ನನ್ನೊಳಗೊಬ್ಬ ಬುದ್ದ ಎದ್ದು ಬರಲಿ,
ನಾನು ನನ್ನದೆಂಬ ಅಹಂ ತೊರೆದು
ಸಕಲ ವಿಕಲ ಜೀವಕೋಟಿ ಸುಖ ಬಯಸಲಿ .
ಬುದ್ಧ ಹಚ್ಚಿದ ದೀಪ
ಸದಾ ಉರಿಯುತ್ತಿರಬೇಕು,
ನನ್ನೊಳಗಿನ ಶಾಂತ ತೈಲ
ದಿನ ಎರೆಯುತ್ತಿರುತ್ತೇನೆ,
ನನ್ನೊಳಗಿನ ನನ್ನನ್ನು
ಸದಾ ಎಚ್ಚರಗೊಳಿಸಲು,
ಆಸೆಯ ಪಾಶ ಹರದೊಗೆದು,
ಸಕಲ ಜೀವಕೂ ಪ್ರೀತಿ
ಹಂಚುತಾ ಸಾಗುತಿರಲಿ
ಜಾತಿ ಧರ್ಮದ ಮೂಲವೇ
ಪರಹಿತ ಬಯಸುತಿರಲಿ,
ನೆತ್ತಿಯ ಮೇಲೆ ಬುದ್ಧನ
ಬುತ್ತಿ ಅರಳುತಿರಬೇಕು,
ಮನುಕುಲ ಇರುವವರೆಗು
ಬುತ್ತಿ ಅಕ್ಷಯವಾಗುತ್ತಿರಲಿ.
ಅಂಕಲಿ ಬಸಮ್ಮ ವಡ್ಡು / ಬಳ್ಳಾರಿ