ನಿಮಗಾಗಿ ನಾವು ಸಂಸ್ಥೆಯ ನಮ್ಮ ಪರಿಸರ ( ಮಳೆಗಾಲ ಪೂರ್ತಿ ಸಸಿ ನೆಡುವ ಮತ್ತು ವಿತರಿಸುವ ಕೆಲಸ/ಕಾರ್ಯಕ್ರಮ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಕಳಕಳಿ ಹೊಂದಿರುವ ‘ನಿಮಗಾಗಿ ನಾವು ಸಂಸ್ಥೆ (ನೋಂ), ಬಳ್ಳಾರಿ’ ಈಗಾಗಲೇ ಹಲವಾರು ಜನಪರ ಕಾಳಜಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈಗ ಸತತ ಒಂಭತ್ತನೆ ವರುಷದ “ನಮ್ಮ ಪರಿಸರ” ಯೋಜನೆ ಮೂಲಕ ಬಳ್ಳಾರಿ ನಗರದಲ್ಲಿ ಸಸಿ ನೆಡುವ ಕೆಲಸವನ್ನು ದಿನಾಂಕ 05/06/2024 ರ ಬುಧವಾರ ಬೆಳಿಗ್ಗೆ 07:00 ರಿಂದ ಬೆಳಿಗ್ಗೆ 10:00 ರವರೆಗೆ 08 ಕ್ಕೂ ಹೆಚ್ಚು ಸಂಸ್ಥೆಯ ಸದಸ್ಯರು ಪಾಲ್ಗೋಂಡು 15ಕ್ಕೂ ಹೆಚ್ಚು ಸಸಿಗಳನ್ನು ಬಳ್ಳಾರಿ ನಗರದ ರಾಘವೇಂದ್ರ ಕಾಲೋನಿ ರಸ್ತೆ ಬದಿ ಮತ್ತು ಪಾರ್ಕ್ನಲ್ಲಿ ನೆಟ್ಟರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನಯ್ ರವರು ಮಾತಾಡಿ ನಮ್ಮ ಪರಿಸರ ಇದು ಸಂಸ್ಥೆಯ ಸತತ 09 ವರ್ಷದ ಯೋಜನೆಯಾಗಿದ್ದು ಈ ಮಳೆಗಾಲ ಮುಗಿಯುವವರೆಗೆ ಸಸಿಗಳನ್ನು ನೀಡಲಿದ್ದೇವೆ ಮತ್ತು ಪ್ರತಿ ಭಾನುವಾರ ಸಸಿಗಳನ್ನು ನೆಡಲಿದ್ದೇವೆ ಆಸಕ್ತಿ ಉಳ್ಳವರು ಸಂಪರ್ಕಿಸಬಹುದೆಂದು ಎಂದು ತಿಳಿಸಿದರು. ಕಾರ್ಯದರ್ಶಿಗಳಾದ ಶ್ರೀ ಮಾರುತಿ ರವರು ಮಾತಾಡಿ ಬಿಸಿಲಿಗೆ ಹೆಸರಾದ ಬಳ್ಳಾರಿಯನ್ನು ನಮ್ಮ ಕೈಲಾದ ಮಟ್ಟಿಗೆ ಹಸಿರಾಗಿಸೋಣ ಎಲ್ಲರೂ ತಪ್ಪದೇ ಸಸಿ ನೆಡೋಣವೆಂದು ತಿಳಿಸಿದರು ಈ ಸಂಧರ್ಭದಲ್ಲಿ ಜೊತೆಯಾಗಿದ್ದ ನಿವೃತ್ತ ಬಿಎಸ್ಎಫ್ ಯೋಧ ಶ್ರೀ ಶೇಕ್ ಸಾಬ್ ರವರು ಮಾತಾಡಿ ನಿಮಗಾಗಿ ನಾವು ಸಂಸ್ಥೆಯ ಈ ನಮ್ಮ ಪರಿಸರ ಕಾರ್ಯಕ್ರವನ್ನ ಹಮ್ಮಿಕೊಂಡಿರುವುದು ನಮಗೆ ತುಂಬಾ ಖುಷಿಯ ಮತ್ತು ಹೆಮ್ಮೆಯ ವಿಚಾರ ಈ ಕೆಲಸವೂ ಎಲ್ಲರಿಗೂ ಮಾದರಿ ಎಂದು ತಿಳಿಸಿದರು. ಶ್ರೀ ಸಾಗರ್ ಸಮಾಜ ಸೇವಕರು ಬಳ್ಳಾರಿ ರವರು ಮಾತಾಡಿ ಬಿಡುವಿನ ವೇಳೆಯಲ್ಲಿ ಸುಖಸುಮ್ಮನೆ ಕಾಲ ಕಳೆಯುವ ಯುವ ಜನಾಂಗದ ನಡುವೆ ಸಸಿ ನೆಡುವ ಕೆಲಸ ಮಾಡುತ್ತಿರುವ ನಿಮಗಾಗಿ ನಾವು ಸಂಸ್ಥೆಯ ಈ ಯುವ ಪಡೆಗೆ ಧನ್ಯವಾದಗಳನ್ನು ತಿಳಿಸಿದರು ಇವರ ಈ ಕೆಲಸದಲ್ಲಿ ಎಲ್ಲರೂ ಜೊತೆಯಾಗೋಣವೆಂದು ತಿಳಿಸಿದರು. ನಮ್ಮ ಪರಿಸರ ಕಾರ್ಯಕ್ರಮದಲ್ಲಿ ಮಹಬೂಬ್ ಭಾಷ, ಕೇದಾರ್ ನಾಥ್,ಮಾರುತಿ, ಶ್ರೀನಿವಾಸ, ಶೇಕ್ ಸಾಬ್,ಸುಭಾನ್, ಬಾಲಸುಬ್ರಮಣ್ಯ, ಅನಿಲ್, ಸಂದೀಪ್,ಆಯಾನ್ ಪಾಲ್ಗೋಂಡಿದ್ದರು.
ವರದಿ :- ಮಹೇಶ ಶರ್ಮಾ ಅಥಣಿ.