ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದಲ್ಲಿರುವ ಡಾ”ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ (ಹೊಸಹಳ್ಳಿ)ಯಲ್ಲಿ, ವಿದ್ಯಾಭ್ಯಾಸ ಮಾಡುತ್ತಿರುವ ದಲಿತ ವಿದ್ಯಾರ್ಥಿಗಳಿಗೆ. ಕಳೆದ ಆರು ತಿಂಗಳುಗಳಿಂದ ಕನಿಷ್ಠ ಸೌಲಭ್ಯ(ಕಿಟ್), ನೀಡಿಲ್ಲ ಎಂಬ ಗಂಭೀರ ಆರೋಪವನ್ನು. ದಲಿತ ಯುವ ಹೋರಾಟಗಾರರಾದ ಪಂಪಾಪತಿ ಹಾಗೂ ಸಂತೋಷ ಕುಮಾರವರು, ಹೇಳಿಕೆ ನೀಡುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಇಲಾಖೆಯ ನಿರ್ಲಕ್ಷ್ಯ ಧೋರಣೆಯನ್ನು ಅವರು ತೀವ್ರವಾಗಿ ಖಂಡಿಸುತ್ತಿರುವುದಾಗಿ, ಮತ್ತು ಸಂಬಂಧಿಸಿದಂತೆ ಮುಖ್ಯ ಮಂತ್ರಿಗಳ ಗಮನಕ್ಕೆ ಲಿಖಿತ ದೂರಿನ ಮೂಲಕ ತರಲಾಗುವುದೆಂದು ತಿಳಿಸಿದರು. ದಲಿತ ಸಮುದಾಯಗಳ ಮಕ್ಕಳಿರುವ, ವಸತಿ ಶಾಲೆಗೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು. ಕಳೆದ ಆರು ತಿಂಗಳುಗಳಿಂದ ಕನಿಷ್ಠ (ಕಿಟ್)ಸೌಲಭ್ಯಗಳನ್ನು, ನೀಡದಿರುವುದು ಖಂಡನೀಯವಾಗಿದೆ. ಸಂಬಂಧಿಸಿದಂತೆ ಮಾಹಿತಿ ಹಕ್ಕಿನಡಿ ಖಚಿತ ಮಾಹಿತಿ ಪಡೆದು, ಇಲಾಖೆಯ ಜಿಲ್ಲಾಧಿಕಾರಿ ವಿರುದ್ಧ ಮತ್ತು ಉನ್ನತಾಧಿಕಾರಿ ವಿರುದ್ಧ, ಕಾನೂನು ಹೋರಾಟ ಮಾಡುವುದಾಗಿ ಅವರು ತಿಳಿಸಿದರು. ಅವ್ಯವಸ್ಥೆಯ ಆಗರ ಅಂಬೇಡ್ಕರ್-ಹೋರಾಟಗಾರರು-ಡಾ”ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಅವ್ಯವಸ್ಥೆಯ ಆಗರವಾಗಿದೆ ಎಂದು ಹೋರಾಟಗಾರರು ದೂರಿದ್ದಾರೆ. ತಾವು ವಸತಿ ಶಾಲೆಯ ವಿದ್ಯಾರ್ಥಿಗಳ ಕೋರಿಕೆ ಮೇರೆಗೆ, ವಸತಿ ಶಾಲೆಗೆ ಎ4ರಂದು ಭೇಟಿ ನೀಡಿ ಪರಿಶೀಲಿಸಿರುವುದಾಗಿ ಅವರು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮಂಚವಿಲ್ಲ ಹಾಗೂ ಡೆಸ್ಕ್ ಇಲ್ಲ ಹಾಗೂ ಊಟ ಮಾಡಲು ಟೇಬಲ್ ಗಳಿಲ್ಲ, ಅಭಾವಗಳ ಆಗರವಾಗಿದೆ ವಸತಿ ಶಾಲೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಡಾ”ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಅಭಾವಗಳ ಆಗರವಾಗಿದೆ ಎಂದು. ದಲಿತ ಯುವ ಹೋರಾಟಗಾರರಾದ, ಸಂತೋಷ ಕುಮಾರ ಹಾಗೂ ಪಂಪಾಪತಿ ವಿವರಿಸಿದರು. ಈ ಸಂದರ್ಭದಲ್ಲಿ ಜಿ.ಸಿದ್ದಪ್ಪ ಸೇರಿದಂತೆ ಇತರರು ಇದ್ದರು.
ವಿಶೇಷ ವರದಿ :-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.