ಬೆಂಗಳೂರ: ಕೀರ್ತನಾ ಮೂವ್ಹಿ ಮೇಕರ್ಸ ಬೆಂಗಳೂರ ಅವರ ಲೋಕೇಶ್ ವಿದ್ಯಾಧರ ನಿರ್ದೇಶನದ ‘ಒಬ್ಬಟ್ಟು’ ಕನ್ನಡ ಚಲನಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೇಟ್ ನೀಡಿದೆ.
ಹಾಸ್ಯಭರಿತ ಕಥಾಸಾರ ಹೊಂದಿದ ಈ ‘ಒಬ್ಬಟ್ಟು’ಚಿತ್ರೀಕರಣವನ್ನು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿ ಸಾಗ್ಯ ಸರಗೂರು ಗ್ರಾಮದಲ್ಲಿ ಮಾಡಲಾಗಿದೆ. ಯುಗಾದಿ ಹಬ್ಬದಲ್ಲಿ ನಡೆಯವ ಒಂದು ಪ್ರೇಮ ಕಥೆ. ಇಬ್ಬರು ಪ್ರೇಮಿಗಳ ಮಧ್ಯೆ ಬೀಳುವ ಒಂದು ಹೆಣದ ಸುತ್ತ ನಡೆಯುವ ಹಾಸ್ಯ ಭರಿತ ಚಿತ್ರ ಇದಾಗಿದ್ದು ಕೊಲೆ ಹೇಗಾಯಿತು ? ಯಾಕಾಯಿತು ? ಎನ್ನುವ ಕುತೂಹಲದ ನಡುವೆ ಕೊಲೆ ರಹಸ್ಯ ಭೇದಿಸುವ ಒಂದು ಹಾಸ್ಯಪೂರಿತ ಮನರಂಜನೆಯನ್ನೊಳಗೊಂಡ ಕಥೆ. ಒಬ್ಬಟ್ಟಿನ ರುಚಿಯನ್ನು ಥೇಟರಗಳಲ್ಲೇ ಪ್ರೇಕ್ಷಕರು ಬಂದು ನಗೆಹೂರಣದ ಸವಿಯನ್ನು ಸವಿಯಬೇಕು. ಈಗಾಗಲೇ ಮಾಸ್ ಮ್ಯೂಸಿಕ್ ಅಡ್ಡಾ ಯೂಟ್ಯೂಬ್‌ದಲ್ಲಿ ‘ಬಾರೋ ಮಗಾ ಬಾರೋ ಮಗಾ, ‘ನನ್ನಾಕೆ ಪ್ರೀತಿ ಸಿಹಿ ಒಬ್ಬಟ್ಟಂಗೆ’ಲಿರಿಕಲ್ ವಿಡೀಯೋ ಹಾಡುಗಳು ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದ್ದು ಇದೀಗ ಸೆನ್ಸಾರ್ ಆಗಿದ್ದು ಶೀಘ್ರದಲ್ಲೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವದಾಗಿ ನಿರ್ದೇಶಕ, ನಿರ್ಮಾಪಕ ಲೋಕೇಶ ವಿದ್ಯಾಧರ ಹೇಳುತ್ತಾರೆ.
ಚಿತ್ರದಲ್ಲಿ ನಾಯಕ ಅಮೀತ್‌ರಾವ್, ಕಿರುತೆರೆ, ಚಲನಚಿತ್ರ ಕಲಾವಿದೆ ಸುನಂದ ಕಲ್ಬುರ್ಗಿ, ಲೋಕೇಶ್ ವಿದ್ಯಾಧರ, ಮಂಡ್ಯ ನಾಗರಾಜ್, ಮುತ್ತುರಾಜ್.ಟಿ, ರಾಜು ಅರಸಿಕೆರೆ, ರೋಹಿಣಿ, ಧನಲಕ್ಷ್ಮೀ, ಮಂಜುಳಾ ಕೆಂಪೇಗೌಡ್ರು, ಸತೀಶ್ ಶೆಟ್ಟಿ, ರವಿ ,ನಂಜಪ್ಪ ಡಿ.ಎಸ್ ,ಶಂಕರ ಸುಗತೆ ಮುಂತಾದವರು ಅಭಿನಯಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಬೆಟ್ಟೇಗೌಡ ಕೀಲಾರ , ಸ್ವರ ಸಂಯೋಜನೆ ಮತ್ತು ಹಾಡುಗಾರಿಕೆ ಎ.ಪಿ.ರವಿಕೀರ್ತಿ, ನೃತ್ಯ ಅಲ್ಲಿನ್.ಎ, ಸಾಹಸ ಸೂರ್ಯ, ಸಂಕಲನ ಸಂಜೀವರೆಡ್ಡಿ, ಪ್ರಸಾಧನ ಯತೀಶ, ಸಹಕಾರ ಆನಂದ ಆರ್ಟ್ಸ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಲೋಕೇಶ್ ವಿದ್ಯಾಧರ, ನಿರ್ಮಾಪಕರು ಸುನಂದಾ ಕಲ್ಬುರ್ಗಿ ಮತ್ತು ಲೋಕೇಶ್ ವಿದ್ಯಾಧರ ಆಗಿದ್ದಾರೆ. ವರದಿ: ಡಾ.ಪ್ರಭು ಗಂಜಿಹಾಳ.