ಯಲಬುರ್ಗಾದಲ್ಲಿ ರೆಡ್ ಕ್ರಾಸ್ ದಿನ ಆಚರಣೆ …..

Spread the love

ಯಲಬುರ್ಗಾ : ಜೀನ್ ಹೆನ್ರಿ ಡುನಾಂಟ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ರೆಡ್ಕ್ರಾಸ್ ತಾಲೂಕ ಘಟಕದ ನಿರ್ದೇಶಕ ಶಿವಶರಣಪ್ಪ ಬಳಿಗಾರ ಮಾತನಾಡಿದರು.

ಯಲಬುರ್ಗಾ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೆಡ್ ಕ್ರಾಸ್ ದಿನ ಆಚರಣೆ ಆಚರಿಸಲಾಯಿತು.

ಇಟಲಿಯಲ್ಲಿ ೧೮೫೯ ರಲ್ಲಿ ನಡೆದ ಯುದ್ಧದ ಘೋರತೆ ಹೆನ್ರಿ ಡುನಾಂಟ್ ಅವರಿಗೆ ರೆಡ್ಕ್ರಾಸ್ ಸ್ಥಾಪಿಸಲು ಕಾರಣವಾಯಿತು.

೧೯೬೪ ರ ಜಿನೇವಾ ಒಪ್ಪಂದದ ನಂತರ ಅಸ್ತಿತ್ವಕ್ಕೆ ಬಂದು ಇಂದು ಜಗತ್ತಿನ ೧೯೦ ದೇಶಗಳಲ್ಲಿ ತನ್ನ ಸೇವಾ ಕಾರ್ಯ ವಿಸ್ತರಿಸಿಗೊಂಡಿದೆ.

ಅವರ ಜನ್ಮ ದಿನ ಮೇ೮ ರಂದು ಪ್ರತಿವರ್ಷ ರೆಡ್ಕ್ರಾಸ್ ದಿನ ಆಚರಿಸಲಾಗುವದೆಂದರು.

ಭಾರತದಲ್ಲಿ ೧೨೦೦ ಕ್ಕಿಂತಲೂ ಹೆಚ್ಚು ಘಟಕಗಳಿವೆ.

೧೯೦೧ ರಲ್ಲಿ ಹೆನ್ರಿ ಡುನಾಂಟ ಅವರ ಸೇವೆಗೆ ನೋಬೆಲ್ ಪಾರಿತೋಷಕ ಲಭ್ಯವಾಗಿದೆ.

೨೦೨೦ ರಲ್ಲಿ ಯಲಬುರ್ಗಾ ತಾಲೂಕ ಘಟಕ ಆರಂಭವಾಗಿ ೪ ವರ್ಷಗಳಲ್ಲಿ ನೂರಾರು ರಕ್ತದಾನ ಶಿಬಿರ,ಅನೇಕ ಆರೋಗ್ಯಶಿಬಿರ ಆಯೋಜಿಸಲಾಗಿದೆ.

ಕೊಪ್ಪಳಜಿಲ್ಲಾ ಬ್ಲಡ್ ಬ್ಯಾಂಕ್ ೫-೬ ವರ್ಷಗಳಿಂದ ರಾಜ್ಯದಲ್ಲಿಯೇ ರಕ್ತ ಸಂಗ್ರಹಣೆಯಲ್ಲಿ ಮೊದಲಸ್ಥಾನದಲ್ಲಿದೆ.

Donate your blood we build healthy nation.ನೀವು ರಕ್ತದಾನಮಾಡಿದರೆ ಆರೋಗ್ಯವಂತ ದೇಶ ನಿರ್ಮಿಸಬಹುದು.

ಯುವಜನತೆ ರಕ್ತದಾನದ ಮೂಲಕ ಪ್ರಾಣ ಕಾಪಾಡುವ ಶ್ರೇಷ್ಠ ಕಾರ್ಯಮಾಡಿದಂತೆ ಎಂದು ಹಲವಾರು ಬಾರಿ ರಕ್ತದಾನ ಮಾಡಿದ ಶೇಖ್ ಇನಾಯತ್,ಬ್ಲಡ್ ಇಬ್ರಾಹಿಂ,ಡಾ.ಸೊಲೋಮನ್,ಬಾಖಲಂದರ್ ಅವರ ಸೇವೆ ಸ್ಮರಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ರೆಡ್ಕ್ರಾಸ್ ವೈಸ್ ಚೇರಮನ್ ಡಾ.ಶಿವಕುಮಾರ ದಿವಟರ

ರಕ್ತದ ಗುಂಪುಗಳು,ಕೃತಕವಾಗಿ ರಕ್ತ ನಿರ್ಮಾಣವಾಗದ ಕಾರಣ ದಾನಿಗಳಿಂದಲೇ ಪಡೆಯುವ ಬಗ್ಗೆ,ಪ್ರಯೋಜನ ಕುರಿತು ವಿವರಿಸಿದರು. ಪ್ರಾಚಾರ್ಯರಾದ ಚತ್ರದ ಅವರು ಅಧ್ಯಕ್ಷ ತೆ ವಹಿಸಿದ್ದರು. ಮುಂದಿನದಿನಗಳಲ್ಲಿ ರಕ್ತದಾನ ಶಿಬಿರ ಆಯೋಜಿಸುವದಾಗಿ ತಿಳಿಸಿದರು. ಕಾಲೇಜು ರೆಡ್ಕ್ರಾಸ್ ಘಟಕದ ಸಂಯೋಜಕಿ  ನಂದಾ ಮೇಡಂ ಪ್ರಾಸ್ತವಿಕವಾಗಿ ಮಾತನಾಡಿದರು.ಉಪನ್ಯಾಸಕ ಬಳಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ :- ಹುಸೇಬಾಷ್ ಮೊತೇಖಾನ್

Leave a Reply

Your email address will not be published. Required fields are marked *