ಮತದಾನ ಮಾಡುವ ಸಮಸ್ತ ಸಮಾಜದ ಬಂಧು ಬಾಂಧವರಲ್ಲಿ ಸವಿನಯ ಪ್ರಾರ್ಥನೆ ಎಸ್ ಎಸ್ ಪಾಟೀಲ್.

Spread the love

ನನ್ನಲ್ಲಿ ಹಣ ಬಲವಿಲ್ಲ, ತೋಳ್ಬಲವೂ ಇಲ್ಲ ಆದರೆ ನಿಮ್ಮೆಲ್ಲರ ಮೇಲೆ ಆತ್ಮ ವಿಶ್ವಾಸದ ಬಲವಿದೆ, ನೀವು ನೀಡುವ ಪ್ರತಿಯೊಂದು ಮತದಾನದ ಬಲವಿದೆ ನೀವು ನೀಡುವ ಒಂದೊಂದು ಮತವೇ ನನಗೆ ಆತ್ಮಬಲ,ಹಣಬಲ, ತೋಳ್ಬಲ ಎಂದು ನಾನು ಅಂದುಕೊಂಡಿದ್ದೀನಿ, ಸರ್ಕಾರದ ಎಲ್ಲಾ ಇಲಾಖೆಗಳ ಹಿರಿಯ ಕಿರಿಯ ಆತ್ಮೀಯ ಅಧಿಕಾರಿಗಳು ಹಾಗೂ ಬಂಧು ಬಾಂಧವರು ತಮ್ಮಲ್ಲಿಯೂ ನಾನು ಪ್ರಾರ್ಥಿಸಿ ತಮ್ಮ ಪವಿತ್ರ ಮತವನ್ನು ನೀಡಿ ಎಂದು ಕೇಳಿಕೊಂಡಿದ್ದೇನೆ. ಆತ್ಮೀಯ ಬಂಧುಗಳೇ ಹಣ ಹೆಂಡ ಮತ್ತು ಆಸೆಗಳಿಗೆ ಬಲಿಯಾಗಬೇಡಿ ಪವಿತ್ರ ಮತವನ್ನು ಮಾರಿಕೊಳ್ಳಬೇಡಿ ಎಂದು ತಮ್ಮಲ್ಲಿ ನನ್ನ ಸವಿನಯ ಪ್ರಾರ್ಥನೆ, ಪ್ರೀತಿಯಿಂದ ಆಶಿರ್ವಾದ ಮಾಡಿ ಇದೊಂದು ಬಾರಿ ನಿಮ್ಮ ಸೇವಕನಾಗಿ ಸೇವೆ ಮಾಡಲು ಅವಕಾಶ ಕೊಟ್ಟು ನೋಡಿ ನಿಜವಾದ ಜನಪ್ರತಿನಿಧಿಯ ಕಾರ್ಯ ವೈಖರಿ ಎಂಥಾದ್ದು ಎಂದು ಸರ್ವರಿಗೂ ತೋರಿಸಿ ಕೊಡುತ್ತೇನೆ. ನನ್ನ ಆತ್ಮೀಯ ಬಂಧುಗಳೇ ನಾನು ಎಸ್ ಎಸ್ ಪಾಟೀಲ್ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ನಿಮ್ಮ ಕೃಪೆ ಬೇಕು. ಬಂಧುಗಳೇ ನೀವು ಯಾವುದೇ ಊರಲ್ಲಿ ಇರಲಿ ಆದರೆ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ, ಅಣ್ಣಿಗೇರಿ, ಅಳ್ನಾವರ,ಈ ಎಲ್ಲಾ ತಾಲ್ಲೂಕುಗಳಲ್ಲಿ ನಿಮಗೆ ಪರಿಚಯವಿರುವ ನಿಮ್ಮ ಬಂಧುಗಳು ಮತ್ತು ಗೆಳೆಯರು ವೀರಶೈವ ಲಿಂಗಾಯತ ವರ್ಗದ ಬಂಧುಗಳು,ಕುರುಬ ಸಮಾಜದ ಬಂಧು ಬಾಂಧವರು, ವಾಲ್ಮೀಕಿ ಸಮುದಾಯದ ಬಂಧುಗಳು, ಅಂಬಿಗರ ಸಮಾಜದ ಬಂಧು ಬಾಂಧವರು,ಬಂಜಾರ ಸಮಾಜದ ಬಂಧುಗಳು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಬಂಧುಗಳು, ಹಾಗೂ ಸಮಸ್ತ ಅಲ್ಪಸಂಖ್ಯಾತ ಸಮುದಾಯದ ಬಂಧುಗಳು ಸೇರಿ ನಿಮ್ಮ ಎಲ್ಲಾ ಬಂಧುಗಳು ಮತ್ತು ಪರಿಚಯ ಇರವ ಎಲ್ಲರಿಗೂ ಹೇಳಿ ಮತದಾನ ಮಾಡಿಸಿರಿ. ನನ್ನ ಆತ್ಮೀಯ ಎಲ್ಲಾ ಮಠಾಧೀಶರು, ಪುರೋಹಿತರು ಮತ್ತು ಅರ್ಚಕರು ಎಲ್ಲಾ ನನ್ನ ಪ್ರೀತಿಯ ಜಂಗಮ ಕುಲಬಾಂಧವರಿಗೆ ಮತ್ತು ವೀರಶೈವ ಲಿಂಗಾಯತ ಬಂಧುಗಳು ಹಾಗೂ ಸಮಸ್ತ ಎಲ್ಲಾ ಸಮಾಜದ ಬಂಧು ಬಾಂಧವರು ಇನ್ನಾದರೂ ಎಚ್ಚೆತ್ತುಕೊಂಡು ನೋಡಿ ತಿಳಿದುಕೊಂಡು ಮತದಾನ ಮಾಡಿರಿ. ಸಮಾನತೆ , ಸ್ನೇಹ ಭಾತೃತ್ವ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯ ಆಗಬೇಕಾಗಿದೆ ಎಂದು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಂಡು ಮತ ಭಿಕ್ಷೆ ಬೇಡುವ ಮೂಲಕ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಆಶಿರ್ವಾದ ಕೇಳಿಕೊಂಡಿದ್ದೇನೆ. ನನ್ನ ಆತ್ಮೀಯ ಬಂಧುಗಳೇ ಅಖಿಲ ಭಾರತ ಹಿಂದೂ ಮಹಾಸಭಾ ಪಾರ್ಟಿಗೆ ಮತವನ್ನು ಹಾಕಿ ಗೆಲುವು ತರಬೇಕೆಂದು ನನ್ನ ಸವಿನಯ ಪ್ರಾರ್ಥನೆ. ಕೊನೆಯದಾಗಿ ನನ್ನ ಆತ್ಮೀಯ ಪತ್ರಕರ್ತರು ಮಿತ್ರರು ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಪ್ರಿಂಟ್ ಮಾಧ್ಯಮಗಳ ಹಿರಿಯ, ಕಿರಿಯ ಎಲ್ಲಾ ಪತ್ರಕರ್ತ ಬಂಧುಗಳು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಬೆಂಬಲ ನೀಡಲು ತಮ್ಮಲ್ಲಿ ಕೇಳಿಕೊಂಡಿರುತ್ತೇನೆ ಎಸ್ ಎಸ್ ಪಾಟೀಲ್ ಧಾರವಾಡ ಲೋಕಸಭಾ ಅಭ್ಯರ್ಥಿ ಅಖಿಲ ಭಾರತ ಹಿಂದೂ ಮಹಾಸಭಾ 9611766539. ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ದಾರವಾಡಲೋಕಸಭಾ ಜನತೆಗೆ ಮನವಿ ಮಾಡಿಕೊಳ್ಳುತ್ತೆವೆ. ಧನ್ಯವಾದಗಳೊಂದಿಗೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗದವತಿಯಿಂದ.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *