ಲೋಕಸಭಾ ಚುನಾವಣೆ ಕಣದ ಅವಿಭಾಜ್ಯ ಬಳ್ಳಾರಿ, ಲೋಕ ಸಭಾ ಚುನಾವಣಾ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯಾರ್ಥಿಯಾಗಿ. ಮೈನಿಂಗ್ ತಾಲೂಕಾದ ಸಂಡೂರು ಶಾಸಕ, ಈ.ತುಕಾರಾಮ್ ರವರು ಅಧೀಕೃತವಾಗಿ ಆಯ್ಕೆಯಾಗಿದ್ದಾರೆಂದು, ಕಾಂಗ್ರೇಸ್ ಪಕ್ಷದ ಉನ್ನತ ಮೂಲಗಳಿಂದ ದೃಢವಾಗಿದೆ. ಅವರು ಸದ್ಯ ಸಂಡೂರು ಕ್ಷೇತ್ರದ ಶಾಸಕರಾಗಿದ್ದು, ಹಾಲಿ ಶಾಸಕರಾಗಿದ್ದಾರೆ. ಅವರು ಕೆಲವು ನಿಗಮ ಮಂಡಳಿಗಳ ಜವಾಬ್ದಾರಿ ಯನ್ನು ನಿರ್ವಹಿಸಿದ್ದಾರೆ, ಸಚಿವ ರಾಗಿಯೂ ಕರ್ಥವ್ಯ ನಿಭಾಯಿಸಿದ್ದಾರೆ. ರಾಜಕೀಯ ಯುವ ಚತುರ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ರ-ಕುಚುಕು- ಪ್ರಮುಖವಾಗಿ ಅವರು ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯರವರ, ಅಹಿಂದ ತತ್ವಾಧಾರಿತ ರಾಜಕಾರಣಿ. ಹಾಗೂ ಮುಖ್ಯ ಮಂತ್ರಿಗಳ ಆಪ್ತ ವಲಯದಲ್ಲಿ, ಗುರುತಿಸಿಕೊಂಡಿರುವ ಪ್ರಮುಖ ಯುವ ರಾಜಕಾರಣಿ. ಕಾರ್ಮಿಕ ಸಚಿವರಾದ ಸಂತೋಷ ಲಾಡ್ ರವರ, ರಾಜಕೀಯ ಬಲಗೈ ಬಂಟ ಹಾಗೂ ಆತ್ಮೀಯ “ಕುಚುಕು”ಗೆಳೆಯರೆಂದೇ ಗುರುತಿಸಿಕೊಂಡಿದ್ದಾರೆ ಈ ತುಕಾರಾಮ್ ರವರು. ಕಾಂಗ್ರೆಸ್ ಪಕ್ಷವು “ಅವಿಭಾಜ್ಯ ಬಳ್ಳಾರಿ ಲೋಕಸಭಾ ಕ್ಷೇತ್ರದ ಟಿಕೆಟ್ “ನ್ನು ಸಂಡೂರು ಶಾಸಕ ಈ. ತುಕಾರಾಮ್ ರವರಿಗೆ ನೀಡಿ ಅಧೀಕೃತವಾಗಿ ಘೋಷಿಸಿರುವುದಾಗಿ ,ಕಾಂಗ್ರೇಸ್ ಪಕ್ಷದ ಉನ್ನತ ಮೂಲಗಳಿಂದ ಖಚಿತ ಮಾಹಿತಿ ಹೊರಬಿದ್ದಿದೆ. ಅವರಿಗೆ ತುಕಾರಾಮ್ ಅವರು ತಮ್ಮ ಪುತ್ರಿಗೆ ಟಿಕೆಟ್ ಕೇಳಿದ್ದರಾದರೂ, ಪಕ್ಷದ ನಾಯಕರು ಅದಕ್ಕೆ ಒಪ್ಪಿರಲಿಲ್ಲ. ನೀವೇ ನಿಲ್ಲಿ ಎಂದು ಅವರಿಗೆ ಸೂಚಿಸಿದ್ದರು. ಇದಕ್ಕೆ ತುಕಾರಾಮ್ ನಿರಾಕರಿಸಿದ್ದರಾದರೂ, ಈಗ ಪಕ್ಷದ ನಾಯಕರು ಅವರನ್ನು ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೇಸ್ ಟಿಕೆಟ್ ಖಚಿತವಾದ ಹಿನ್ನೆಲೆಯಲ್ಲಿ ಬಳ್ಳಾರಿ – ವಿಜಯನಗರ ಜಿಲ್ಲೆಯ ಸಚಿವರು, ಶಾಸಕರು ಮತ್ತು ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿಯಾಗಿದ್ದರು ಎನ್ನಲಾಗಿದೆ. ಚುನಾವಣೆ ಸಂಬಂಧ ಚರ್ಚೆ ನಡೆಸಿದರು ಎಂದು ಗೊತ್ತಾಗಿದೆ. “ಸಜ್ಜನ ರಾಜಕೀಯ ಸಂತ”-ಈ ತುಕಾರಾಮ್- “ಸಂತ ತುಕಾರಾಮ್” ರವರ ಹೆಸರನ್ನೇ ತಮಗಿಟ್ಟು ಕೊಂಡಿರುವ, ಸಂಡೂರು ಕ್ಷೇತ್ರದ ಹಾಲಿ ಶಾಸಕರಾದ ಈ ತುಕಾರಾಮ್ ರವರು. ರಾಜಕೀಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ, ಸಜ್ಜನ ರಾಜಕಾರಣಿಯಾಗಿ ಗುರುತಿಸಿಕೊಳ್ಳುವ ಮೂಲಕ. ಅವರು ರಾಜಕೀಯದಲ್ಲಿಯೂ ಕೂಡ, ರಾಜಕೀಯ ಸಂತ ತುಕಾರಮ್ ಎನಿಸಿಕೊಂಡಿದ್ದಾರೆ. ಅವರು ನಾಲ್ಕು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆ ಆಗಿದ್ದು, ಈ ಹಿಂದೆ ಸಚಿವರಾಗಿಯೂ ಅನುಭವಿ ರಾಜಕಾರಣಿ ಎಂದು ಗಿರುತಿಸಿಕೊಂಡಿದ್ದಾರೆ. ಮುಖ್ಯ ಮಂತ್ರಿ ಸಿದ್ಧರಾಮಯ್ಯ ರವರಿಂದ ಶುಭ ಹಾರೈಕೆ-ಸಂಡೂರು ಕ್ಷೇತ್ರದ ಹಾಲಿ ಶಾಸಕರಾಗಿರುವ ಈ. ತುಕಾರಾಮ್ ಅವರಿಗೆ, ಮುಖ್ಯ ಮಂತ್ರಿ ಸಿದ್ಧರಾಮಯ್ಯರವರು ಶುಭ ಹಾರೈಸಿದ್ದಾರಂತೆ. ಲೋಕ ಸಭಾ ಚುನಾವಣೆ ಸ್ಪರ್ಧೆಯಿಂದಾಗಿ. ಅವರು ಮುಂದೆ ‘ಉತ್ತಮ ರಾಜಕೀಯ ಭವಿಷ್ಯ ಹೊಂದಲಿದ್ದೀರಿ’ ಎಂದು, ಮುಖ್ಯಮಂತ್ರಿಗಳು ಶುಭ ಹಾರೈಸಿದ್ದಾರೆಂದು ಬಲ್ಲ ಮೂಲಗಳುಳಿಂದ ತಿಳಿದು ಬಂದಿದೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಲ್ಲಿ ಈ ಹಿಂದೆ 7 ಮಂದಿಯ (ಸಚಿವ ಬಿ. ನಾಗೇಂದ್ರ, ವೆಂಕಟೇಶ್ ಪ್ರಸಾದ್, ವಿ.ಎಸ್ ಉಗ್ರಪ್ಪ, ಚೈತನ್ಯಾ(ಸೌಪರ್ಣಿಕಾ) ತುಕಾರಾಂ, ಸಚಿವ ಕೆ.ಎನ್ ರಾಜಣ್ಣ ಪುತ್ರ ರಾಜೇಂದ್ರ, ಮೊಳಕಾಲ್ಮೂರು ಶಾಸಕ ಎನ್.ವೈ ಗೋಪಾಲಕೃಷ್ಣ, ಗುಜ್ಜಲ್ ನಾಗರಾಜ್) ಹೆಸರು ಕೇಳಿ ಬಂದಿತ್ತು. ಆದರೆ, ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಗೆ (ಸಿಇಸಿ) ಈ. ತುಕಾರಾಮ್, ವಿ.ಎಸ್ ಉಗ್ರಪ್ಪ, ವೆಂಕಟೇಶ್ ಪ್ರಸಾದ್ ಹೆಸರುಗಳು ಮಾತ್ರ ಶಿಫಾರಸುಗೊಂಡಿದ್ದವೆಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ವಿಶೇಷ ವರದಿಗಾರರು ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.