ಕೊಪ್ಪಳ : ಮೇ 28ರಂದು ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಕಟ್ಟಡ ಕಾರ್ಮಿಕರ ಪ್ರಥಮ ಸಮ್ಮೇಳನ ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಗರದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ: ಕೆ. ಎಸ್. ಜನಾರ್ದನ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ನಿರ್ಣಯಿಸಲಾಗಿದೆ. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಕೊಪ್ಪಳ ತಾಲೂಕಾ ಸಮ್ಮೇಳನ 14.05.2024 ರಂದು ಮಂಗಳವಾರ ನಿಗದಿಪಡಿಸಲಾಯಿತು. ಗಂಗಾವತಿ. ಕಾರಟಗಿ. ಕನಕಗಿರಿ ತಾಲೂಕುಗಳ ಸಮ್ಮೇಳನ 19.5.2024 ರಂದು ರವಿವಾರ ನಡೆಸಲು ತೀರ್ಮಾನಿಸಲಾಯಿತು. ಕುಕನೂರು ತಾಲೂಕಾ ಹಾಗೂ ಯಲಬುರ್ಗಾ ತಾಲೂಕಾ ಸಮ್ಮೇಳನ ಶೀಘ್ರ ಜರುಗಿಸಲು ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಸಮ್ಮೇಳನ ಸಂಚಾಲನ ಸಮಿತಿ ರಚಿಸಲಾಯಿತು. ಸಂಚಾಲಕರಾಗಿ ಎಸ್.ಎ.ಗಫಾರ್. ಎ.ಎಲ್. ತಿಮ್ಮಣ್ಣ.ನೂರ್ ಸಾಬ್ ಹೊಸಮನಿ.ತುಕಾರಾಮ್. ಬಿ. ಪಾತ್ರೋಟಿ. ರಾಜಾಸಾಬ್ ತಹಶೀಲ್ದಾರ್.ರಾಜಪ್ಪ ಚೌಹಾಣ್. ಜಾಫರ್ ಕುರಿ. ಮೌಲಾ ಹುಸೇನ್ ಹಣಗಿ ಮುಂತಾದವರನ್ನು ಆಯ್ಕೆಯಾದರು. ಸಭೆಯ ಅಧ್ಯಕ್ಷತೆಯನ್ನು ಭಾರತ್ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹುಲುಗಪ್ಪ ಅಕ್ಕಿ ರೊಟ್ಟಿ ವಹಿಸಿದ್ದರು. ಕವಲೂರ ಗ್ರಾಮ ಘಟಕದ ಮುಖಂಡ ಶಂಶುದ್ದೀನ್ ಮಕಾಂದಾರ್. ಮಂಜುನಾಥ್ ಗುಗ್ರಿ ಮುಂತಾದವರು ಭಾಗವಹಿಸಿದ್ದರು.
ವಿಶೇಷ ವರದಿಗಾರರು :- ಎಸ್.ಎ.ಗಫೂರ್.