ಕೊಪ್ಪಳ : ವಕ್ಫ್ ಸಂಸ್ಥೆಯಡಿ ಹಝರತ್ ಮರ್ದಾನೆ ಗೈಬ್ ದರ್ಗಾ ಕಮಿಟಿ ಹಾಗೂ ಹಝರತ್ ರಾಜಾ ಬಾಗ್ ಸವಾರ್ ದರ್ಗಾ ಕಮಿಟಿಯ ಆಡಳಿತ ಅವಧಿ ಮುಗಿದಿದ್ದು. ಹೆಚ್ಚುವರಿ ಅವಧಿ ವಿಸ್ತರಣೆಗೆ ತಡೆಹಿಡಿದು ಚುನಾವಣೆ ನಡೆಸಲು ಒತ್ತಾಯಿಸಿದ್ದಾರೆ.
ಹೊಸಪೇಟೆ ರಸ್ತೆಯಲ್ಲಿರುವ ಮೌಲಾನಾ ಅಜಾದ್ ಭವನದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಮುಸ್ಲಿಂ ಖಿದ್ಮತೇ ಖಲ್ಕ್ ವತಿಯಿಂದ ಸಲ್ಲಿಸಿದ ಮನವಿಯಲ್ಲಿ ಈಗಾಗಲೇ ಕೊಪ್ಪಳ ಜಿಲ್ಲೆಯ ಕೊಪ್ಪಳ ನಗರದ ವಕ್ಫ್ ಸಂಸ್ಥೆಯಡಿಯ ಹಝರತ್ ಮರ್ದಾನೆ ಗೈಬ್ ದರ್ಗಾ ಕಮಿಟಿ ಹಾಗೂ ಹಝರತ್ ರಾಜಾ ಬಾಗ್ ಸವಾರ್ ದರ್ಗಾ ಕಮಿಟಿಗಳ ಹಳೆಯ ಪದಾಧಿಕಾರಿಗಳ ಅವಧಿ ಪೂರ್ಣಗೊಂಡಿರುತ್ತದೆ ಕಮೀಟಿಗಳ ಬೈಲಾ ನಿಯಾಮಾವಳಿಗಳ ಪ್ರಕಾರ ಹೊಸ ಕಮಿಟಿ ರಚನೆ ಮಾಡಲು ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಸ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ.
ದಿ:28-6-2024 ಶುಕ್ರವಾರ ದಿನದಂದು ನಗರದ ಎಲ್ಲಾ ಮಸೀದಿಗಳಲ್ಲಿ ಪ್ರಕಟಣೆ ನೀಡಿ, ನಗರದ ಎಲ್ಲಾ ಪಂಚ್ ಕಮೀಟಿಯ ಅಧ್ಯಕ್ಷರು, ಉಪಾಧ್ಯಕ್ಷರು, ಮತ್ತು ಸರ್ವ ಸದಸ್ಯರು ಹಾಗೂ ಸಮುದಾಯದ ಜನರು ಸಭೆ ಸೇರಿ ಸಭೆಯಲ್ಲಿ ಸೇರಿದ ಎಲ್ಲರೂ ಸರ್ವಾನುಮತದಿಂದ ಕಮೀಟಿಗಳ ಬೈಲಾ ನಿಯಾಮಾವಳಿಗಳ ಪ್ರಕಾರ ಹೊಸ ಕಮಿಟಿ ರಚನೆ ಮಾಡಬೇಕೆಂದು ನಿರ್ಣಯ ತೆಗೆದುಕೊಂಡಿದ್ದಾರೆ.ತಮ್ಮ ಗಮನದಲ್ಲಿರುವಂತೆ ವಕ್ಫ್ ಕಮಿಟಿಯ ನಿಯಮಾವಳಿ (ಬೈಲಾದ) ಚಾಪ್ಟರ್ 6 ವಿಭಾಗ E ನಲ್ಲಿ ತೋರಿಸಿದಂತೆ ಹಳೆಯ ಕಮಿಟಿಯ ಅವಧಿ ಪೂರ್ಣಗೊಳ್ಳುವದಕ್ಕಿಂತ ಎರಡು ತಿಂಗಳ ಮುಂಚೆ ಸಾಮಾನ್ಯ ಸಭೆ ಕರೆದು ಎಲ್ಲಾ ಮಸೀದಿಗಳಲ್ಲಿ ಪ್ರಕಟಣೆ ನೀಡಿ ಪ್ರಚುರಪಡಿಸಿ ಸರ್ವಾನುಮತ ದಿಂದ ಹೊಸ ಕಮಿಟಿ ರಚನೆ ಮಾಡಬೇಕು. ಇಲ್ಲದಿದ್ದಲ್ಲಿ ಸೆಕ್ಷನ್ 61 ಮತ್ತು 64ರ ಪ್ರಕಾರ ದುಷ್ಕೃತ್ಯ ಮತ್ತು ಮಂಡಳಿಯ ದುರ್ನಡತೆಯಾಗಿರುತ್ತದೆ ಅಲ್ಲದೆ ಅವರು ಶಿಕ್ಷಾರ್ಹರಾಗಿರುತ್ತಾರೆ. ಹೀಗಾಗಿ ತಾವುಗಳು ಸಮುದಾಯದ ಹಿತ ದೃಷ್ಟಿಯಿಂದ ಹಾಗೂ ನಿಯಮಾವಳಿ ಪ್ರಕಾರ ಎರಡು ಸಂಸ್ಥೆಗಳಿಗೆ ಹೊಸ ಕಮಿಟಿ ರಚನೆ ಮಾಡಲು ಅನುಮತಿ ನೀಡಬೇಕು ಇಲ್ಲವೆ ಚುನಾವಣೆ ನಡೆಸಿ ಎಂದು ಅಬ್ದುಲ್ ಖಯ್ಯೂಮ್ ಬಳ್ಳಾರಿ. ನಿಝಾಮುದ್ದೀನ್ ಮಾಳೆಕೊಪ್ಪ. ಸಲಿಮ್ ಖಾದ್ರಿ. ಸೈಯ್ಯದ್ ಖಾಜಾ ಕಿಲ್ಲೆದ್ದಾರ. ಆಸೀಫ್ ಗದಗ ಮುಂತಾದವರ ನೇತೃತ್ವದಲ್ಲಿ ಕೋರಿದ್ದಾರೆ. ವರದಿ :- ಎಸ್.ಎ.ಗಫೂರ್