ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಲ್ಲಿರುವ, ಕೋಚಿಂಗ್ ಸೆಂಟರ್ ಗಳಲ್ಲಿ ಹಲವು ಕೋಚಿಂಗ್ ಸೆಂಟರ್ ಗಳು ಮಕ್ಕಳ ಪೋಷಕರನ್ನು ಕೋಡಂಗಿಗಳನ್ನಾಗಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಬೇಸಿಗೆ ಸಮಯದಲ್ಲಿ “ಸಮ್ಮರ್ ಕ್ಯಾಂಪ್”, ಉಳಿದ ದಿನಗಳಲ್ಲಿ ನವೋದಯ ಮೊರಾರ್ಜಿ ವಸತಿ ಶಾಲೆ ಆದರ್ಶ ಸೇರಿದಂತೆ ಅನೇಕ ವಸತಿ ಶಾಲೆಗಳಿಗೆ. ಜರುಗುವ ಪ್ರವೇಶ ಪರೀಕ್ಷೆಗಳಿಗೆ ಮಕ್ಕಳನ್ನು ತಯಾರಿ ಮಾಡುವುದಾಗಿ, ಹತ್ತು ಹಲವು ಕೋಚಿಂಗ್ ಸೆಂಟರ್ ಗಳು ನಾಯಿ ಕೊಡೆಗಳಂತೆ ಹುಟ್ಟಿ ಕೊಂಡಿವೆ. ಮಕ್ಕಳನ್ನ ಹಾಗೂ ಅವರ ಪೋಷಕರ ಮನಸ್ಸನ್ನ ಸೆಳೆಯಲು, ಸಕಲ ಸೌಲಭ್ಯಗಳು ಸುಸಜ್ಜಿತ ಕಟ್ಟಡ ಉತ್ತಮ ಭೋಧನೆ ಲಭ್ಯ ಎಂಬ ಜಾಹೀರಾತು ಹಾಕಿ. ಐದನೇ ತರಗತಿ ಹಾಗೂ ಇತ್ತೀಚೆಗೆ ಮೂರನೇ ತರಗತಿಯ ವಿದ್ಯಾರ್ಥಿಗಳನ್ನು, ಹಾಗೂ ಅವರ ಪೋಷಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದ್ದಾರೆ. ಈ ಮೂಲಕ ಕೆಲ ಕೋಚಿಂಗ್ ಸೆಂಟರ್ ಗಳು, ಅನಧಿಕೃತವಾಗಿ ತಲೆ ಎತ್ತಿ ಮೆರೆಯುತ್ತಿವೆ. ಮತ್ತು ನಿರಂತರವಾಗಿ ವಿದ್ಯಾರ್ಥಿಗಳನ್ನು ಹಾಗೂ ವಿದ್ಯಾರ್ಥಿಗಳ ಪೋಷಕರನ್ನು, ಅತೀ ಸುಲಭವಾಗಿ ಮೋಡಿ ಮಾಡಿ ನಯವಾಗಿ ವಂಚಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಬಹುತೇಕ ಕೋಚಿಂಗ್ ಸೆಂಟರ್ ಗಳಲ್ಲಿ , ಮೂಲಭೂತ ಸೋಕರ್ಯಗಳೇ ಇರಲ್ಲ ಜಾಹೀರಾತು ನಲ್ಲಿ ಸುಳ್ಳು ಮಾಹಿತಿ ಹಾಕಿ ವಂಚಿಸಲಾಗುತ್ತಿದೆ ಎನ್ನಲಾಗಿದೆ. ಕೆಲ ಕೋಚಿಂಗ್ ಕೇಂದ್ರಗಳು ಕೋಳಿ ಫಾರಂ ರೀತಿಯ, ಕಬ್ಬಿಣದ ತಗಡಿನ ಚಾವಣೆ ಹೊಂದಿದ್ದು ಕಾದು ಕುದಿಯೋ ಬಾಂಡಲಿಯಂತಿವೆ. ಸುರಕ್ಷತೆ ಮರೀಚಿಕೆ- ಕೆಲ ಕೋಚಿಂಗ್ ಕೇಂದ್ರಗಳು ಕುರಿ ಹಟ್ಟಿಯಂತಿವೆ ಮಕ್ಕಳನ್ನು ಕುರಿ ಹಿಂಡಿನಂತೆ ಕೂಡಿ ಹಾಕಲಾಗುತ್ತೆ, ಸುಸಜ್ಜಿತವಲ್ಲದಿದ್ದರೂ ಬೇಲಿಯ ಕಾಂಪೌಂಡು ಇಲ್ಲದಂತಿವೆ. ಸುತ್ತ ಮುಳ್ಳು ಕಳ್ಳಿಗಳ ಸಾಲುಗಳ ಮದ್ಯ ಕೋಚಿಂಗ್ ಕೇಂದ್ರ ಇರುವುದನ್ನು, ಕೂಡ್ಲಿಗಿ ಪಟ್ಟಣದಲ್ಲಿಯೇ ಕಾಣ ಬಹುದಾಗಿದೆ. ಪಟ್ಟಣದ ಡಾ”ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಬಳಿ ಇರುವ, ಕೋಚಿಂಗ್ ಕೇಂದ್ರವೊಂದರಲ್ಲಿ ಮೂಲಭೂತ ಸೌಕರ್ಯಗಳು ಮರೀಚೆಕೆಯಾಗಿವೆ, ಅದಕ್ಕೆ ಹೊಂದಿಕೊಂಡಂತೆ ಮುಂದೊಂದು ಹಿಂದೊಂದು ಬೃಹದಾಕಾರದ ತೆರೆದ ಬಾವಿಗಳಿವೆ. ಒಂದರಲ್ಲಿ ಕೊಳಚೆ ನೀರಿದ್ದು, ಈನ್ನೊಂದು ಬರಡಾಗಿದೆ. ಇವೆರೆಡೂ ಬಲಿಗಾಗಿ ಬಾಯಿತೆರೆದ ಭೂತಗಳಂತೆ ಗೋಚರಿಸುತ್ತಿವೆ, ಅಪ್ಪಿ ತಪ್ಪಿ ಕೋಚಿಂಗ್ ಕೇಂದ್ರದ ಮಕ್ಕಳು ಅತ್ತ ಕಡೆ ತೆರಳಿದ್ದಲ್ಲಿ. ಅಪಾಯ ಕಟ್ಟಿಟ್ಟ ಬುತ್ತಿ ಇದರ ಪರಿವೆ ಇದ್ದರೂ ಕೂಡ, ಇಲ್ಲಿಯ ಕೆೋಚಿಂಗ್ ಕೇಂದ್ರದವರು ಕಳೆದ ಐದು ವರ್ಷದಿಂದ ಇಲ್ಲಿದ್ದಾರೆ. ಹಾಗೂ ಭೂಮಾಲೀಕರು ನಿತ್ಯ ಹಗಲು ರಾತ್ರಿ ಇಲ್ಲೀಯೇ ಇದ್ದರೂ ಕೂಢ, ತಮಗೂ ಇದಕ್ಕೂ ಸಂಬಧವಿಲ್ಲವೇನೋ ಅನ್ನೋ ರೀತಿ ನಿರ್ಲಕ್ಷ್ಯ ಧೊರಣೆ ತಾಳಿದ್ದಾರೆ, ಆದರೂ ಕೂಡ ಈ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಸೇರಿಸುವ ಮುನ್ನ. ಕೇಂದ್ರದ ಪರಿಸರ ಹಾಗೂ ಮೂಲಭೂತ ಸೌಕರ್ಯಗಳ ಕುರಿತು, ಪರಾಮರ್ಶೆ ಮಾಡದೇ ಕುರಿಗಳಂತೆ ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು, ತಮಗೂ ಮಕ್ಕಳಿಗೂ ಸಂಬಂಧ ಇಲ್ಲವೇನೋ ಅನ್ನೋ ರೀತಿಯಲ್ಲಿ. ಮತ್ತು ತಮಗೆ ಮಕ್ಕಳು ಹೊರೆಯಾಗಿದ್ದು, ಅವರನ್ನು ಕೇಂದ್ರದವರ ಕೈಗೊಪ್ಪಿಸಿ ತಾವು ಅರಾಮಿರಬಹುದೆಂಬ ಮೌಢ್ಯತೆಯೊಂದಿಗೆ ಕೋಚಿಂಗ್ ಕೈಂದ್ರಕ್ಕೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ ಏನ್ನುಸುತ್ತಿದೆ ಮೇಲ್ನೋಟಕ್ಕೆ. ಕೋಳಿ ಫಾರಂಗೆ ಮಾಡಲಾಗಿದ್ದ ತಗಡಿನ ಹೊದಿಕೆಯಿಂದ ನಿರ್ಮಿಸಲಾಗಿರುವ, ಗೋದಾಮಿನ ಕಟ್ಠಢದಲ್ಲಿ ಈ ಕೋಚಿಂಗ್ ಕೇಂದ್ರವಿದೆ. ಆದರೆ ಪ್ರಚಾರದಲ್ಲಿ ಸಕಲ ಸೌಲಭ್ಯಗಳಿರುವುದಾಗಿ ಘೋಷಿಸಲಾಗಿದೆ. ಇದು ಕೇವಲ ಉದಾಹರಣೆ ಮಾತ್ರ, ಇಂತಹ ಅವ್ಯವಸ್ಥೆಯ ಕೋಚಿಂಗ್ ಕೇಂದ್ರಗಳು. ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆ ಕಂಡುಬರುತ್ತದ್ದು, ಇಂತಹ ಕುರಿ ಹಟ್ಟಿಗಳಿಗೆ ಕೋಳಿ ಫಾರಂ ಗಳಂತಹ, ಅವ್ಯವಸ್ಥೆಯ ಆಗರವಾದ ಕೋಚಿಂಗ್ ಕೇಂದ್ರಗಳಿಗೆ. ಪೋಷಕರು ತಮ್ಮ ಮಕ್ಕಳನ್ನು ತಂದು ಬಿಟ್ಟು ಹೋಗುವುದಲ್ಲದೇ, ಅವರೈಳಿದಷ್ಟು ಹಣವನ್ನು ಸುಖಾ ಸುಮ್ಮನೆ ಸಂದಾಯ ಮಾಡುತ್ತಿದ್ದಾರೆ. ವಿನಾಕಾರಣ ತಮ್ಮ ಮಕ್ಕಳನ್ನು ದೂರ ವಿಟ್ಟು, ಕೋಚಿಂಗ್ ನೆಪದಲ್ಲಿ ಮಕ್ಕಳಲ್ಲಿ ಅನಾಥ ಪ್ರಜ್ಞೆಯನ್ನು ಬೇರೂರಿಸುತ್ತಿದ್ದಾರೆ ಎಂದು ಪ್ರಜ್ಞಾವಂತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಡೇಂಜರ್ ಜೋನ್ ನಲ್ಲಿ ಕೋಚಿಂಗ್ ಸೆಂಥರ್- ಬಹುತೇಕ ಕೇಂದ್ರದವರು ಕೋಚಿಂಗ್ ಕೇಂದ್ರದ ಹೆಸರಲ್ಲಿ, ವಿದ್ಯಾರ್ಥಿಗಳ ಪೋಷಕರಿಂದ ಸಾವಿರ ಸಾವಿರ ಹಣ ಪೀಕುತ್ತಾರೆ ವಿನಃ. ಮಕ್ಕಳಿಗೆ ಯಾವುದೇ ಸುರಕ್ಷತೆ ಇರೋದಿಲ್ಲ ವಾರಕ್ಕೆರಡುಬಾರಿ, ಮಕ್ಕಳಿಗೆ ವಿಷ ಜಂತುಗಳ ದರ್ಶನ ಭಾಗ್ಯ ಇರುತ್ತದೆಯಂತೆ. ಆರೋಗ್ಯ ಕಿಟ್ ಪರಿಚಯವೇ ಇರೋಲ್ಲವಂತೆ, ಪಾಠ ಮಾಡೋ ಶಿಕ್ಷಕರೇ ಅನರ್ಹರಾಗಿದ್ದರೆ ಅದೆಷ್ಟರ ಮಟ್ಟಿಗೆ ಮಕ್ಕಳು ತಾಯಾರಾಗಬಲ್ಲರು ನೀವೇ ಹೇಳಿ.!?. ಕೆಲವು ಕೇಂದ್ರಗಳಲ್ಲಿ ಅಯೋಗ್ಯ ಹಾಗೂ ಅನರ್ಹರನ್ನು, ಉತ್ತಮ ಶಿಕ್ಷ ಕರೆಂದು ಬಿಂಬಿಸಿ ಪೋಷಕರಿಗೆ ಬೀಲ್ಡಪ್ ನೀಡಿ ವಂಚಿಸಲಾಗುತ್ತಿದೆ ಎಂಬ ಗಂಭೀರ ಆರೋಪವಿದೆ. ಬಹುತೇಕ ಕೇಂದ್ರಗಳಲ್ಲಿ ಸ್ವಚ್ಚ ಕುಡಿಯುವ ನೀರು ಸ್ನಾನಕ್ಕೆ ಬಿಸಿ ನೀರು ಅಲಭ್ಯವಂತೆ, ಪ್ರಚಾರದಲ್ಲಿ ತೋರಿಸಿರುವ ಸೌಲಭ್ಯಗಳು ಪ್ರಚಾರಕ್ಕಷ್ಟೇ ಸೀಮಿತವಂತೆ ವಾಸ್ತವದಲ್ಲಿ ಶೂನ್ಯವಂತೆ. ಕೆಲ ಕೇಂದ್ರಗಳಲ್ಲಿ ಶಿಕ್ಷಕರು ಮಕ್ಕೊಳೊಂದಿಗೆ ತುಂಬಾ ಒರಟು ಸ್ವಾಭಾವ ಮಾತ್ರವಲ್ಲ, ಕ್ರೂರ ರಾಕ್ಷಸ ರೀತಿ ವರ್ತಿಸುತ್ತಾರೆಂಬ ಕೂಗು ಕೇಳಿಬಂದಿದೆ. ಇದು ಬಹಿರಂಗವಾಗದಂತೆ ಎಲ್ಲಾರೀತಿಯ ವ್ಯವಸ್ಥೆ ಮಾಡಿದ್ದು, ಬಹುತೇಕ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳೇ ಇರೋದಿಲ್ಲವಂತೆ. ಕೆಲ ಕೇಂದ್ರಗಳು ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿ ಮಕ್ಕಳನ್ನು ಸ್ಪರ್ಧೆಗೆ ಸನ್ನದ್ಧರನ್ನಾಗಿ ತರಾರಿಸುತ್ತಿದ್ದು, ಕೆಲ ಕೇಂದ್ರಗಳು ಹಣ ಸುಲಿಯುವ ಕೇಂದ್ರಗಳಾಗಿ ಪರಿವರ್ತನೆಯಾಗಿವೆಯಂತೆ. ಎಲ್ಲದಕ್ಕೂ ಮಿಗಿಲಾದದ್ದು ಈ ಕೇಂದ್ರಗಳು ನಾಯಿ ಕೊಡೆಗಳಂತೆ ಅನಧೀಕೃತವಾಗಿ ತಲೆ ಎತ್ತುತ್ತಿವೆ, ಅಗತ್ಯವಾಗಿ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ಪರವಾನಗಿ ಪಡೆಯಬೇಕಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲೆಡೆಯಿರುವ ಬಹುತೇಕ , ಕೋಚಿಂಗ್ ಕೇಂದ್ರಗಳು ಇಲಾಖೆಯಿಂದ ಯಾವುದೇ ಪರವಾನಗಿ ಹೊಂದದೇ ರಾಜಾ ರೋಷವಾಗಿ ಹಣ ವಸೂಲಿ ದಂಧೆಯಲ್ಲಿ ನಿರತವಾಗಿವೆ ಎಂಬ ದೂರು ಇದೆ. ಕೆಲ ಕೋಚಿಂಗ್ ಕೇಂದ್ರ ಗಳ ಮಾಲೀಕರೇ ಅನರ್ಹರಿದ್ದು, ಅಯೋಗ್ಯರು ಕೋಚಿಂಗ್ ಕೇಂದ್ರಗಳನ್ನು ರಾಜಾ ರೋಷವಾಗಿ ನಡೆಸುತ್ತಿದ್ದಾರೆಂಬ ದೂರಿದೆ. ಪಠ್ಯ ಶಿಕ್ಷಣ ವಂಚಿಸುತ್ತಿರುವ ಕೋಚಿಂಗ್ ಕೇಂದ್ರಗಳು- ಕೋಚಿಂಗ್ ಕೇಂದ್ರದಲ್ಲಿ ದಾಖಲಾದ ವಿದ್ಯಾರ್ಥಿಗಳು, ತಮ್ಮ ಶಾಲೆಯ ತರಗತಿಗಳಿಗೆ ಖಾಯಂ ಗೈರಾಗುತ್ತಿರುವುದು ಸಾಮಾನ್ಯ. ಇದರಿಂದಾಗಿ ಅವರು ಪಠ್ಯ ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ. ಮತ್ತು ಖಾಯಂ ಆಗಿ ಶಾಲೆಯಿಂದಲೇ ದೂರ ಇರೋ ಪ್ರಸಂಗ ಸೃಷ್ಠಿಯಾಗುತ್ತಿದೆ. ಕೋಚಿಂಗ್ ಕೇಂದ್ರಗಳಿಂದಾಗಿ ಸರ್ಕಾರ ವಸತಿ ನಿಲಯಗಳನ್ನು ಸ್ಥಾಪಿಸುವ, ಮಹತ್ತರವಾದ ಧ್ಯೆಯೋದ್ಧೇಶ ಈಡೇರದಾಗಿದೆ. ವಸತಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಹಾಗೂ ಬಡ ದಲಿತ ಕೂಲಿ ಕಾರ್ಮಿಕ ಮಕ್ಕಳು ಪಾಸುಗುವಲ್ಲಿ ಹಿಂಜರಿಯುವಂತಾಗಿದೆ. ಏಕೆಂದರೆ ದುಭಾರಿ ಹಣ ನೀಡಿ ಕೋಚಿಂಗ್ ಕೇಂದ್ರಗಳಿಗೆ ಸೇರಿಸುವ ಆರ್ಥಿಕ ಶಕ್ತಿ ಬಡ ವಿದ್ಯಾರ್ಥಿಗಳ ಪೋಷಕರಿಗಿರುವುದಿಲ್ಲ . ಈ ರೀತಿಯಾಗಿ ಕೋಚಿಂಗ್ ಕೇಂದ್ರಗಳಿಂದಾಗಿ, ಬಡ ವಿದ್ಯಾರ್ಥಿಗಳು ಪರೋಕ್ಷವಾಗಿ ವಂಚಿತರಾಗುತ್ತಿದ್ದಾರೆ. ಎಲ್ಲಾ ಶಾಲಾ ಮಕ್ಕಳಿಗೂ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ, ಮಕ್ಕಳನ್ನು ತಯಾರಿ ಮಾಡುವ ಉಚಿತ ಕೋಚಿಂಗ್ ದೊರಕಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸ್ಥಳೀಯ ನಿರುದ್ಯೋಗಿ ಪದವೀ ಧರರಿಂದ, ಮಕ್ಕಳಿಗೆ ಪ್ರವೇಶ ಪರೀಕ್ಷೆಗೆ ಸನ್ನದ್ಧರನ್ನಾಗಿಸುವ ಕೋಚಿಂಗ್ ದೊರಕಿಸಬೇಕಿದೆ. ಇಲ್ಲವಾದಲ್ಲಿ ಶಾಲೆಗಳು ಮುಚ್ಚಿದರೂ ಅಥವಾ ಕೆಲ ತರಗತಿಗಳ ಪಠ್ಯ ಚಟುವಟಿಜೆ ಖಾಯಂ ಆಗಿ ಕಾಣೆಯಾಗುವುದರಲ್ಲಿ ಸಂಶಯ ವಿಲ್ಲ ಎಂದು ಶಿಕ್ಷಣ ಪ್ರೇಮಿಗಳು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಕಾರಣ ಶಿಕ್ಷಣ ತಜ್ಞರು ಇಲಾಖೆಯ ಉನ್ನತಾಧಿಕಾರಿಗಳು, ಶಿಕ್ಷಣ ಮಂತ್ರಿಗಳು ಮುಖ್ಯ ಮಂತ್ರಿಗಳು ಅಗತ್ಯ ಕ್ರಮ ಜರೂರಾಗಿ ಜರುಗಿಸಬೇಕಿದೆ. ಪ್ರವೇಶ ಪರೀಕ್ಷೆಯಲ್ಲಿ ನಾಡಿನ ಅರ್ಹ ಮಕ್ಕಳೆಲ್ಲರೂ ಉತ್ತೀರ್ಣರಾಗುವಂತೆ ಸಭಲರನ್ನಾಗಿ ಮಾಡಬೇಕಿದೆ, ಬಡ ಮಕ್ಕಳ ದಲಿತ ಕಾರ್ಮಿಕ ಮಕ್ಕಳ ಹಿತ ಕಾಯಬೇಕಿದೆ. ವಿದ್ಯಾರ್ಥಿಗಳನ್ನು ಹಾಗೂ ಪೋಷಕರಿಂದ , ಬೇಕಾ ಬಿಟ್ಟಿ ಹಣ ವಸೂಲಿ ಮಾಡಿ ಅನಧೀಕೃತವಾಗಿ ನಡೆಸುತ್ತಿರುವ ಕೋಚಿಂಗ್ ಕೇಂದ್ರಗಳನ್ನು ಬಂದ್ ಮಾಡಿಸಬೇಕಿದೆ. ಈ ನಿಟ್ಟಿನಲ್ಲಿ ವಿಚಾರಣೆ ಮಾಡಬೇಕಿರುವ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಮೌನ ವಹಿಸಿರುವುದು ಹತ್ತು ಹಲವು ಅನುಮಾನಗಳನ್ನು ಹುಟ್ಟಿಹಾಕುತ್ತಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ದೂರು ಬಂದಾಗ ಅಥವಾ, ಇಂತಹ ವರದಿ ಬಂದಾಗ ಮಾತ್ರ ಉತ್ತರ ಕುಮಾರ ರೀತಿಯಲ್ಲಿ ಅಧಿಕಾರಿಗಳು ಸಿಡೆದೆದ್ದು. ಕೋಚಿಂಗ್ ಕೇಂದ್ರಗಳಿಗೆ ತೆರಳಿ ಅವರ ಆಧರ ಅತಿಥ್ಯ ಸ್ವೀಕರಿಸಿ, ಕೋಚಿಂಗ್ ಕೇಂದ್ರದವರು ನೀಡುವ ಲಾಲಿಪಪ್ಪು ತಿಂದು ತೇಗುತ್ತಾರಂತೆ. ಇನ್ನು ಶಿಕ್ಷಣ ಪ್ರೇಮಿಗಳೆನಿಸಿಕೊಂಡವರು, ಹಾಗೂ ಸಂಘಟನೆಕಾರರು ಹೋರಾಟಗಾರರು. ಕೇವಲ ಪ್ರಚಾರಕ್ಕೆ, ಹಾಗೂ ಉತ್ತರ ಕುಮಾರ ಪೌರುಷ ಪ್ರದರ್ಶನಕ್ಕೆ ಮಾತ್ರ ಸೀತಿರಾಗಿದ್ದಾರೆಂದು ಪ್ರಜ್ಞಾವಂತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇನೆ ಇರಲಿ ಕೋಚಿಂಗ್ ಕೇಂದ್ರ ಹೆಸರಲ್ಲಿ ವಿದ್ಯಾರ್ಥಿಗಳ ಪೋಷಕರಿಂದ, ಬೇಕಾ ಬಿಟ್ಟಿ ಹಣ ವಸೂಲಿ ಮಾಡುವ ಅನಧಿಕೃತ ಕೋಚಿಂಗ್ ಕೇಂದ್ರಗಳಿಂದ ದೂರವಿರಬೇಕಿದೆ. ಮಕ್ಕಳನ್ನು ಕೋಚಿಂಗ್ ನೆಪದಲ್ಲಿ ಅಯೋಗ್ಯರ ಕೈಗೆ ಕೊಟ್ಟು ಅವರಲ್ಲಿ ಅನಾಥ ಪ್ರಜ್ಞೆ ಮೂಡಿಸಬೇಡಿ, ಅವ್ಯವಸ್ಥೆಯ ಕೊಚಿಂಗ್ ಕೇಂದ್ರಕ್ಕೆ ಸೇರಿಸಿ ಕುರಿಹಟ್ಟಿಗೆ ಕುರಿ ಅಟ್ಟಿದಂತೆ ಮಕ್ಕಳನ್ನು ಬಿಟ್ಟು, ಮುಂದೆ ಪಡಬಾರದಂತಹ ಪಶ್ಚಾತ್ತಾಪ ಪಡದಿರಿ ಎಂಬುದೇ ನಮ್ಮ ಕಳ ಕಳಿ.. ವಿ.ಸೂ ಇಲ್ಲಿ ಬಳಸಿರುವ ಚಿತ್ರಗಳು ಸಾಂಧರ್ಭಿಕ ಮಾತ್ರ ಯಾವುದೇ ಕೋಚಿಂಗ್ ಕೇಂದ್ರದ ವಿರುದ್ಧ, ಅಪ ಪ್ರಚಾರ ಮಾಡುವ ಸಲುವಾಗಿ ಅಲ್ಲ. ಸಾಂದರ್ಭಿವಾಗಿಯೂ ಹಾಗೂ ವಾಸ್ತವಿಕವಾಗಿಯೂ ನೈಜ ಚಿತ್ರಣವಾಗಿದೆ.
ವಿಶೆಷ ವರದಿಗಾರರು :- ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.