ಕೊಪ್ಪಳ ನಗರದ ಇಂದಿರಾ ಕ್ಯಾಂಟೀನ್ ಹಿಂದೆಯೇ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮುಂದುವರೆಸಲು ಪಾಲಕರ ಹೋರಾಟ ಸಮಿತಿ ನಿರ್ಧರಿಸಿದೆ.ಇದಕ್ಕೂ ಮೊದಲು ಶಾಸಕ ರಾಘವೇಂದ್ರ ಬಿ.ಹಿಟ್ನಾಳ ಅವರಿಗೆ ಭೇಟಿಯಾಗಿ ಶಾಲೆ ಸ್ಥಳಾಂತರ ಮಾಡುವುದು ಸರಿಯಲ್ಲ ಈ ಭಾಗದ ನಗರ ಸೇರಿದಂತೆ ಹಳ್ಳಿಗಳ ಜನರಿಗೆ ಅನುಕೂಲವಾಗುವಂತೆ ಸಮೀಪ ಇರುವ ಕಟ್ಟಡ ಒದಗಿಸುವಂತೆ ಮನವರಿಕೆ ಮಾಡಲಾಯಿತು. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಕಾಮಗಾರಿ ನಡೆದ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ ಹದಿನೈದು ದಿನಗಳಲ್ಲಿ ಅವಕಾಶ ಕಲ್ಪಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗೆ ಶಾಸಕ ರಾಘವೇಂದ್ರ ಬಿ. ಹಿಟ್ನಾಳ ಫೋನ್ ಕರೆ ಮಾಡಿ ಆದೇಶಿಸಿದರು. ನಗರದ ದಿಡ್ಡಿಕೇರಿ ಬಡಾವಣೆಯ ಕಟ್ಟಡಕ್ಕೆ ಸ್ಥಳಾಂತರ ಮಾಡುವುದನ್ನು ವಿರೋಧಿಸಿ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಪಾಲಕರ ಹೋರಾಟ ಸಮಿತಿಯ ಅಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಕಿ. ಪ್ರಧಾನ ಕಾರ್ಯದರ್ಶಿ ಎಸ್.ಎ. ಗಫಾರ್. ಉಪಾಧ್ಯಕ್ಷ ಅಯ್ಯೂಬ್ ಅಡ್ಡೆವಾಲೆ. ಮುಖಂಡರಾದ ಹುಸೇನ್ ಪಾಶಾ ಮಾನ್ವಿ. ಶಾಮೀದ್ ಕಿಲ್ಲೆದಾರ್ ಮುಂತಾದವರ ಮುಂದಾಳತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಿಂಭಾಗದ ಉರ್ದು ಪ್ರಾಥಮಿಕ ಶಾಲೆಯ ಕಟ್ಟಡ ವೀಕ್ಷಿಸಿ ಸಮಂಜಸ ಅನಿಸದೆ ಮರಳಿ ಸದ್ಯ ಇರುವ ಇಂದಿರಾ ಕ್ಯಾಂಟೀನ್ ಹಿಂದಿನ ಕಟ್ಟಡದಲ್ಲೇ ಮುಂದುವರಿಸುವಂತೆ ನಿರ್ಧರಿಸಿ ಶೀಘ್ರದಲ್ಲೇ ಪಾಲಕರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯ ಮೂಲಕ ತಿಳಿಸಿದರು.
ವಿಶೇಷ ವರದಿಗಾರರು :- ಎಸ್.ಎ.ಗಫೂರ್.