167 ದಿನಗಳ ನಡೆದ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿಗೆ ಸಿಕ್ಕ ಮೊದಲ ಜಯ’ ಭೂಮಿ ಹಂಚಲು ಎಸಿಗೆ ಶಿಫಾರಸ್ಸು,
ರಾಯಚೂರ ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದ ಸಿಡಿದೆದ್ದ ಭೂ ಸಂಘರ್ಷವತಿಯಿಂದ ನಿನ್ನೆ ಸಂಜೆ ನಡೆದ ಸಮಾರೂಪ ಬಹಿರಂಗ ಸಭೆ ಕಾರ್ಯಾಕ್ರಮವು ಯಶಸ್ವಿಯಾಗಿ ಜರುಗಿತು. ಈ ಕಾರ್ಯಾಕ್ರಮದ ಮುಖ್ಯೆ ಉದ್ದೇಶ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿಗೆ ಜಿಲ್ಲಾಢಳಿತದಿಂದ ನಿರ್ಧಾರ ಭೂ ಹೋರಾಟಕ್ಕೆ ಅಲ್ಪಾ ವಿರಾಮ.
ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನಲ್ಲಿ ಫೆ 14 ರಾಯಚೂರು ಜಿಲ್ಲಾಧಿಕಾರಿ ಚಂದ್ರ ಶೇಖರ ಎಲ್.ನಾಯಕ, ಸಿಂಧನೂರು ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರು ಧರಣಿ ನಿರತರ ನಿಯೋಗ ದೊಂದಿಗೆ ಮಾತುಕತೆ ನಡೆಸಿ, ಸರ್ಕಾರಿ ಹೆಚ್ಚುವರಿ ಭೂಮಿಯನ್ನು ಭೂಹೀನ ಕುಟುಂಬಗಳಿಗೆ ಹಂಚಿಕೆ ಮಾಡುವಂತೆ ಲಿಂಗಸುಗೂರು ಸಹಾಯಕ ಆಯುಕ್ತ ಅವಿನಾಶ ಶಿಂಧೆ ಅವರಿಗೆ ಶಿಫಾರಸ್ಸು ಮಾಡಿದ್ದಾರೆ. ಇದು ಹೋರಾಟಕ್ಕೆ ಸಿಕ್ಕ ಮೊದಲ ಜಯವಾಗಿದೆ ಎಂದು ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿಪಿಐಎಂಎಲ್ ರೆಡ್‌ಸ್ಪಾರ್ ಹಾಗೂ ಕರ್ನಾಟಕ ರೈತ ಸಂಘ (ಎಐಕೆಕೆಎಸ್) ನೇತೃತ್ವದಲ್ಲಿ ಕಳೆದ 167 ದಿನಗಳಿಂದ ಸಿಂಧನೂರಿನ ಮಿನಿವಿಧಾನ ಸೌಧದ ಮುಂದೆ ನಡೆದ ಜವಳಗೇರಾ ಭೂ ಹೋರಾಟವು ಮಹತ್ವದ ಘಟ್ಟ ತಲುಪಿತ್ತು. ಸೋಮವಾರ ಜಿಲ್ಲಾಧಿಕಾರಿ, 100ಕ್ಕೂ ಹೆಚ್ಚು ಭೂ ಹೀನರು ಸರ್ಕಾರಿ ಹೆಚ್ಚುವರಿ ಭೂಮಿಗೆ ಅರ್ಜಿ ಸಲ್ಲಿಸಿ ಮಂಗಳವಾರ ತಹಶೀಲ್ದಾರರ ಜೊತೆ ಆರ್.ಮಾನಸಯ್ಯ ನೇತೃತ್ವದ ಭೂಹೀನರ ತಂಡದ ನಿಯೋಗವು ನಡೆಸಿದ ಮಾತುಕತೆ ಸಫಲವಾಗಿದೆ. ಕಚೇರಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರು ಜಿಲ್ಲಾಧಿಕಾರಿಗೆ ಕಳುಹಿಸಿ ಕಾಲದ ಪ್ರಸ್ತಾವನೆ ಮೇರೆಗೆ ಭೂಹೀನರಿಗೆ ಭೂಮಿ ವಿತರಿಸುವ ಕುರಿತು ಲಿಂಗಸೂಗೂರು ಸಹಾಯಕ ಆಯುಕ್ತರಿಗೆ ಶಿಫಾರಸ್ಸು ಪತ್ರ ಕಳಿಸುವ ಮೂಲಕ ನಿರಂತರ ಹೋರಾಟದ ಫಲವಾಗಿ ಭೂಹೀನರಿಗೆ ಹೆಚ್ಚುವರಿ ಭೂಮಿ ಹಂಚುವ ನಿರ್ಧಾರ ಅಧಿಕಾರಿಗಳು ಪ್ರಕಟಿಸಿದ್ದಾರೆ.
100ಕ್ಕೂ ಹೆಚ್ಚು ಭೂಹೀನರು ಸರ್ಕಾರಿ ಹೆಚ್ಚುವರಿ ಭೂಮಿಗೆ ಅರ್ಜಿ ಸಲ್ಲಿಸಿ, ಸರ್ಕಾರಿ ಭೂಮಿಯಲ್ಲಿ 70 ದಿನಗಳು, ಸಿಂಧನೂರಿನ ಮಿನಿವಿಧಾನಸೌಧ ಮುಂದೆ 51 ದಿನಗಳು ಸೇರಿದಂತೆ ಇಂದಿಗೆ 167 ದಿನಗಳ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿಗೆ ತಾತ್ಕಾಲಿಕ ಸಿಕ್ಕಿದೆ. ಹೆಚ್ಚುವರಿ ಭೂಮಿ ಸಿಂಧನೂರು ಸರ್ವೆ ನಂ.419 ಹಾಗೂ ಸುಲ್ತಾನಪೂರ ಸರ್ವೆ ನಂ.186 ಹೈಕೋರ್ಟ್‌ನಲ್ಲಿ ಇರುವುದರಿಂದ ನಂತರ ಆ ಭೂಮಿಯನ್ನು ಸಹ ಮಾಡಲಾಗುವುದು. ಇದಲ್ಲದೆ ಸಿಂಧನೂರು, ಪಗಡದಿನ್ನಿ, ಜಂಗಮರ ಹಟ್ಟಿ, ರಂಗದಳ್ಳಿ (ಡಿ), ಕುರುಕುಂದಾ ಸೇರಿದಂತೆ ಇತರೆ ಕರ್ನಾಟಕ ಸರ್ಕಾರ ಭೂಮಿಗೆ ಅರ್ಜಿ ಸಲ್ಲಿಸಿ ಹೋರಾಟ ನಡೆಸುತ್ತಿರುವ ಭೂಮಿಯನ್ನು ಸಹ ತಹಶೀಲ್ದಾರರು ಪರಿಶೀಲನೆ ನಡೆಸಿ ಭೂಮಿ ವಿತರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ದಿ.ಸಿದ್ದಲಿಂಗಮ್ಮ ವೆಂಕಟರಾವ್ ನಾಡಗೌಡರು ಸರ್ಕಾರಕ್ಕೆ ಹೆಚ್ಚುವರಿ ಭೂಮಿಯಾಗಿ ಬಿಟ್ಟುಕೊಟ್ಟ 1064 ಎಕರೆ ಭೂಮಿ ಮತ್ತು ಜವಳ ಗೇರಾ ನಾಡಗೌಡರ ಕುಟುಂಬದ ವಶದಲ್ಲಿರುವ 4900 ಎಕರೆ ಸರ್ಕಾರಿ ಹೆಚ್ಚುವರಿ ಭೂಮಿಯ ಮರು ತನಿಖೆಯನ್ನು ಭೂ ಸುಧಾರಣೆ ಕಾಯ್ದೆ 1961ರ 122(ಎ) ಅಡಿಯಲ್ಲಿ ಸರ್ಕಾರ ನಡೆಸಬೇಕು. ಭೂ ಹೀನರಿಗೆ ಭೂಮಿ ಪತ್ರ, ಭೂ ಪಟ್ಟಾ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಎಂ.ಗಂಗಾಧರ್ ತಿಳಿಸಿದರು. ಈ ಸಂದರ್ಭದಲ್ಲಿ ಆರ್ ಮಾನ್ಸಯ್ಯ. ಅಮಿರ್ ಅಲಿ. ಚಿನ್ನಪ್ಪ ಕೊಟ್ರಿಕಿ. ಸಿಪಿಐಎಂಎಲ್ ರೆಡ್ ಸ್ಟಾರ್ ಜಿಲ್ಲಾ ಸಮಿತಿ ಸದಸ್ಯ ಹೆಚ್.ಆರ್.ಹೊಸಮನಿ, ಕೆಆರ್‌ಎಸ್ ತಾಲ್ಲೂಕು ಘಟಕದ ಅಧ್ಯಕ್ಷೆ ಅಂಬಮ್ಮ ಬಸಾಪುರ, ಉಪಾಧ್ಯಕ್ಷ ಹನುಮಂತಪ್ಪ ಗೋಡ್ಯಾಳ, ಸದಸ್ಯರಾದ ಮುದಿಯಪ್ಪ, ಪರಶುರಾಮ, ಬೀಬೀ ಫಾತಿಮಾ ತುಳಸಮ್ಮ ಮತ್ತಿತರರು ಭಾಗವಹಿಸಿದ್ದರು.
(ಈ ಹೋರಾಟದಲ್ಲಿ ಬುದ್ದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ (ರಿ) ಬಳಗದವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗಿದ್ದು ವಿಶೇಷವಾಗಿದೆ, ಹೋರಾಟದ ಮನಸ್ಸುಗಳೆ ಒಂದಾಗಿ, ಹೋರಾಟಕ್ಕೆ ಮುಂದಾಗಿ, ಹೋರಾಟಕ್ಕೆ ಇಂದಲ್ಲ ನಾಳೆ ಖಂಡಿತ ಜಯ ಸಿಕ್ಕೆ ಸಿಗುತ್ತೆ, ನಮಗೆ ತಾಳ್ಮೆ ಇರಬೇಕು, ಸಾವಿರಾ ಕಷ್ಟಗಳು ಬಂದರು ಕುಗ್ಗದೆ ಮುನ್ನುಗ್ಗಬೇಕು, ಅನ್ಯಾಯದ ವಿರುದ್ದ, ಭ್ರಷ್ಟಚಾರದ ವಿರುದ್ದ ಹೋರಾಟಕ್ಕೆ ಮುಂದಾಗಿ, ಬಡ,ಬಗ್ಗರ, ದಿನ ದಲೀತರ ಏಳಿಗೆಗೆ ಪ್ರತಿಯೊಬ್ಬರು ಧ್ವನಿಗೂಡಿಸುವ ಶಕ್ತಿ ನಿಮ್ಮದಾಗಲಿ,)
ವರದಿ-ಸಂಪಾದಕೀಯಾ.