ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ಆಯನೂರು ಕೋ-ಹಳ್ಳಿ ನಾಡಕಛೇರಿ ಹಾಗೂ ಹಾರನಹಳ್ಳಿ ನಾಡಕಛೇರಿಯಲ್ಲಿ ವಿಕಲಚೇತನರಿಗೆ ಓಡಾಡಲು ಸುಸಜ್ಜಿತವಾದ ರ್ಯಾಂಪ್,ರೀಲ್ ಹಾಗೂ ಶೌಚಾಲಯದ ವ್ಯವಸ್ಥೆಯ ನಿರ್ಮಾಣ ಮಾಡುವ ಬಗ್ಗೆ ಕೋರಿ ಸಕ್ಷಮ. ಜಿಲ್ಲಾ ಶಾಖೆ ಶಿವಮೊಗ್ಗ ದ ವತಿಯಿಂದ ಮನವಿಯನ್ನು ಸಲ್ಲಿಸಿದರು. ಈ ಮೂಲಕ ತಮ್ಮಲ್ಲಿ ಮನವಿಯನ್ನು ಮಾಡಿಕೊಳ್ಳುವುದೇನೆಂದರೆ, ತಮ್ಮ ಈ ನಾಡಕಛೇರಿಯಲ್ಲಿ ಓಡಾಡಲು ರ್ಯಾಂಪ್ಸ್ ಹಾಗೂ ಉಚಿತ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಇದರಿಂದ ವಿಕಲಚೇತನರಿಗೆ ತಮ್ಮ ಕಛೇರಿಗೆ ಹೋಗಿ ಬರಲು ತುಂಬಾ ಕಷ್ಟವಾಗುತ್ತಿದೆ. ತಮ್ಮ ಕಛೇರಿಯಿಂದ ಆಗುವ ಸೌಲಭ್ಯಗಳನ್ನು ವಿಕಲಚೇತನರು ಪಡೆಯಲು ಸಾದ್ಯವಾಗುತ್ತಿಲ್ಲ. ಇದರಿಂದ ಕೆಲ ನಡೆಯಲು ಬಾರದ ವಿಶೇಷಚೇತನರಿಗೆ ಹಾಗೂ ವೀಲ್ಚೇರ್ ನಲ್ಲಿ ಬಂದು ತಮ್ಮ ಕೆಲಸಕಾರ್ಯಗಳನ್ನು ಮಾಡಿಸಿಕೊಳ್ಳಲು ಕೂಡ ತೊಂದರೆಯಾಗುತ್ತಿದೆ.ಕಛೇರಿಯ ಒಳಗೆ ಹೋಗಿ ಕೆಲಸಕಾರ್ಯಗಳನ್ನು ಮಾಡಿಸಿಕೊಳ್ಳಲು ಆಗದೇ ವಾಪಸ್ಸು ಮನೆಗೆ ಬರಬೇಕಾದ ಅವ್ಯವಸ್ಥೆಯ ನಿರ್ಮಾಣವಾಗಿದೆ. ನಮಗೆ ಓಡಾಡಲು ಅನುಕೂಲಕವಾದ ರ್ಯಾಂಪ್ಸ್ ವ್ಯವಸ್ಥೆಯನ್ನು ಮಾಡಿಲ್ಲವೆಂದು ನಮ್ಮ ಸಂಸ್ಥೆಗೆ ಈ ಹಿಂದೆ ವಿಕಲಚೇತನ ಬಂಧುಗಳು ತಿಳಿಸಿರುತ್ತಾರೆ. ಈ ವಿಷಯವನ್ನು ತಿಳಿದು ತಮ್ಮ ಕಛೇರಿಗೆ ಬೇಟಿ ನೀಡಿ ಪರಿಸಿಲಿಸಿದಾಗ ಇದ್ದ ಪರಿಸ್ಥಿತಿಯ ಕಂಡು ಬೇರವಾಗಿದೆ.ಭಾರತ ಸರ್ಕಾರದ ಅಡಿಯಲ್ಲಿ “2016 ರ RPED ACT” ನ ಅಡಿಯಲ್ಲಿ ರ್ಯಾಂಪ್ಸ್ ವ್ಯವಸ್ಥೆ ವಿಕಲಚೇತನರಿಗೆ ಕಲ್ಪಿಸಬೇಕಾಗಿರುತ್ತದೆ. ಆದರೆ ತಾವು ಈ ವ್ಯವಸ್ಥೆ ಮಾಡಿಸಿಕೊಟ್ಟಿರುವುದಿಲ್ಲ. ಇದರಿಂದ ವಿಕಲಚೇತನರು ಕಛೇರಿಗೆ ಬಂದು ಹೋಗಲು ತುಂಬಾ ಕಷ್ಟವಾಗಿದೆ. ಆದ್ದರಿಂದ ತಾವುಗಳು ದಯಮಾಡಿ ವಿಕಲಚೇತನ ಬಂಧುಗಳು ನಿಮ್ಮ ಕಛೇರಿಗೆ ಬಂದು ಹೋಗಲು ತಮ್ಮ ಕಛೇರಿಯಲ್ಲಿ ಪ್ರವೇಶ ದ್ವಾರ ಗೇಟ್ ಮತ್ತು ಕಛೇರಿ ಒಳಪ್ರವೇಶ ಜಾಗದಲ್ಲಿ ರ್ಯಾಂಪ್ಸ್ ,ರೀಲ್ಸ್ ಹಾಗೂ ಶೌಚಾಲಯದ ವ್ಯವಸ್ಥೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕಾಗಿ ಕೋರಿದೆ ಎಂದು ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ.ಶಿವಮೊಗ್ಗ,ಮಂಜುನಾಥ್.ವಿ ಯುವ ಸಕ್ಷಮ ಪ್ರಮುಖರು , ಪ್ರದೀಪ್ ಮುದ್ವಲಾ, ಪ್ರಲ್ಲಾದ್, ಮುರಳಿ ಇದ್ದರು.
ವರದಿ-ಉಪಳೇಶ ವಿ.ನಾರಿನಾಳ.