲನೆಯನ್ನಾಧರಿಸಿದ ಮುಸ್ಲಿಂ ಕ್ಯಾಲೆಂಡರ್ ನಲ್ಲಿ ಒಂಬತ್ತನೆಯ ತಿಂಗಳಾಗಿ ಬರುವ ರಂಜಾನ್ ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರವಾದ ಮಾಸವಾಗಿದೆ. ವಿಶ್ವದಾದ್ಯಂತ ಮುಸ್ಲಿಮರು ಈ ತಿಂಗಳಿಡೀ ಸೂರ್ಯೋದಯಕ್ಕಿಂತ ಒಂದೂವರೆ ಗಂಟೆ ಮೊದಲಿನಿಂದ ಹಿಡಿದು ಸೂರ್ಯಾಸ್ತಮಾನದ ಕ್ಷಣದವರೆಗೆ ಏನನ್ನೂ ತಿನ್ನದೇ ಅಥವಾ ಕುಡಿಯದೇ ಮತ್ತು ಮಾನಸಿಕವಾಗಿ ಯಾವ ಬಯಕೆಯನ್ನೂ ಬಯಸದೇ ದೇವರ ಧ್ಯಾನ, ಕುರಾನ್ ಪಠಣ, ಪ್ರಾರ್ಥನೆ ಮತ್ತು ಇತರ ವಿಧಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಉಪವಾಸ ಅಥವಾ ರೋಜಾವನ್ನು ಅನುಸರಿಸುತ್ತಾರೆ.

ಈ ರಂಜಾನ್‌ ಮಾಸದಲ್ಲಿ ಖರ್ಜೂರಕ್ಕೆ ಏಕೆ ಅಷ್ಟೊಂದು ಮಹತ್ವ ?

ಮುಸ್ಲಿಮರಿಗೆ ಪವಿತ್ರವಾದ ರಂಜಾನ್ ಮಾಸ ಪ್ರಾರಂಭವಾಗಿದೆ.

ದಿನಕ್ಕೆ ಸುಮಾರು ಹದಿನಾಲ್ಕು ಗಂಟೆಗಳ ಕಾಲ ಆಹಾರ, ನೀರನ್ನು ಬಿಟ್ಟು ಪ್ರಾರ್ಥನೆ ಪ್ರವಚನಗಳಲ್ಲಿ ತೊಡಗುವ ಮುಸ್ಲಿಮರು ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತಮ್ಮ ಅಂದಿನ ಉಪವಾಸವನ್ನು ಸಂಪನ್ನಗೊಳಿಸುತ್ತಾರೆ. ಮಸೀದಿಯಿಂದ ಬಾಂಗ್ ಕರೆಯ ಪ್ರಥಮ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೇ ಏಕಕಾಲದಲ್ಲಿ ಎಲ್ಲರೂ ಮೊತ್ತ ಮೊದಲು ಬಾಯಿಗೆ ಹಾಕಿಕೊಳ್ಳುವ ಆಹಾರ ಏನೆಂದು ಗೊತ್ತೇ? ಅದೇ ಖರ್ಜೂರ, ಮರುಭೂಮಿಯ ಬೆಳೆಯಾದ ಖರ್ಜೂರವನ್ನು ಪ್ರಥಮ ಆಹಾರವನ್ನಾಗಿ ಸ್ವೀಕರಿಸಬೇಕೆಂದು ಪ್ರವಾದಿಗಳೇ ತಿಳಿಸಿದ್ದಾರೆ.

ಆದರೆ ವಾಸ್ತವವಾಗಿ ಉಪವಾಸದ ಬಳಿಕ ಪ್ರಥಮ ಆಹಾರವಾಗಲು ಧಾರ್ಮಿಕ ಕಾರಣದ ಜೊತೆಗೇ ಇದರ ಪೋಷಕಾಂಶಗಳೂ ಕಾರಣವಾಗಿವೆ. ಇದರ ಪೋಷಕಾಂಶಗಳು ಮತ್ತು ಉಪವಾಸದ ಬಳಿಕ ನಮ್ಮ ದೇಹ ಲಭ್ಯವಾಗುವ ಆಹಾರವನ್ನು ಸೇವಿಸುವ ಕ್ರಮ, ಆ ಹೊತ್ತಿನಲ್ಲಿ ಜೀಣಾರ್ಂಗ, ನರಮಂಡಲ,

ರಕ್ತ ಪರಿಚಲನೆ ಮೊದಲಾದ ಎಲ್ಲಾ ವ್ಯವಸ್ಥೆಗಳು ಕಾರ್ಯ ನಿರ್ವಹಿಸುವ ವಿಧಾನಗಳನ್ನು ಕೂಲಂಕುಷವಾಗಿ ಅಭ್ಯಸಿಸಿದ ಆಹಾರ ತಜ್ಞರು ಈ ಹೊತ್ತಿನಲ್ಲಿ ಸೇವಿಸಲು ಖರ್ಜೂರಕ್ಕಿಂತ ಉತ್ತಮವಾದ ಆಹಾರ ಇನ್ನೊಂದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ರಂಜಾನ್ ಮಾಸದಲ್ಲಿ ಮನಸ್ಸು ಭಕ್ತಿ-ಭಾವದಿಂದ ಕೂಡಿರಲಿ ಪ್ರಾತಃ ಕಾಲದ ಆಹಾರ ಸೇವನೆಗೆ ಸುಹೂ ಎಂದೂ ಸೂರ್ಯಾಸ್ತಮಾನದ ವೇಳೆ ಉಪವಾಸವನ್ನು ಸಂಪನ್ನಗೊಳಿಸುವ ಆಹಾರಸೇವನೆಗೆ ಇಫ್ತಾ‌ರ್ ಎಂದೂ ಕರೆಯುತ್ತಾರೆ.

ಪಂಚ ಮೂಲಭೂತ ಕರ್ತವ್ಯಗಳು-ದಿನಕ್ಕೆ ಐದು ಹೊತ್ತಿನ ಪ್ರಾರ್ಥನೆಗಳನ್ನು ಕಡ್ಡಾಯವಾಗಿ ನಿರ್ವಹಿಸುವುದು, ಕುರಾನ್ನ ಕಲ್ಮಾ ಅಂದರೆ ಕಡ್ಡಾಯವಾಗಿ ಅನುಸರಿಸಬೇಕಾದ ವಿಧಿಗ ಇನ್ನು ಜೀವನಪಯರ್ಂತ ಅನುಸರಿಸುವುದು, ರಮಧಾನ್ ಅಥವಾ ರಂಜಾನ್‌ ತಿಂಗಳ ರೋಜಾ ಅನುಸರಿಸುವುದು, ವರ್ಷಕ್ಕೊಂದು ಬಾ ರಿ ಕಡ್ಡಾಯದಾನ (ಜಕಾತ್) ನೀಡುವುದು ಹಾಗೂ ಕನಿಷ್ಟ ಜೀವ ಮಾನದಲ್ಲೊಮ್ಮೆ ಹಜ್ ಯಾತ್ರೆ ನಿರ್ವಹಿಸುವುದು) ರಂಜಾನ್ ಸಮಯದಲ್ಲಿ ಮಾಡುವ ಉಪವಾಸದ ಮಹತ್ವ ಇಸ್ಲಾಂ ಧರ್ಮದ ಕ್ಯಾಲೆ ಂಡರ್ ಪ್ರಕಾರ ಇಸ್ಲಾಂ ಕ್ಯಾಲೆಂಡರ್‌ನಲ್ಲಿ ರಂಜಾನ್ ಮಾಸಕ್ಕೇಕೆ ಇಷ್ಟು ಮಹತ್ವ ನೀಡಲಾಗಿದೆ ಎಂದರೆ,

ಪವಿತ್ರವಾದ ಕುರಾನ್ ಅಲ್ಲಾಹನಿಂದ ಪ್ರವಾದಿ ಮೊಹಮ್ಮದರ ಮೂಲಕ ಭೂಮಿಗೆ ಅವತೀರ್ಣಗೊಳ್ಳಲು ಪೂರ್ಣವಾಗಿ ಇಪ್ಪತ್ತಮೂರು ವರ್ಷಗಳು ಬೇಕಾಯಿತು. ಅದರ ಪ್ರಪ್ರಥಮ ವಾಕ್ಯಗಳು ಈ ತಿಂಗಳಲ್ಲಿಯೇ ಅವತೀರ್ಣಗೊಂಡುದುದರಿಂದ ರಂಜಾನ್‌ ಮಾಸಕ್ಕೆ ಅತಿಹೆಚ್ಚಿನ ಮಹತ್ವವಿದೆ. ಪ್ರಥಮ ವಾಕ್ಯಗಳು ಕ್ರಿಶ 610ರಲ್ಲಿ ಅವತೀರ್ಣಗೊಂಡಬಳಿಕ ಇಸ್ಲಾಂನ ಹೊಸ ಯುಗ ಪ್ರಾರಂಭವಾಯಿತು. ಅಂದಿನಿಂದ ಪ್ರಾರಂಭವಾದ ಶಕೆಗೆ ಹಿಜರಿ ಶಕೆ ಎಂದು ಕರೆಯುತ್ತಾರೆ.

ಇಸ್ಲಾಂ ಧರ್ಮದ ಕ್ಯಾಲೆಂಡರ್ ಪ್ರಕಾರ ಈ ರಂಜಾನ್‌ ತಿಂಗಳಲ್ಲಿ ಯಾವ ರಾತ್ರಿಯಂದು ಪ್ರಥಮ ವಾಕ್ಯಗಳು ಆವತೀರ್ಣಗೊಂಡವೋ ಅದಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಲೈಲತುಲ್ ಕದ್ರಿ ಎಂದು ಕರೆಯಲಾಗುವುದು. ಇದರಲ್ಲಿ 27ನೇ ದಿನದ ಮುನ್ನಾ ರಾತ್ರಿ (ಅಂದರೆ 26ನೇ ದಿನದ ರಾತ್ರಿ) ಹೆಚ್ಚು ಸಂಭವನೀಯ ಎಂದು ಹೆಚ್ಚಿನವರು ನಂಬುತ್ತಾರೆ. ಈ ರಾತ್ರಿಯಲ್ಲಿ ನಡೆಸಿದ ಪ್ರಾರ್ಥನೆಗಳು ಉಳಿದ ಸಮಯದ ಪ್ರಾರ್ಥನೆಗಿಂತ ಸಾವಿರಾರು ಪಟ್ಟು ಹೆಚ್ಚು ಫಲಪ್ರದ ಎಂದು ಹೇಳಲಾಗಿದೆ.

ಇಸ್ಲಾಂ ಕ್ಯಾಲೆಂಡರ್ ಪ್ರಕಾರ ರಂಜಾನ್ ತಿಂಗಳ ರೋಜಾ ಅವಧಿಯಲ್ಲಿ ಕೇವಲ ಅನ್ನಾಹಾರಗಳನ್ನು ತ್ಯಜಿಸುವುದು ಮಾತ್ರ ಉಪವಾಸವಲ್ಲ. ಮೂಲತಃ ಮನಸ್ಸಿನಲ್ಲಿ ಅನ್ನಾಹಾರದ ಸಹಿತ ಯಾವುದೇ ಬಯಕೆಗಳನ್ನು ಹೊಂದದಿರುವುದು, ಸುಳ್ಳು ಆಡದಿರುವುದು, ಕೆಟ್ಟದ್ದನ್ನು ಯೋಚಿಸದಿರುವುದು, ಲೈಂಗಿಕ ಕಾಮನೆಗಳನ್ನು ಕೆರಳಿಸದಿರುವುದು, ಚಾಡಿ ಹೇಳದಿರುವುದು ಮೊದಲಾದವುಗಳಿಂದ ಮನಸ್ಸನ್ನು ನಿಗ್ರಹಿಸುವುದು ಕಡ್ಡಾಯವಾಗಿದೆ. ಅಷ್ಟೇ ಏಕೆ, ಸುವಾಸನೆಯನ್ನು ಅಘ್ರಾಣಿಸುವುದು, ರುಚಿ ನೋಡುವುದು ಮತ್ತು ಉಗುಳು ನುಂಗುವುದನ್ನೂ ರೋಜಾ ಅವಧಿಯಲ್ಲಿ ನಿಷೇಧಿಸಲಾಗಿದೆ. ರಂಜಾನ್ ಉಪವಾಸ ಎಲ್ಲಾ ವಯಸ್ಕರಿಗೆ ಮತ್ತು ಆರೋಗ್ಯವಂತರಿಗೆ ಕಡ್ಡಾಯವಾಗಿದೆ. ಆದರೆ ದೈಹಿಕವಾಗಿ ಸಬಲರಲ್ಲದವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಗರ್ಭಿಣಿಯರು, ಮಾನಸಿಕ ಸ್ಥಿಮಿತವಿಲ್ಲದಿರುವವರು, ದೈಹಿಕವಾಗಿ ಉಪವಾಸವಿರಲು ಅಸಮರ್ಥರಾಗಿರುವವರು, ಬಾಣಂ-ತಿಯರಿಗೆ ವಿನಾಯಿತಿ ಇದೆ. ಇನ್ನೂ ಪ್ರೌಢಾವಸ್ಥೆಯನ್ನು ತಲುಪಿಲ್ಲದ ಮಕ್ಕ ಳಿಗೂ ಉಪವಾಸ ಕಡ್ಡಾಯವಲ್ಲ. ಆದರೆ ಚಿಕ್ಕವಯಸ್ಸಿನಿಂದಲೇ ಸಾಧ್ಯವಾದಷ್ಟು ಹೆಚ್ಚು ಉಪವಾಸಗಳನ್ನು ಹಿಡಿಯುವ ಮೂಲಕ ಮುಂದಿನ ದಿನಗಳಲ್ಲಿ ಉಪವಾಸವಿರಲು ತರಬೇತಿ ಪಡೆಯುವುದನ್ನು ಇಸ್ಲಾಂ ಬೆಂಬಲಿಸುತ್ತದೆ,

( ಕೋಟ )

“ರಂಜಾನ್‌ ತಿಂಗಳ ಮೊದಲ ದಿನ ಮತ್ತು ಈದ್ ಆಚರಣೆಗೆ  ಅಮಾವಾಸ್ಯೆಯ ಬಳಿಕದ ಪ್ರಥಮ ದಿನದ ಚಂದ್ರನನ್ನು ಕಾಣುವುದು ಅಗತ್ಯವಾಗಿರುತ್ತದೆ. ಈ ಆಧಾರದ ಮೇಲೆ ರಂಜಾನ್ ಈದ್ ದಿನವನ್ನು ನಿರ್ಧರಿಸಲಾಗುತ್ತದೆ

ವಿಶೇಷ ವರದಿ : ಹುಸೇನ್ ಮೊತೇಖಾನ್

Leave a Reply

Your email address will not be published. Required fields are marked *