ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರ ಬಾವೈಕ್ಯಧ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಸೌಹಾರ್ದತೆಯಿಂದ ಆಚರಣೆ ಮಾಡಬೇಕೆಂದು ತಾವರಗೇರಾ ಪೋಲಿಸ್ ಠಾಣೆಯ ಪಿ ಎಸ್ ಐ ಮಲ್ಲಪ್ಪ ವಜ್ರದ ಹೇಳಿದರು. ಜುಮಲಾಪೂರ ಗ್ರಾಮದ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಬೆಯಲ್ಲಿ ಮಾತನಾಡಿ ಈ ಗ್ರಾಮದಲ್ಲಿ ಈ ಹಬ್ಬವನ್ನು ಎಲ್ಲಾ ಧರ್ಮದವರು ಸೇರಿಕೊಂಡು ಶಾಂತಿಯುತವಾಗಿ ಆಚರಣೆ ಮಾಡುತ್ತಾ ಬರುತ್ತಿದ್ದು ಈ ವರ್ಷವೂ ಕೂಡ ಶಾಂತಿಯುತವಾಗಿ ಆಚರಣೆ ಮಾಡಬೇಕು. ಯಾರಾದರೂ ಶಾಂತಿ ಕದಡಲು ಬಂದರೆ ಅವರ ವಿರುಧ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು, ತಮ್ಮ ತಮ್ಮ ಹಬ್ಬವನ್ನು ಅವರವರ ಸಂಪ್ರದಾಯದಂತೆ ಆಚರಣೆ ಮಾಡುತ್ತಾರೆ ನಾವೆಲ್ಲರೂ ಎಲ್ಲಾ ಧರ್ಮಗಳ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಸಮಾಜದಲ್ಲಿ ಕೋಮುಗಲಭೆ ಕೋಮುಭಾವನೆ ಕೆರಳಿಸುವ ಕೆಲಸ ಮಾಡಿದವರ ಮೇಲೆ ಸೂಕ್ತ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜುಮಲಾಪೂರ ಗ್ರಾಮದ ಹಿರಿಯರಾದ ದೊಡ್ಡನಗೌಡ ಮಳೆಗೌಡ್ರು. ಶಂಕ್ರಪ್ಪ ನಾಯಕ ನಿಂಗಪ್ಪ ನಾಯಕ.ಹನುಮಂತ ಓಲೇಕಾರ. ಸುಬಾಷರೆಡ್ಡಿ ಹುಲಗೆರಿ. ಬಾಳಪ್ಪ ನಾಯಕ. ತಿಪ್ಪಣ್ಣ ಮಡ್ಡೇರ. ನಾಗರಾಜ ದಂಡಿನ್. ಮುಸ್ಲಿಂ ಸಮುದಾಯದ ಹಿರಿಯರಾದ ಹುಸೇನ್ ಸಾಬ್ ಡಾವಣಗೇರ. ಕಾದರಸಾಬ ಅಂಗಡಿ. ಹುಸೇನ್ ಸಾಬ್. ಬಾಷಾ ಸಾಬ್. ರಾಜಾಸಾಬ್. ಉಪಸ್ಥಿತರಿದ್ದರು.
ವರದಿ :- ಅಮಾಜಪ್ಪ ಜುಮಲಾಪುರ ಪತ್ರಕರ್ತರು.