ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸೋಣ : ಮಹಾಂತಯ್ಯ ಸಪ್ಪಿಮಠ…
ಎಸ್ ಎಸ್ ಎಲ್ ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿನ ಮುದೇನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರ ಸರ್ವ ಸದಸ್ಯರ, ಶಿಕ್ಷಕರ ಪೂರ್ವಭಾವಿ ಸಭೆ ನಡೆಯಿತು. ಈ ಪೂರ್ವಭಾವಿ ಸಭೆಯನ್ನು ಮುದೇನೂರಿನ ಎಸ್ ಎಸ್ ಎಲ್ ಸಿ ಮುಖ್ಯ ಅಧೀಕ್ಷಕರಾದ ಮಹಾಂತಯ್ಯ ಅವರು ನೆರವೇರಿಸಿದರು. ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳ ಮುಖ್ಯಘಟ್ಟವಾಗಿದೆ. ಮುಂದಿನ ವಿದ್ಯಾಭ್ಯಾಸಕ್ಕೆ, ಇದು ಮುನ್ನುಡಿ ಬರೆಯಲಿದೆ ಹೀಗಾಗಿ ಯಾವುದೇ ಅಂಜಿಕೆ ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಎಲ್ಲರೂ ಕಡ್ಡಾಯವಾಗಿ ಬರಿ ಎಂದು ಕರೆ ನೀಡಿದರು. ಅಲ್ಲದೆ ಯಶಸ್ಸಿಎಲ್ಸಿ ಪರೀಕ್ಷೆ ಯಶಸ್ವಿಯಾಗಲು ಎಸ್ ಡಿ ಎಂ ಸಿ ಕಮಿಟಿಯವರ ಸಹಕಾರ ಮುಖ್ಯ ಎಂದರು, ಅಲ್ಲದೆ ಪಾಲಕರು ಸಹ ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದೆ ಸುಸೂತ್ರವಾಗಿ ಮಕ್ಕಳ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕೆಂದು ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಕೆಬಿ ಸ್ಥಾವರ ಮಠ, ಎಸ್‌ಡಿಎಂಸಿ ಅಧ್ಯಕ್ಷರಾದ ಭೀಮನಗೌಡ ಬರಗೂರು, ಚಂದ್ರಪ್ಪ ಹಿರೇಮನಿ, ಶೇಖಣ್ಣ ಹಡಪದ ಗ್ರಾಮ ಪಂಚಾಯತ್ ಸದಸ್ಯರಾದ ಹುಸೇನಪ್ಪ ಹಿರೇಮನಿ ಮುಖಂಡರಾದ ನೆಬಿಸಾಬ್ ಲಾಟಿ ಶಾಲೆಯ ಮುಖ್ಯ ಗುರುಗಳು ಶಾಲೆ ಶಿಕ್ಷಕರು ಮತ್ತು ಇತರರು ಉಪಸ್ಥಿತರಿದ್ದರು.
ವರದಿ-ಚಂದ್ರುಶೇಖರ ಕುಂಬಾರ ಮುದೇನೂರು