ತಾವರಗೇರಾ ಹೋಬಳಿಯ ಹಿರೇಮುಕರ್ತಿನಾಳ ಗ್ರಾಮದಲ್ಲಿ ಸಿಡಿಲಿನ ಒಡೆತಕ್ಕೆ ರೈತ ಸ್ಥಳದಲ್ಲೆ ಸಾವು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲುಕಿನ ತಾವರಗೇರಾ ಹೋಬಳಿ ವ್ಯಾಪ್ತಿಗೆ ಬರುವ ಮೆಣೇದಾಳ ಗ್ರಾಮ ಪಂಚಾಯತ ವ್ಯಪ್ತಿಯ ಹಿರೇಮುಕರ್ತಿನಾಳ ಗ್ರಾಮದಲ್ಲಿ ನಿನ್ನೆ ಸಂಜೆ ಸಿಡಿಲು ಬಡಿದು ರೈತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ. ನಿನ್ನೆ ಸಂಜೆ ಸುಮಾರಿಗೆ ಮಳೆರಾಯನ ಅರ್ಭಟಕ್ಕೆ ಸಿಡುಲು, ಗುಡುಗು, ಮಿಂಚಿನ ಅರ್ಭಟವು ಜೋರಾಗಿತ್ತು ಭೂಮಿಯ ಒಡಲು ಬೆಸಿಗೆಗೆ ತತ್ತರಿಸಿ ಹೋಗಿದೆ, ಅಡವಿಯಲ್ಲಿ ವನ್ಯ ಜೀವಿಗಳಿಗೆ ನೀರು ಇಲ್ಲಂದಾಗಿದೆ, ಭೂಮಿಯ ಒಡಲು ತಂಪ್ಪೆರಲು ಮಳೆರಾಯ ನಿನ್ನೆ ಸಂಜೆ ಸುಮಾರಿಗೆ ಮಳೆ ಜೊತೆಗೆ ಗುಡುಗು, ಸಿಡಿಲನ್ನು ಒತ್ತು ತಂದು ಹಿರೇಮುಕರ್ತಿನಾಳ ಗ್ರಾಮದಲ್ಲಿ ಸಿಡಿಲಿನ ಬೆಸಿಗ್ಗೆ ರೈತ ತನ್ನ ಹೊಲದಲ್ಲಿ ಸಾವನ್ನಪ್ಪಿದ ಘಟನೆ. ರೈತನ ಹೆಸರು ಶ್ರೀ ಕನಕರಾಯ ತಂದೆ ನಾಗಪ್ಪ ಕಾಟಾಪುರ ವಯಸ್ಸು 28 ಇದ್ದು, ಕೃಷಿ ಕೆಲಸಕ್ಕೆಂದು ಹೋದಾಗ ಸಿಡಿಲು ಬಡಿದು ಮೃತಪಟ್ಟಿರುತ್ತಾರೆ. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ದಿನಾಂಕ 11.05.2024 ರಂದು ಸಂಜೆ ತಾವರಗೇರಾ ಹೋಬಳಿಯ ಹಿರೇಮುರ್ಕತಿನಾಳ ಗ್ರಾಮದಲ್ಲಿ ಸದರಿ ಕುಟುಂಬಕೆ 5 ಲಕ್ಷ ಪರಹಾರ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರೇಟ್ ಟೂ ತಹಶೀಲ್ದಾರ್ ಮುರಳಿಧರ್ ಸರ್. ಹಾಗೂ ತಾವರಗೇರಾ ಪಟ್ಟಣದ ಆರ್.ಐ. ಶರಣಪ್ಪ ದಾಸರ್. ಪಟ್ಟಣದ ಪಿ.ಎಸ್.ಐ. ಸುಜಾತ ಸಾಹೇಬರು, ಹಾಗೂ ಇತರೆ ಸಂಬಂದಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ :- ಸಂಪಾದಕೀಯಾ.