ಕೊಪ್ಪಳ: ಕರ್ನಾಟಕ ರಾಜ್ಯ ಸುನ್ನೀ ಸ್ಪೂಡೆಂಟ್ಸ್ ಫೆಡರೇಷನ್ (ಎಸ್.ಎಸ್.ಎಫ್) ವತಿಯಿಂದ ಆಗಸ್ಟ್ 24.25 ತಾರೀಖು ಗಳಲ್ಲಿ ಮೈಸೂರಿನಲ್ಲಿ ನಡೆಯಲಿರುವ ಕ್ಯಾಂಪಸ್ ಕಾನ್ಸರೆನ್ಸ್ ಕಾರ್ಯಕ್ರಮದ ಪ್ರಚಾರ ಪ್ರಯುಕ್ತ ಎಸ್ಸೆಸ್ಸೆಫ್ ರಾಜ್ಯ ನಾಯಕರ ತಂಡ ರವಿವಾರ ಕೊಪ್ಪಳಕ್ಕೆ ಆಗಮಿಸಿದೆ ಎಂದು ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ರಾಜ್ಯಾಧ್ಯಕ್ಷ ಹಾಫಿಝ್ ಮೊಹಮ್ಮದ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಮೂವತ್ತು ಜಿಲ್ಲೆಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೈತಿಕ ಹಾಗೂ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಸಲುವಾಗಿ ಹಮ್ಮಿಕೊಂಡ ಕ್ಯಾಂಪಸ್ ಕನೆಕ್ಟ್ ಯಾತ್ರೆ ಜುಲೈ 5ರಂದು ಕಲಬುರಿಗಿಯಿಂದ ಆರಂಭಗೊಂಡು ಆಗಸ್ಟ್ 4 ರಂದು ಚಾಮರಾಜನಗರದಲ್ಲಿ ಸಮಾರೋಪಗೊಳ್ಳಲಿದೆ.
ಕಲುಷಿತಗೊಂಡ ವಾತಾವರಣದಲ್ಲಿ ಬದುಕುತ್ತಿರುವ ಬಹಳಷ್ಟು ವಿದ್ಯಾರ್ಥಿಗಳ ಬದುಕು ಬರ್ಬರಗೊಳ್ಳುತ್ತಿದ್ದು. ಬಹುತೇಕ ಮಕ್ಕಳು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ನೂರು ಕೇಂದ್ರಗಳಲ್ಲಿ ಡ್ರಗ್ಸ್ ವಿರುದ್ಧ ವಿದ್ಯಾರ್ಥಿಗಳ ವಾಕ ಥಾನ್ ನಡೆಯಲಿದ್ದು. ಸಾವಿರಾರು ವಿದ್ಯಾರ್ಥಿಗಳು ಡ್ರಗ್ಸ್ ವಿರುದ್ಧ ಪ್ರತಿಜ್ಞೆ ಮಾಡಲಿದ್ದಾರೆ ಎಂದು ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ರಾಜ್ಯಾಧ್ಯಕ್ಷ ಹಾಫಿಝ್ ಮೊಹಮ್ಮದ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ವಿವರಿಸಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್) ರಾಜ್ಯ ಕಾರ್ಯದರ್ಶಿ ಅನ್ವರ್ ಅಸ್‌ಅದಿ ಹಾಸನ.ಕ್ಯಾಂಪಸ್ ಕಾರ್ಯದರ್ಶಿ ಉಬೈದ್ ಮಂಗಳೂರು. ರಾಜ್ಯ ಕಾರ್ಯದರ್ಶಿ ಅಶ್ರಫ್ ಸಖಾಫಿ ಹರಿಹರ. ರಾಜ್ಯ ಮೀಡಿಯಾ ಕಾರ್ಯದರ್ಶಿ ಇರ್ಶಾದ್ ಹಾಜಿ ಬಂಟ್ವಾಳ. ರಾಜ್ಯ ಸದಸ್ಯ ಶರೀಫ್ ಚಿಕ್ಕಮಗಳೂರು. ರಾಜ್ಯ ಸಮಿತಿ ಸದಸ್ಯ ಸಲೀಮ್ ಅಳವಂಡಿ ಮುಂತಾದವರು ಉಪಸ್ಥಿತರಿದ್ದರು.
ವಿಶೇಷ ವರದಿ :- ಎಸ್.ಎ.ಗಫೂರ್