ಲಾಕ್ ಡೌನ್ ಸಂದರ್ಭದಲ್ಲಿ ತರಕಾರಿ ಅಂಗಡಿ ಸಿಜ್ ಮಾಡಿ ನಿರ್ಗತಿಕರಿಗೆ ಹಂಚಿದ ಮಹೀಳಾ ಪಿ.ಸ್.ಐ. ಗೀತಾಂಜಲಿ ಶಿಂಧೆಯವರು.

Spread the love

ಲಾಕ್ ಡೌನ್ ಸಂದರ್ಭದಲ್ಲಿ ತರಕಾರಿ ಅಂಗಡಿ ಸಿಜ್ ಮಾಡಿ ನಿರ್ಗತಿಕರಿಗೆ ಹಂಚಿದ ಮಹೀಳಾ ಪಿ.ಸ್.ಐ. ಗೀತಾಂಜಲಿ ಶಿಂಧೆಯವರು.

ಸರ್ಕಾರ ಹೋರಡಿಸಿರುವ ಸಂಪೂರ್ಣ ಲಾಕಡೌನ್ ಸಂಧರ್ಭದಲ್ಲಿ ಲಾಕಡೌನ್ ಉಲ್ಲಂಘನೆ ಮಾಡಿ  ತಾವರಗೇರಾ ಪಟ್ಟಣದಲ್ಲಿ ತರಕಾರಿ ವ್ಯಾಪಾರಿಗಳು ಹಗಲು/ರಾತ್ರಿ ಎನ್ನದೇ ತರಕಾರಿ ವ್ಯಾಪಾರ ಮಾಡುತ್ತಿರುವದನ್ನು ಗಮನಿಸಿದ ಪಿ ಎಸ್ ಐ  ಹಾಗೂ ಅವರ ತಂಡ  ದಾಳಿ ಮಾಡಿ ತಕಕಾರಿ ಅಂಗಡಿಯನ್ನು ಸೀಜ್ ಮಾಡಿ ತದನಂತರ ಅಲ್ಲಿದ್ದ ತರಕಾರಿ  ಎರಡು ಹುಳಾಗಡ್ಡಿ ಚಿಲ ಒಂದು ಮೆಣಸಿನಕಾಯಿ ಚಿಲ ಒಂದು ಗಜ್ಜರಿ ಚಿಲವನ್ನು ವಶ ಪಡಿಸಿಕೊಂಡು, ತಾವರಗೇರಾ ಪಟ್ಟಣದ ಬಸವಣ್ಣ ಕ್ಯಾಂಪಿನ ನಿರ್ಗತಿಕರು ಹಾಗೂ ಕಡು ಬಡ (ಚಪ್ಪಲಿ) ಹೊಲಿಯುವ ಜನರಿಗೆ ಈ ತರಕಾರಿಗಳನ್ನು ವಿತರಣೆ ಮಾಡಿರುವುದು  ಮಾನವಿತೆಯ ಧರ್ಮವಾಗಿದೆ. ಸರ್ಕಾರ ಆದೇಶಗಳನ್ನು ಮೀರಿ ಉಲ್ಲಂಘನೆ ಮಾಡುವವರ ವಿರುದ್ದ ಕಾನೂನು ಕ್ರಮ ತಗೆದುಕೋಳ್ಳುವುದು ನಿಷ್ಠವಂತ ಅಧಿಕಾರಗಳ ಶಕ್ತಿಯಾಗಿದೆ. ತಾವರಗೇರಾ ಪಟ್ಟಣದಲ್ಲಿ ನಾನಾ ರೀತಿಯ ಜನರು ನಾನಾ ರೀತಿಯಲ್ಲಿ ಸ್ಫಂಧಿಸುತ್ತಾರೆ ಹಾಗೇ ವಿರೋದ ಸಹ ಮಾಡುತ್ತಾರೆ.  ಇವರು ಹಲವು ಸಮಾಜಮೂಖಿ ಕಾರ್ಯಗಳಲ್ಲಿ ಭಾಗಿಯಾಗಿ ಈ ಕೋವಿಡ್ ವೈರಸ್ ಬಗ್ಗೆ ಜಾಗೃತಿ ಮೂಡಿಸಿ ಸಾರ್ವಜನಿಕರಿಗೆ ತಿಳಿ ಹೇಳುವ ಮೂಲಕ ಸಾರ್ವಜನಿಕ ವಲಯದಲ್ಲಿ ಇಂತಹ ಅಧಿಕಾರಿಗಳು ಈ ಪಟ್ಟಣಕ್ಕೆ ಅತ್ಯವಶಕವೆಂದು ಬುದ್ದಿ ಜೀವಿಗಳು ಹೇಳುತ್ತಾರೆ. ಏನೆ ಆಗಲಿ ನೇರ, ನಡೆ, ನುಡಿ, ಪ್ರಾಮಾಣಿಕ, ನಿಷ್ಠೆ, ಕರ್ತವ್ಯಕ್ಕೆ  ಹಾಗೂ ಮನುಷ್ಯನ ಮಾನವಿಯತೆಗೆ  ಹೆಚ್ಚು ಗೌರವ ಕೊಡುವ ಇಂತಹ ಮಹಿಳಾ ಪಿ ಎಸ್ ಐ   ಗೀತಾಂಜಲಿ ಶಿಂಧೆಯವರು ಸದಾ ಕಾಲ ಇಲ್ಲೆ ಇರಲಿ ಎನ್ನುವುದು ಸಾರ್ವಜನಿಕರ ವಲಯದಲ್ಲಿ ಕೆಳಿಬರ್ತಾಯಿದೆ ಹಾಗೆ ತಾವರಗೇರಾ ಠಾಣೆಯಿಂದಲೆ ಬಡ್ತಿ ಪಡೆದು ಉನ್ನತ  ಉದ್ದೆಗೇರಲಿ ಎನ್ನುವುದೆ ತಾವರಗರಾ ನ್ಯೂಸ್ ಪತ್ರಿಕೆ ಹಾಗೂ ತಾವರಗೇರಾ ನ್ಯೂಸ್ ವೆಬ್ ನ ಆಶಯ.

  ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

 

Leave a Reply

Your email address will not be published. Required fields are marked *