ಕೊಪ್ಪಳ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಗಿರುವುದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ನಿರಂತರ ಹೋರಾಟದ ಫಲ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ: ಕೆ.ಎಸ್. ಜನಾರ್ದನ ಹೇಳಿದರು.
ನಗರದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಕೊಪ್ಪಳ ತಾಲ್ಲೂಕಾ ಪ್ರಥಮ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಡಾ: ಕೆ. ಎಸ್. ಜನಾರ್ದನ ಮುಂದುವರೆದು ಅನೇಕ ವರ್ಷಗಳಿಂದ ಹೋರಾಟ ಮಾಡಿ ಸರ್ಕಾರದ ಮಟ್ಟದಲ್ಲಿ ಸಭೆಗಳನ್ನು ನಡೆಸಿ 2007ರಲ್ಲಿ ಕಟ್ಟಡ ಕಾರ್ಮಿಕರ ಮಂಡಳಿ ರಚನೆ ಮಾಡಿಸಿದ ಕೀರ್ತಿ ನಮ್ಮ ಸಂಘಟನೆಗಿದೆ. ಇನ್ನೂ ಮುಂದೆಯೂ ಕಟ್ಟಡ ಕಾರ್ಮಿಕರ ಸೌಲಭ್ಯಗಳಿಗೆ ಹೋರಾಟದ ಅಗತ್ಯವಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ ಸ್ವಾಗತಿಸಿದರು. ನೂರ್ ಸಾಬ್ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಕೊನೆಯಲ್ಲಿ ಸೆಬಾಸ್ಟಿನ್ ಎ.ಆರ್. ವಂದಿಸಿದರು.
ಸಮ್ಮೇಳನದಲ್ಲಿ ತಾಲ್ಲೂಕಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಲ್ಲೂಕಾ ಅಧ್ಯಕ್ಷರಾಗಿ ನೂರ್ ಸಾಬ್ ಹೊಸಮನಿ. ಉಪಾಧ್ಯಕ್ಷರುಗಳಾಗಿ ರಾಜಪ್ಪ ಚೌವ್ಹಾಣ್ ಗಿಣಿಗೇರಾ. ಪಾನಿ ಶಾ ಮಕಾಂದಾರ್ ಕವಲೂರ. ಮೌಲಾ ಹುಸೇನ್ ಹಣಗಿ. ಕಾರ್ಯದರ್ಶಿಯಾಗಿ ರಾಜಾ ಸಾಬ್ ತಹಶೀಲ್ದಾರ್. ಸಹ ಕಾರ್ಯದರ್ಶಿಯಾಗಿ ತುಕಾರಾಮ ಬಿ. ಪಾತ್ರೋಟಿ. ಮಂಜುನಾಥ್ ವಡ್ಡರ್. ಖಜಾಂಚಿಯಾಗಿ ರೇಣವ್ವ ಮಲ್ಲಪ್ಪ ಅಡ್ಡದೋಲಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನುಮಂತ ಬಿ.ವಡ್ಡರ್. ಜಾಫರ್ ಕುರಿ. ಸುರೇಶ್ ಈಳಿಗೇರ ಜಬ್ಬಲ್ ಗುಡ್ಡ. ಸೆಬಾಸ್ಟಿನ್ ಎ.ಆರ್.ವಿರುಪಾಕ್ಷಪ್ಪ ಹಾಲಳ್ಳಿ. ಬೆಟ್ಟದಯ್ಯ ಬಿ.ಹಾದಿಮನಿ ಅಲ್ಲಾನಗರ ಮುಂತಾದವರು ಆಯ್ಕೆಯಾಗಿದ್ದಾರೆ ಎಂದು ಆಯ್ಕೆ ಪ್ರಕ್ರಿಯೆ ನಡೆಸಿದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಪ್ರಕಟಿಸಿದರು. ವಿಶೇಷ ವರದಿಗಾರರು :- ಎಸ್.ಎ.ಗಪೂರ್.