ಡಾ.ಬಿ.ಆರ್.ಅಂಬೇಡ್ಕರ್ ರವರು ತಮ್ಮ ಜೀವನವನ್ನೇ ರಾಷ್ಟ್ರದ ಪ್ರಗತಿಗೆ ಮುಡುಪಾಗಿಟ್ಟಿದ್ದು,

Spread the love

ಡಾ.ಬಿ.ಆರ್.ಅಂಬೇಡ್ಕರ್ ರವರು ತಮ್ಮ ಜೀವನವನ್ನೇ ರಾಷ್ಟ್ರದ ಪ್ರಗತಿಗೆ ಮುಡುಪಾಗಿಟ್ಟಿದ್ದು,

ಅವತ್ತಿನ ದಿನಮಾನಗಳಲ್ಲಿ ಬ್ರಿಟಿಷರ ಲಾಠಿ ಬೂಟಿನ ಏಟು ದುರಂಕಾರದ ಆಡಳಿತವನ್ನು ಹೋಗಿಲಿಕ್ಕೆ ಅವರ ಸೊಕ್ಕು ಅಡಗಿಸಲಿಕ್ಕೆ ತಮ್ಮ ಜೀವನವನ್ನೇ ಸ್ವತಂತ್ರಕ್ಕಾಗಿ ಮುಡುಪಾಗಿಟ್ಟವರು.  ದಿನ ಕಳೆದಂತೆ ಕಳೆದಂತೆ ಗೊತ್ತಾಯ್ತು ಮೇಲು ಕೀಳು ಅನ್ನುವ ವ್ಯಕ್ತಿಗಳಿಗೆ ಸ್ವತಂತ್ರ ಸಿಕ್ಕಿದ್ದು ದುಡ್ಡಿದ್ದವರಿಗೆ ದೊಡ್ಡ ಜಾತಿಯವರಿಗೆ , ಅಧಿಕಾರಿಗಳಿಗೆ ಓದಿದವರಿಗೆ ಓದಿ ಮನೆಯಲ್ಲಿರುವವರಿಗೆ ,ಗುಡಿಯಲ್ಲಿ ನಾವೇ ಶ್ರೇಷ್ಠ ಅಂತ ಬಾಯಿ ಬಡಕರಿಗೆ ಸ್ವತಂತ್ರ ಸಿಕ್ಕಿತ್ತು ಅಂತ. ಡಾ.ಬಿ.ಆರ್ ಅಂಬೇಡ್ಕರ್ ರವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಸ್ವತಂತ್ರ ಕೊಡಿಸುವ ನಿಟ್ಟಿನಲ್ಲಿ ಸಂವಿಧಾನವನ್ನು ರೂಪಿಸಿ ಸಂವಿಧಾನದ ಹಕ್ಕುಗಳನ್ನ ಪ್ರತಿಯೊಬ್ಬ ನಾಗರಿಕರು ಅನುಭವಿಸಲೇಬೇಕು ಪ್ರೀತಿಸಲೇಬೇಕು ಯಾರೇ ಎದುರು ಬಂದರು ತನ್ನ ಹಕ್ಕುಗಳನ್ನು ಕೇಳುವ  ಶಕ್ತಿ ಕೊಟ್ಟಿದ್ದೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಡಾ| ಬಾಬಾಸಾಹೇಬ್ ಅಂಬೇಡ್ಕರ್ ಅವರು ದಲಿತ ಜನಾಂಗದ ಆಶಾಕಿರಣ.ಸಾಮಾಜಿಕ ಕ್ರಾಂತಿಯ ಸಂಕೇತ, ‘ಪ್ರಗತಿಗೆ ವಿದ್ಯೆಯೇ ಮೂಲ’ ಎಂಬ ಮಂತ್ರವನ್ನು ಸಾರಿದ ಅಂಬೇಡ್ಕರ್ ಅವರು ಭಾರತಕ್ಕೆ ಮೊದಲು ಸಾಮಾಜಿಕ ಸ್ವಾತಂತ್ರ್ಯ ದೊರಕಬೇಕೆಂದು ಪ್ರತಿಪಾದಿಸಿ, ಶೋಷಿತ ಜನಾಂಗದ ವಿಕಾಸಕ್ಕೆ ಮಾರ್ಗೋಪಾಯಗಳನ್ನು ಚಿಂತಿಸಿದವರು. ‘ಭಾರತದ ಜಾತಿಪದ್ಧತಿಯೇ ಎಲ್ಲ ಅನಿಷ್ಟಗಳಿಗೆ ಕಾರಣ, ಅದು ನಿವಾರಣೆಯಾಗದೆ ಭಾರತದ ಪ್ರಗತಿ ಅಸಾಧ್ಯ’ವೆಂದು ದೃಢವಾಗಿ ನಂಬಿದವರು. ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಯ ಪರಿಕಲ್ಪನೆಯನ್ನು ಆಧರಿಸಿ ತಮ್ಮ ಸ್ವತಂತ್ರಕ್ಕಾಗಿ ಹೋರಾಡುವ ಇಚ್ಛೆ ಹೊಳ್ಳವ ಸ್ವಚ್ಛ ಸಮಾಜ ಪುನರ್ ನಿರ್ಮಾಣವಾಗಬೇಕೆಂದು ನಂಬಿ ಅದರ ಅನುಷ್ಠಾನಕ್ಕಾಗಿ ಹೋರಾಡಿದ ಧೀಮಂತ ಚೇತನ. ಮಹಾನ್ ಮಾನವತಾವಾದಿ ಅರ್ಥಶಾಸ್ತ್ರಜ್ಞ ,ಇತಿಹಾಸ ರಚಿಸಿದ ಖ್ಯಾತಚಿಂತಕ,ವಿಶ್ವಮಾನವ ,ಅಧುನಿಕ ಭಾರತದ ನಿರ್ಮಾಪರಾದ ಸ್ವರೂಪಕ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೩ ನೇ ಜನ್ಮದಿನದಂದು ಶತ ಶತ ನಮನಗಳು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರು ಶಿವಲೀಲಾ ಕೊಟ್ರಯ್ಯನವರು ಕಾಂಗ್ರೆಸ್ ಯುವ ಮುಖಂಡರಾದ ತಿಪ್ಪೇಶ್.ಬಿ, ತಿಪ್ಪೇಶ್ ಚಿಕ್ಕಣ್ಣ, ನವೀನ್ , ನಾಗರಾಜ್, ಗಣೇಶ್ ಕೆ, ಇನ್ನಿತರರು.

ವರದಿ-ಉಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *