ಮುದೇನೂರ: ಕುಷ್ಟಗಿ ತಾಲೂಕಿನ ವರದ ಉಮಾಚಂದ್ರಮಲೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ರಥೋತ್ಸವ ಎಳೆಯಲು ಅವಕಾಶ ಮಾಡಿಕೊಟ್ಟ ಗ್ರಾಮ ಮುದೇನೂರು ಗ್ರಾಮವಾಗಿದೆ.
ಚಂದ್ರಶೇಖರ ಮಹಾಸ್ವಾಮಿಗಳ ಕೃಪ ಆಶೀರ್ವಾದದೊಂದಿಗೆ ಭವ್ಯ ರಥೋತ್ಸವ ಮಹಿಳೆಯರೊಂದಿಗೆ ಸಂಭ್ರಮದಿಂದ ವಿಜ್ರಂಭಣೆಯಿಂದ ಜರುಗಿತು. ಈ ಜಾತ್ರೆ ವಿಶೇಷವೇನೆಂದರೆ ಪ್ರತಿಯೊಂದು ಕಾರ್ಯಕ್ರಮವು ಕೂಡ ಮಹಿಳೆಯರಿಂದಲೇ ನಡೆಯುತ್ತವೆ.ಡೊಳ್ಳು ಬಾರಿಸುವುದು ತಬಲಾ ಬಾರಿಸುವುದು, ಭಜನೆ ಮಾಡುವುದು, ಪೇರನ್ನು ಎಳೆಯುವುದು ಸಹ ಮಹಿಳೆಯರೇ, ಹೀಗಾಗಿ ಇಡೀ ರಾಜ್ಯದಲ್ಲಿ ವಿಶೇಷವಾದ ಜಾತ್ರೆ ಮುದೇನೂರು ಜಾತ್ರೆಯಾಗಿದೆ. ಮಹಿಳಾ ರಥೋತ್ಸವದ ಈ ದಿನದಂದು ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಇಳಕಲ್ ಸೀರೆಯನ್ನು ಹುಟ್ಟು ರಥೋತ್ಸವ ಎಳೆದರು. ಮಹಿಳಾ ರಥೋತ್ಸವದ ನಿಮಿತ್ತವಾಗಿ ಉಮಾಚಂದ್ರಮಳೆಶ್ವರ ಶ್ರೀ ಮಠದಲ್ಲಿ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಮಹಿಳಾ ರಥೋತ್ಸವ ದಿನದಂದು ಕ್ಷೇತ್ರದ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಎಚ್ ಪಾಟೀಲ್ ಚಂದ್ರಶೇಖರ ಅಜ್ಜರ ಕತೃ ಗದ್ದಿಗೆ ಆಶೀರ್ವಾದ ಪಡೆದರು. ಪಟಾಕಿ ಸಿಡಿಸುವ ಮೂಲಕ ಅಜ್ಜನ ಜಯ ಘೋಷಗಳ ಮೂಲಕ ರಥೋತ್ಸವ ವಿಜೃಂಭಣೆಯಿಂದ ಜರುಗಿತು.ರಥೋತ್ಸವ ಮುಗಿದ ನಂತರ ವೇದಿಕೆ ಮೇಲೆ ಧಾರ್ಮಿಕ ಸಭೆಗಳು ನಡೆದವು.ಶ್ರೀ ಅಭಿನವ ಮ್ಯೂಸಿಕಲ್ ಇವೆಂಟ್ಸ ಕೊಪ್ಪಳ ಇವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.
ವರದಿ-ಚಂದ್ರುಶೇಖರ ಕುಂಬಾರ ಮುದೇನೂರ.