ಕುಷ್ಟಗಿ ತಾಲೂಕು ಕೋವಿಡ್ ಮುಕ್ತ ಹಾಗೂ ಅಭಿವೃದ್ಧಿಗಾಗಿ ಪಣ ತೊಟ್ಟ ತಹಶೀಲ್ದಾರ ಎಂ.ಸಿದ್ದೇಶ್ ರವರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿಗೆ ಇತಿಚಿನ ದಿನ ಮಾನಗಳಲ್ಲಿ ನೂತನವಾಗಿ ಸೇವೆ ಕೈಗೊಂಡ ಮಾನ್ಯ ತಹಶೀಲ್ದಾರ್ ಎಂ.ಸಿದ್ದೇಶ್ ರವರು ಹಲವು ಸಮಾಜಮೂಖಿ ಕಾರ್ಯಗಳಲ್ಲಿ ಭಾಗಿಯಾಗಿ ಬೇಸ್ ಎನ್ನಿಸಿಕೊಂಡ ಕೀರ್ತಿ ಇವರದ್ದು, ಜೊತೆಗೆ ಹಲವು ಅಕ್ರಮ ದಂಧೆಗಳಿ ಬ್ರೇಕ್ ಹಾಕಿದ್ದು ಇವರನ್ನು ಸ್ಮರಿಸಬಹುದು, ಸರ್ಕಾರದ ಆದೇಶದ ನಿಮಿತ್ಯವಾಗಿ ಇತಿಚೀನ ದಿನಗಳಲ್ಲಿ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮ ಹಾಗೂ ತಾವರಗೇರಾ ಪಟ್ಟಣದಲ್ಲಿ ಅನಧಿಕೃತವಾಗಿ ತೆರೆದಿರುವ ಕ್ಲೀನಿಕ್ (ಆಸ್ಪತ್ರೆ) ಗಳನ್ನು ಕುಲಂಕುಶವಾಗಿ ತನಿಖೆ ಮಾಡಿ ಅನಧಿಕೃತವಾಗಿರುವ ಕ್ಲೀನಿಕ್ (ಆಸ್ಪತ್ರೆ) ಗಳನ್ನು ಸೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ, ತಾವರಗೇರಾ ಪಟ್ಟಣದಲ್ಲಿ ರಾಜಾರೋಷವಾಗಿ ಅನಧಿಕೃತವಾಗಿ ಕ್ಲೀನಿಕ್ (ಆಸ್ಪತ್ರೆ) ಗಳನ್ನು ನಡೆಸುತ್ತಿರುವವರ ವಿರುದ್ದ ಕಾನೂನಿನ ರೀತಿಯಲ್ಲಿ ಕಠೀಣ ಕ್ರಮ ತಗೆದುಕೊಂಡ ಕೀರ್ತಿ ಇವರದ್ದು, ಇದರ ಜೊತೆ ಜೊತೆಗೆ ತಾವರಗೇರಾ ಪಟ್ಟಣದಲ್ಲಿ ಅಕ್ರಮವಾಗಿ ಸರಕಾರಿ ಜಮೀನಿನಲ್ಲಿ ಅಂದರೆ ಸರ್ವೇ ನಂಬರ 54 ರಲ್ಲಿ ಸುಮಾರು 18 ಎಕರೆ 36 ಗುಂಟೆ ಜಮೀನು ಇದ್ದು, ಈ ಜಮೀನಿನಲ್ಲಿ ಸರ್ಕಾರಿಯ ಕಚೇರಿಗಳು ಹಾಗೂ ಸರ್ಕಾರಕ್ಕೆ ಸಂಬಂದಿಸಿದ ಇತರೆ ಸಂಭಾಗಣಗಳು ಇದ್ದು, ಜೊತೆಗ ಹಿಂದುಗಳ ಸ್ಮಶಾನ ಭೂಮಿ ಇದೆ. ಈ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಊರಿನ ರಾಜಕೀಯ ಪ್ರಭಾರಿಗಳು ಶೇಡ್ಡುಗಳ ಮೇಲೆ ಶೇಡ್ಡು ಹಾಕುತ್ತಿರುವ ಶೇಡ್ಡನ್ನು ತೆರವುಗೊಳಿಸಲು ಸೂಚನೆ ನೀಡಿದ ಕೀರ್ತಿ ಇವರದ್ದು. ಒಟ್ಟಿನಲ್ಲಿ ತಾಲೂಕಿನಾದ್ಯಾಂತ ಅಕ್ರಮವಾಗಿ ನಡೆಯುವ ದಂಧೆಗಳಿ ಕಡಿವಾಣ ಹಾಕಿರುವ ಸುದ್ದಿಗಳಿಗೆ ಜಿಲ್ಲಾಡಳಿತವೆ ಇತ್ತ ನೋಡುವಂತ ಮಾಡಿದ ಕೀರ್ತಿ ಇವರದ್ದು. ಇದರ ಜೊತೆ ಜೊತೆಗೆ ಕೋವಿಡ್ 19 ರ ವಿರುದ್ದ ಜಗತ್ತೆ ಹೋರಾಡುತ್ತಿದೆ. ಈ ಕೋವಿಡ ವೈರಸ್ ವಿರುದ್ದ ಪಣ ತೊಟ್ಟು ತಾಲೂಕದ್ಯಾಂತ ಆರೋಗ್ಯ ಆಲಾಖೆ, ಪೊಲೀಸ್ ಇಲಾಖೆ, ಗೃಹ ರಕ್ಷಕ ಧಳದವರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮೀಕರರು, ಗ್ರಾಮ ಪಂಚಾಯತಿಯ ಅಧಿಕಾರಿಗಳು, ನಾಡ ಕಚೇರಿಯ ಅಧಿಕಾರಿಗಳು, ಜೊತೆಗೆ ಸಾರ್ವಜನಿಕರ ಸಹಕಾರದೊಂದಿಗೆ ಈ ಕೋವಿಡ್ ವಿರುದ್ದ ಪಣ ತೊಟ್ಟು ನಿಂತ್ತಿದ್ದಾರೆ. ನಿಜಕ್ಕೂ ಹೆಮ್ಮೆಯಿಂದ ಹೇಳಬೇಕು ನಮ್ಮ ಕುಷ್ಟಗಿ ತಾಲೂಕಿನಲ್ಲಿ ನಿಷ್ಠಾವಂತ ಅಧಿಕಾರಿಗಳನ್ನು ಪಡೆದ ನಾವೇ ಧನ್ಯರು. ಸಾರ್ವಜನಿಕರ ಪ್ರತಿಯೊಂದು ಸಮಸ್ಯಗಳಿಗೆ ಹಾಗೂ ನ್ಯಾಯಯುತವಾಗಿ ಸೂಕ್ತ ಪರಿಹಾರ ಒದಗಿಸುವಲ್ಲಿ ಯಶಸ್ವಿ ಅಧಿಕಾರಿಯಾಗಿ, ಪ್ರಮಾಣಿಕತೆ, ಕರ್ತವ್ಯ ನಿಷ್ಠೆಗೆ ಮತ್ತೊಂದು ಹೆಸರಾಗಿ, ಸಾರ್ವಜನಿಕರ ನೆಚ್ಚಿನ ಅಧಿಕಾರಿಯಾಗಿ ಹೊರ ಹೊಮ್ಮಿದ್ದಾರೆ. ತಮಗಿರುವ ಸಮಯವನ್ನು ಸದ್ಬಳಿಕೆ ಜೊತೆಗೆ ಬಡವರಿಗೆ, ರೈತರ ಕೊಂದುಕೊರತೆಗಳಿಗೆ ಸರಿಯಾಗಿ ಸ್ಪಂದಸಿ, ಪ್ರತಿಯೊಂದು ಹಳ್ಳಿಯಲ್ಲಿ ಕೊರೊನಾದ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಸೇವೆ ಸದಾ ಹಿಗೇ ಮುಂದುವರಿಯಲೆಂದು, ಈ ಸಮಾಜಮುಕಿ ಸೇವೆಗೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಅಭಿನಂದಿಸುತ್ತಿದ್ದೆವೆ.
ವರದಿ – ಸಂಪಾದಕೀಯ