ರಾಯಚೂರು ಜಿಲ್ಲೆಯ ಸಿರವಾರ ಠಾಣೆಗೆ ವರ್ಗಾವಣೆಗೊಂಡ ತಾವರಗೇರಾ ಠಾಣೆಯ ಪಿ.ಎಸ್.ಐ. ಗೀತಾಂಜಲಿ ಶಿಂಧೆಯವರು.

Spread the love

ರಾಯಚೂರು ಜಿಲ್ಲೆಯ ಸಿರವಾರ ಠಾಣೆಗೆ ವರ್ಗಾವಣೆಗೊಂಡ ತಾವರಗೇರಾ ಠಾಣೆಯ ಪಿ.ಎಸ್.ಐ. ಗೀತಾಂಜಲಿ ಶಿಂಧೆಯವರು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೊಲೀಸ್ ಅಧಿಕಾರಿಯಾದ ಪಿ.ಎಸ್.ಐ. ಗೀತಾಂಜಲಿ ಶಿಂಧೇಯವರು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಈ ಕುರಿತು ಬಳ್ಳಾರಿ ವಲಯದ ಪೊಲೀಸ್ ಮಹಾ ನೀರೀಕ್ಷಕರ ಇಲಾಖೆ ವತಿಯಿಂದ ವರ್ಗವಣೆಯಾದ ಬಗ್ಗೆ ಪೊಲೀಸ್ ಇಲಾಖೆಯ ಮೂಲಗಳು ತಿಳಿದು ಬಂದಿವೆ. 2020 ನೇ ಸಾಲೀನಲ್ಲಿ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಗೆ ಪಿ.ಎಸ್.ಐ.ಆಗಿ ಆಗಮಿಸಿದ ಗೀತಾಂಜಲಿ ಶಿಂಧೆಯವರು ಅಂದಿನಿಂದ ಹಿಂದಿನವರೆಗೂ ಠಾಣೆಗೆ ಬಲ ಬಂದಂತ್ತಾಗಿತ್ತು.  ಒಟ್ಟಿನಲ್ಲಿ ಯಾವುದೇ ಅಧಿಕಾರಿ ಆಗಲಿ ಕರ್ತವ್ಯಕ್ಕೆ ತಲೆ ಭಾಗಿ, ಸರಕಾರಿ ಕೆಲಸ, ದೇವರ ಕೆಲಸವೆಂದು ನಿಷ್ಠೇಯಿಂದ, ಯಾವುದೇ ಆಮೀಷಕ್ಕೆ ಒಳಗಾಗದೇ ಕಾರ್ಯ ನಿರ್ವಹಿಸಿದ ಕೀರ್ತಿ ಇವರದ್ದು. ಲಾಕ್ ಡೌನ್ ವೇಳೆಯಲ್ಲಿ  ಪೊಲೀಸ್ ಪಡೆ ಹಾಗೂ ಗೃಹ ರಕ್ಷಕ ಧಳದವರು ರಸ್ತೆಗೆ ಇಳಿದು. ಬೇಕಾಬಿಟ್ಟಿಯಾಗಿ ತಿರುಗಾಡುವವರನ್ನು  ಪೋಲೀಸರು ಕಾನೂನಿನ ಮನವರಿಕೆ ಪ್ರಜ್ಞೆ ಮಾಡುವ ಮೂಲಕ ಮನವಿಯತೆಗೆ ಹೆಸರಾದರು. ವಿಶೇಷವಾಗಿ ಮಹಿಳೆಯಾಗಿ ಆಗಮಿಸಿದ ಪಿ.ಎಸ್.ಐ. ಗೀತಾಂಜಲಿ ಶಿಂದೆಯವರು ತಾವರಗೇರಾ ಪಟ್ಟಣ ಹಾಗೂ ತಾವರಗೇರಾ ಹೋಬಳಿ ಮಟ್ಟದಲ್ಲಿ ತಮ್ಮದೆಯಾದ ವಿಶೇಷ ಚಾತುರತೆಯಿಂದ ಕಾರ್ಯ ನಿರ್ವಹಿಸಿ, ಇವರು ಕೇವಲ ಒಂದೇ ವರ್ಷದಲ್ಲೆ  (2020ನೇ) ಸಾಲಿನ ಮುಖ್ಯಮಂತ್ರಿ ಪದಕ ಸ್ವೀಕರಿಸಿದ ಕೀರ್ತಿ ಇವರದ್ದು, ತಾವರಗೇರಾ ಪಟ್ಟಣದಲ್ಲಿ ವಿಶೇಷವಾಗಿ ಕಾನೂನು ಸುವ್ಯವಸ್ಥೆ ಕಾಪುಡುವ ಮೂಲಕ ಹಾಗೂ ಮಹಿಳೆಯರಿಗೆ ಅನ್ಯಾಯವಾಗಂದತೆ, ಮಹಿಳೆಯರ ಸಭೆ ಸಮಾರಂಭಗಳಿಗೆ ಆಗಮಿಸಿ ಮಹಿಳೆಯರ ಕುಂದು ಕೊರತೆಗಳನ್ನ ಆಲಿಸುತ್ತಿದ್ದರು. ಅತ್ಯಂತ ಕಡಿಮೆ ಶೇಕಡಾವಾರು ಪ್ರಕರಣಗಳ ತನಿಖೆಯಲ್ಲಿ ಬಾಕಿ ಇರಿಸಿಕೊಂಡು ಉತ್ತಮ ಕರ್ತವ್ಯ ನಿರ್ವಹಣೆ ಪರಿಗಣಿಸಿ. 2020ನೇ ಸಾಲಿನಲ್ಲಿ ಅತ್ಯತ್ತಮ ‍ಕಾರ್ಯ ನಿರ್ವಹಿಸಿದ ಮೇಲಾಧಿಕಾರಿಗಳ ಹಾಗೂ ಠಾಣಾ ಸಿಬಂದಿ ಜೊತೆಗೆ ಕೀರ್ತಿಗೆ ಪಾತ್ರರಾದ ಗೀತಾಜಂಲಿ ಶಿಂಧೆಯವರಿಗೆ ಮಾನ್ಯ ಮುಂಖ್ಯಮಂತ್ರಿ ಪ್ರಶಸ್ತಿಯನ್ನ ತನ್ನ ಮಡಲಿಗೆ ದಕ್ಕಿಸಿಕೊಂಡು ನಮ್ಮ ಕೊಪ್ಪಳ ಜಿಲ್ಲೆಗೆ ಹೆಸರಾಗಿ, ಅದು ಮಹಿಳಾ ಅಧಿಕಾರಿಯಾಗಿ, ಅತಿ ಕಿರಿಯ ವಯಸ್ಸಿನಲ್ಲೇ ಮಾನ್ಯ ಮುಂಖ್ಯಮಂತ್ರಿಯವರಿಂದ ಚಿನ್ನದ ಪ್ರಶಸ್ತಿ ಪಡೆದು ಇಡಿ ಕರುನಾಡಿಗೆ ತೋರಿಸಿಕೊಟ್ಟ ಜಿಲ್ಲೆಯ ಪ್ರಥಮ ಮಹಿಳಾ ಅಧಿಕಾರಿಯ ಕೀರ್ತಿಗೆ ಪಿ.ಎಸ್.ಐ ಗೀತಾಜಂಲಿ ಶಿಂಧೆಯವರು ಪಾತ್ರರಾದರು. ತಾವು ಪಟ್ಟಿರುವ ಶ್ರಮವೇ ಈ ಸಾಧನಗೆ ಮೂಲ ಎನ್ನುತ್ತ,  ತಮ್ಮ ಈ ಕಾರ್ಯಕ್ಕೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಅಭಿನಂದನೆಗಳು ಸಲ್ಲಿಸುತ್ತ ಮುಂದಿನ ತಮ್ಮ ಪ್ರತಿ ಹೆಜ್ಜೆ ಹೆಜ್ಜೆಯು ಯಶಸ್ವಿನ ಹಾಧಿ ಸಾಗಲೆಂದು  ಆಶಿಸುತ್ತೇವೆ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

 

Leave a Reply

Your email address will not be published. Required fields are marked *