ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ಸಹೃತವಾಗಿ ಹಿಂದೂ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಆಚರಿಸಿದರು. ಬಕ್ರೀದ್ ಹಬ್ಬದ ತ್ಯಾಗದ ಸಂಕೇತ, ಮುಸ್ಲಿಂ ಧರ್ಮದ ಪ್ರಮುಖ ಹಬ್ಬವಾದ ಈ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸುತ್ತಾರೆ. ಈ ಮುಸ್ಲಿಂ ಬಾಂಧವರ ಈ ಹಬ್ಬದಲ್ಲಿ ಹಿಂದೂ ಧರ್ಮದವರು ಸೇರಿ ಹಬ್ಬದಲ್ಲಿ ಭಾಗಿಯಾಗಿ ಮೆರಗು ತಂದರು. ಧರ್ಮ ಧರ್ಮವೆಂದು ಬಡಿದಾಡುವ ಆಧುನಿಕ ಪರಿಸ್ಥಿತಿಯಲ್ಲಿ ಮೂದೇನೂರು ಗ್ರಾಮದಲ್ಲಿ ಹಿಂದೂ ಮುಸ್ಲಿಂ ಗೆಳೆಯರು ಒಂದಾಗಿ ಹಬ್ಬ ಆಚರಿಸಿದ್ದು ಸೌಹಾರ್ದತೆಗೆ ಇಳಿದ ಕೈಗನ್ನಡಿಯಾಗಿದೆ.
* ಬಕ್ರೀದ್ ಹಬ್ಬವು ನಿಮ್ಮ ಜೀವನದಲ್ಲಿ ಸಮೃದ್ಧಿ, ಸಂತೋಷ ಮತ್ತು ನೆಮ್ಮದಿಯನ್ನು ತರಲಿ. * ಕರುಣಾಮಯಿ ಅಲ್ಲಾಹ್ ಸದಾ ನಿಮಗೆ ಮಾರ್ಗದರ್ಶನ ನೀಡಲಿ. ನಿಮ್ಮ ಜೀವನದಲ್ಲಿ ಖುಷಿ, ಸಂತೋಷದ ಬೆಳಕು ತುಂಬಿರಲಿ.
ಅಲ್ಲಾಹ್ ನಿಮ್ಮ ಜೀವನ ಉತ್ತಮ ಆರೋಗ್ಯ ಮತ್ತು ಸಂತೋಷದ ಕ್ಷಣಗಳಿಂದ ತುಂಬುವಂತೆ ಹರಸಲಿ. * ಅಲ್ಲಾಹ್‌ನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.
* ಬಕ್ರೀದ್ ಹಬ್ಬದ ಈ ಪವಿತ್ರ ಕ್ಷಣ ನಿಮಗೆ ಸಮೃದ್ಧಿ, ಯಶಸ್ಸು ಮತ್ತು ಸಂತೋಷದ ಬಾಗಿಲುಗಳನ್ನು ತೆರೆಯಲಿ. * ಜೀವನದ ಪ್ರತಿ ಸವಾಲುಗಳನ್ನು ಗೆಲ್ಲಲು ನಿಮಗೆ ಸಹಾಯ ಮಾಡುವ ಧೈರ್ಯ, ಶಕ್ತಿಯನ್ನು ಬಕ್ರೀದ್ ಹಬ್ಬ ಕರುಣಿಸಲಿ.
* ಈದುಲ್ ಅಝ್‌ಹಾ ಮುಬಾರಕ್. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ದೇವರು ಸದಾ ನಿಮ್ಮ ಪ್ರಾಮಾಣಿಕ ಪ್ರಾರ್ಥನೆಯನ್ನು ಆಲಿಸಲಿ,
* ನಿಮ್ಮ ಜೀವನದಲ್ಲಿ ಯಾವತ್ತೂ ಕಷ್ಟವೆಂಬ ಕತ್ತಲೆ ಕವಿಯದೇ ಇರಲಿ. ಬರೀ ಸಂತೋಷ ಮಾತ್ರ ನಿಮ್ಮ ಸುತ್ತ ತುಂಬಿರಲಿ. ಸದಾ ಕಾಲ ಅಲ್ಲಾಹ್‌ನ ದಯಾ ದೃಷ್ಟಿ ನಿಮ್ಮ ಮೇಲಿರಲಿ. * ಅಲ್ಲಾಹ್ ಮತ್ತು ಅವರ ಪ್ರವಾದಿಗಳ ಬೋಧನೆಗಳು ನಿಮ್ಮ ಜೀವನದುದ್ದಕ್ಕೂ ನಿಮ್ಮ ಜೊತೆಗಿರಲಿ. ದೇವರ ಆಶೀರ್ವಾದದಿಂದ ನಿಮ್ಮ ಬದುಕು ಸುಖಮಯವಾಗಿರಲಿ. * ನಿಮ್ಮ ಬದುಕಿನಲ್ಲಿ ಯಾವುದೇ ಕಷ್ಟಗಳು ಎದುರಾಗದೇ ಇರಲಿ. ತ್ಯಾಗ ಮತ್ತು ಬಲಿದಾನದ ಮಹತ್ವವನ್ನು ಸಾರುವ ಬಕ್ರೀದ್ ಹಬ್ಬ ಎಲ್ಲರ ಬಾಳಿನಲ್ಲಿ ನೆಮ್ಮದಿ ಮತ್ತು ಸಂತೋಷವನ್ನು ತರಲಿ.
* ಬಕ್ರೀದ್ ಹಬ್ಬ ಎಂದರೆ ನಮ್ಮಲ್ಲಿರುವುದನ್ನು ಹಂಚುವುದು ಮತ್ತು ಬಡವರ, ಅಸಹಾಯಕರ ಕಾಳಜಿ ವಹಿಸುವುದು. ಈ ವರ್ಷ ನಿಮ್ಮ ಬದುಕು ಸುಖಮಯವಾಗಿ ಕೂಡಿರಲಿ. ನಿಮಗೆ ಈದುಲ್ ಅಝ್‌ಹಾ ಶುಭಾಶಯಗಳು,
ವಿಶೇಷ ವರದಿ :- ಚಂದ್ರುಶೇಖರ ಕುಂಬಾರ ಮುದೇನೂರು.