ಧರ್ಮಸೌಹಾರ್ದತೆಯಿಂದ ದೇಶದ ಘನತೆ ಹೆಚ್ಚಿಸಲು ಸಾಧ್ಯ: ಆಮಿರ್ ಅಶ್ಅರೀ ಬನ್ನೂರು.

Spread the love

 

ಪವಿತ್ರ ಬಕ್ರೀದ್ ಹಬ್ಬದ ಪ್ರಯುಕ್ತ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ನಡೆದ ಸಾರ್ವಜನಿಕ ಈದ್ ಆಚರಣೆ ಹಾಗೂ ಪ್ರಾರ್ಥನಾ ಸಮಾರಂಭದಲ್ಲಿ ಭಾಗವಹಿಸಿದ ಖಿದ್ಮಾ ಸಂಚಾಲಕ ಆಮಿರ್ ಅಶ್ಅರೀ ಬನ್ನೂರು ಈದ್ ಸಂದೇಶ ಭಾಷಣ ಮಾಡಿದರು. ಸಮಾಜದಲ್ಲಿರುವ ಪ್ರತಿಯೊಂದು ಧರ್ಮಗಳು ಮಾನವರ ನಡುವಿನ ಬಾಂಧವ್ಯವನ್ನು ಬೆಸೆಯಲು ಮತ್ತು ಬೆಸೆಯುವ ಕಾರ್ಯವನ್ನೇ ಬೋಧಿಸಿರುತ್ತದೆ. ಪರಸ್ಪರ ಪ್ರೀತಿಸುವುದು ಧರ್ಮ ಹಾಗೂ ದ್ವೇಷಿಸುವುದು ಅಧರ್ಮವಾಗಿದೆ. ಮಾನವನಾದವನಿಗೆ ಮಾನವೀಯತೆ ಇದ್ದರೆ ಮಾತ್ರ ಮನುಷ್ಯತ್ವದ ಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯ. ಇಸ್ಲಾಂ ಧರ್ಮ ಸೇರಿದ ಸರ್ವಧರ್ಮಗಳು ಸೌಹಾರ್ದತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಭಾರತ ಎಂಬ ಸುಂದರ ಜಾತ್ಯತೀತ ರಾಷ್ಟ್ರವನ್ನು ಮುಂದಿನ ದಿನಮಾನಗಳಲ್ಲಿ ಇದರ ಸೌಂದರ್ಯಕ್ಕೆ ಧಕ್ಕೆ ಆಗದಂತೆ ಕಾಪಾಡಿಕೊಳ್ಳಬೇಕಾದರೆ ಧರ್ಮಸೌಹಾರ್ದತೆಯು ಈ ನಾಡಿನ ಅನಿವಾರ್ಯತೆಯಾಗಿದೆ. ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವಂತಹ ಧರ್ಮ ವಿರೋಧಿ ವ್ಯಕ್ತಿ ಮತ್ತು ಶಕ್ತಿಗಳಿಂದ ಸಮಸ್ತ ಧರ್ಮಿಯರು ಅಂತರವನ್ನು ಕಾಯ್ದುಕೊಂಡು ಈ ನಾಡಿನ ಸ್ವಾಸ್ಥ್ಯ ಮತ್ತು ಸೌಹಾರ್ದತೆಯನ್ನು ಸಂರಕ್ಷಿಸಿ ಕೊಳ್ಳಬೇಕಾದ ಅನಿವಾರ್ಯತೆ ಈ ನಾಡಿನಲ್ಲಿ ನಿರ್ಮಾಣವಾಗಿದೆ. ಎಲ್ಲಾ ಧರ್ಮಗಳ ಎಲ್ಲಾ ಹಬ್ಬಗಳ ಮೂಲಕ ನಾಡಿನಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಚಿಂತನೆಗಳನ್ನು ರೂಪಿಸುವ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭ ನಾಡಿನ ಹಿರಿಯರು ಮತ್ತು ಸಮಸ್ತ ಧರ್ಮಾಭಿಮಾನಿಗಳು ಒಟ್ಟು ಸೇರಿ ಬಕ್ರೀದ್ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.

Leave a Reply

Your email address will not be published. Required fields are marked *