ಕೂಡ್ಲಿಗಿ: ಮೌಲಾರವರ ನೇತೃತ್ವದಲ್ಲಿ ನಿರ್ಗತಿಕರಿಗೆ ತರಕಾರಿ ಕಿಟ್ ವಿತರಣೆ–
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಮಹಾಮಾರಿ ಕೊರೊನಾದ ಹಾವಳಿ ಹೆಚ್ಚಾಗಿರುವುದರಿಂದ,ಪಟ್ಟಣ ಕಂಪ್ಲೀಟ್ ಬಂದ್ ಆಗಿರುವುದರಿಂದ ಊರಿನ ಜನತೆಗೆ ಕೋರೋನಾದ ಬಗ್ಗೆ ಜಾಗ್ರತೆ ವಹಿಸಿ, ಮನೆಯಲ್ಲಿಯೇ ಇರುವಂತೆ ಎಲ್ಲರನ್ನೂ ಜಾಗೃತಗೊಳಿಸಲಾಯಿತು. ಮುತವಲ್ಲಿ ಬಾಷ ಸಾಬ್ ಮತ್ತು ಕಾರ್ಯದರ್ಶಿ ಅಬ್ದುಲ್ ಮನ್ನಾನ್ ಮಾತನಾಡಿ, ಈ ಮಹಾಮಾರಿ ಕೋರೋನ ದ ಬಗ್ಗೆ ಹೆಚ್ಚಿಗೆ ಜಾಗ್ರತೆಯಿಂದ ಇರಲು ಮತ್ತು ಸ್ವಚ್ಚತೆ ಕಾಪಾಡಲು ಮನವಿ ಮಾಡಿದರು. ಮೌಲಾನ ಮಕ್ಬೂಲ್ ಸಾಬ್ ಮಾತನಾಡಿ ಇಸ್ಲಾಂ ಎಂದರೆ 1 ಅಲ್ಲಾಹನ ಪ್ರಾರ್ಥನೆ, ಎರಡನೆಯದು ಬಡವರ ಬಗ್ಗೆ ಕಾಳಜಿ ವಹಿಸುವುದು ಎಂದು ಅವರು ಉಪದೇಶಿಸಿದರು. ಈ (ಹದೀಸ್) ವಾಕ್ಯಗಳ ಪ್ರೇರಣೆಯಿಂದ ಮೇ21ರಂದು ಶುಕ್ರವಾರ ಮಸ್ಜೀದ್ ರಹೆಮಾನಿಯ ಆಜಾದ್ ನಗರ.ಉಸ್ಮಾನಿಯ ವೆಲ್ಫೇರ್ ಅಸೋಸಿಯೇಶನ್ ಮತ್ತು ಸಲಾತ್ ಕಮಿಟಿ ಅಜಾದ್ ನಗರ ಕೂಡ್ಲಿಗಿ ವತಿಯಿಂದ.ಕೂಡ್ಲಿಗಿ ಪಟ್ಟಣದ ಜನತೆಗೆ ಉಚಿತವಾಗಿ 150 ಕ್ಕೂ ಹೆಚ್ಚು ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು. ಈ ಕಿಟ್ ನಲ್ಲಿ ಟೊಮೆಟೊ, ಮೆಣಸಿನ ಕಾಯಿ,ಜವಳೆಕಾಯಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಬೀಟ್‌ರೂಟ್ಸ್ ಇತರೆ ಒಟ್ಟು 8KG ತೂಕದ ತರಕಾರಿ ಕಿಟ್ ನ್ನು ಹಂಚಲಾಯಿತು. ಈ ಸಮಯದಲ್ಲಿ ಮಸೀದಿಯ ಮುತುವಲ್ಲಿ ರಾದ ಎ.ಎಂ. ಬಾಷಾಸಾಬ್, ಕಾರ್ಯದರ್ಶಿಯಾದ ಅಬ್ದುಲ್ ಮನ್ನಾನ್, ಮೌಲಾನ ಮಕ್ಬೂಲ್ ಸಾಬ್, ಎ.ಎಮ್.ಭಾಷಾಸಾಬ್ ಹಾಗೂ ಕಮಿಟಿಯ ಸದಸ್ಯರು ಉಪಸ್ಥಿತಿರಿದ್ದರು.
ವರದಿ – ಅಣ್ಣಪ್ಪ ಚಲುವಾದಿ